»   » ಪುನೀತ್ ರಾಜ್ ಕುಮಾರ್ ಹೊಸ ಚಿತ್ರದ ಹೆಸರು ಬಹಿರಂಗ

ಪುನೀತ್ ರಾಜ್ ಕುಮಾರ್ ಹೊಸ ಚಿತ್ರದ ಹೆಸರು ಬಹಿರಂಗ

Posted By:
Subscribe to Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೊಸ ಚಿತ್ರ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಈ ಸುದ್ದಿಯನ್ನು ಒನ್ಇಂಡಿಯಾ ಕನ್ನಡ ಈ ಹಿಂದೆಯೇ ಪ್ರಕಟಿಸಿತ್ತು. ಈಗ ಲೇಟೆಸ್ಟ್ ಸುದ್ದಿ ಏನೆಂದರೆ ಪುನೀತ್ ಹೊಸ ಚಿತ್ರದ ಶೀರ್ಷಿಕೆ ಬಹಿರಂಗವಾಗಿರುವುದು.

ಕರ್ನಾಟಕ ಮೂಲದ ತೆಲುಗು ನಿರ್ದೇಶಕ ಜಯಂತ್ ಸಿ ಪರಂಜಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ 'ನಿನ್ನಿಂದಲೇ' ಎಂದು ಹೆಸರಿಡಲಾಗಿದೆ. ಆದರೆ ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ಮಿಲನ ಚಿತ್ರದ ಜನಪ್ರಿಯ ಗೀತೆ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ...ಈ ಗೀತೆಯೇ ಚಿತ್ರದ ಶೀರ್ಷಿಕೆಗೆ ಸ್ಫೂರ್ತಿಯಾಗಿದೆ. ಜಯಂತ್ ಕಾಯ್ಕಿಣಿ ಬರೆದಿರುವ ಈ ಗೀತೆಯನ್ನು ಸೋನು ನಿಗಮ್ ಇಂಪಾಗಿ ಹಾಡಿದ್ದಾರೆ.

ಪುನೀತ್ ನಾಯಕ ನಟನಾಗಿ ಅಭಿನಯಿಸುತ್ತಿರುವ 20ನೇ ಚಿತ್ರ ಇದಾಗಿದೆ. ಅವರ 37ನೇ ಹುಟ್ಟುಹಬ್ಬದ ದಿನ ಅಂದರೆ ಮಾರ್ಚ್ 17ರಂದು ಚಿತ್ರ ಸೆಟ್ಟೇರಲಿದೆ. ಚಿತ್ರೀಕರಣ ಮೇ ತಿಂಗಳಿಂದ ಆರಂಭವಾಲಿದೆ.

'ಯಾರೇ ಕೂಗಾಡಲಿ' ಚಿತ್ರದ ಬಳಿಕ ಪುನೀತ್ ಯಾವ ಚಿತ್ರಕ್ಕೂ ಸಹಿಹಾಕಿರಲಿಲ್ಲ. ನಿನ್ನಿಂದಲೇ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ. ಅಂದಹಾಗೆ ಜಯಂತ್ ಅವರು ತೆಲುಗಿನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ.

ಪ್ರೇಮಿಂಚುಕುಂದಾಂ ರಾ, ಟಕ್ಕರಿ ದೊಂಗ, ಲಕ್ಷ್ಮಿ ನರಸಿಂಹ, ತೀನ್ ಮಾರ್ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರ ನಿರ್ದೇಶಿಸುತ್ತಿರುವುದು. (ಏಜೆನ್ಸೀಸ್)

English summary
Power Star Puneet Rajkumar's new film titled as 'Ninnidale'. The title picked from Melodious song Ninnindale Ninnidale sung by Sonu Nigam from the Kannada Movie Milana (2007). The film will be directed by a Karnataka-born Telugu director. Jayant C Paranji, who has worked with some of the big names in Telugu film industry. 
Please Wait while comments are loading...