»   » ಸಂತೋಷ್ ಪುನೀತ್ ಕಾಂಬಿನೇಶನ್ ಸಿನಿಮಾಗೆ ಸಜ್ಜಾಯ್ತು ವೇದಿಕೆ

ಸಂತೋಷ್ ಪುನೀತ್ ಕಾಂಬಿನೇಶನ್ ಸಿನಿಮಾಗೆ ಸಜ್ಜಾಯ್ತು ವೇದಿಕೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ ಸಿನಿಮಾ ಸೆಟ್ಟೇರಲು ತಯಾರಾಗಿದೆ. ರಾಜಕುಮಾರ ಚಿತ್ರವನ್ನ ಪ್ರೇಕ್ಷಕರಿಗೆ ನೀಡಿದ್ದ ಈ ಜೋಡಿ ಒಟ್ಟಿಗೆ ಮಾಡುತ್ತಿರುವ ಚಿತ್ರ ಇನ್ನ ಕೆಲವೇ ತಿಂಗಳಲ್ಲಿ ಸೆಟ್ಟೇರಲಿದೆ.

ಮಾರ್ಚ್ 17 ರಂದು ಪವರ್ ಸ್ಟಾರ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಸುದ್ದಿ ಹಬ್ಬಿದೆ. ಪುನೀತ್ ಸದ್ಯ ರಿಯಾಲಿಟಿ ಶೋನಲ್ಲಿ ಬ್ಯುಸಿ ಆಗಿದ್ದಾರೆ. ಅದಕ್ಕೂ ಮುಂಚೆ ಅಪ್ಪು ಕೃಷ್ಣ ಲೀಲಾ ಸಿನಿಮಾ ಖ್ಯಾತಿಯ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ನಲ್ಲಿ ಅಭಿನಯ ಮಾಡಲಿದ್ದಾರೆ.

Puneet Rajkumar and Santosh Anand Ram Combination will be announced in March

ಹೊಸ ವರ್ಷಕ್ಕೆ ಪುನೀತ್ ರಾಜ್ ಕುಮಾರ್ ರೆಸಲ್ಯೂಶನ್ ಏನು?

ಎಲ್ಲರಿಗೂ ತಿಳಿದಿರುವಂತೆ ನಿರ್ದೇಶಕ ಸಂತೋಷ್ ಪ್ರತಿ ಸಿನಿಮಾ ನಿರ್ದೇಶನ ಮಾಡುವ ಮುಂಚೆ ಪ್ರೀ ಪ್ರೊಡಕ್ಷನ್ ಗಾಗಿ ಕೆಲವು ತಿಂಗಳು ಮೀಸಲಿಡುತ್ತಾರೆ. ಈ ಚಿತ್ರದ ಸ್ಕ್ರಿಪ್ಟ್ ಗಾಗಿಯೂ ಆರು ತಿಂಗಳು ಕೆಲಸ ಮಾಡಿದ ನಂತರ ಚಿತ್ರೀಕರಣ ಶುರು ಮಾಡಲಿದ್ದಾರೆ ಸಂತೋಷ್ ಮತ್ತು ತಂಡ.

Puneet Rajkumar and Santosh Anand Ram Combination will be announced in March

'ಅಂಜನಿಪುತ್ರ' ಸಿನಿಮಾದ ನಂತರ ಅಪ್ಪು ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಕೆಲವು ಮೂಲಗಳ ಪ್ರಕಾರ ಮೊದಲಿಗೆ ಶಶಾಂಕ್ ಅವರ ಸಿನಿಮಾದಲ್ಲಿ ಅಭಿನಯಿಸಿ ನಂತರ ಹೊಂಬಾಳೆ ನಿರ್ಮಾಣದ ಚಿತ್ರದಲ್ಲಿ ಭಾಗಿ ಆಗಲಿದ್ದಾರಂತೆ. ಸದ್ಯದ ಸುದ್ದಿಯ ಪ್ರಕಾರ ಅಪ್ಪು ಅಭಿನಯದ ಶಶಾಂಕ್ ನಿರ್ದೆಶನದ ಸಿನಿಮಾ ಸಂಕ್ರಾಂತಿ ಹಬ್ಬದಂದು ಸೆಟ್ಟೇರಲಿದೆ ಅಂತೆ.

English summary
Actor Puneet Rajkumar and Santosh Anand Ram Combination will be announced in March. before that puneeth acting in director shashank movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X