»   » ಮತ್ತೊಮ್ಮೆ ಅಪ್ಪುಗೆ ಆಕ್ಷನ್ ಕಟ್ : ರಾಜಮಾರ್ಗದಲ್ಲಿ ಸಂತೋಷ್ ಆನಂದ್ ರಾಮ್

ಮತ್ತೊಮ್ಮೆ ಅಪ್ಪುಗೆ ಆಕ್ಷನ್ ಕಟ್ : ರಾಜಮಾರ್ಗದಲ್ಲಿ ಸಂತೋಷ್ ಆನಂದ್ ರಾಮ್

Posted By:
Subscribe to Filmibeat Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಅಂತು ಉತ್ತರ ಸಿಕ್ಕಿದೆ. ಸಂತೋಷ್ ತಮ್ಮ ಮುಂದಿನ ಸಿನಿಮಾವನ್ನು ಮತ್ತೆ ನಟ ಪುನೀತ್ ರಾಜ್ ಕುಮಾರ್ ಜೊತೆ ಮಾಡಲಿದ್ದಾರೆ.

ಕನ್ನಡದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ 'ರಾಜಕುಮಾರ'!

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಸಿನಿಮಾ ಮಾಡಿದ್ದ ಸಂತೋಷ್ ಆನಂದ್ ರಾಮ್ ಈಗ ಹ್ಯಾಟ್ರಿಕ್ ಬಾರಿಸುವುದಕ್ಕೆ ಸಜ್ಜಾಗಿದ್ದಾರೆ. ಎರಡು ಸಿನಿಮಾಗಳಲ್ಲಿ ಸೂಪರ್ ಹಿಟ್ ಯಶಸ್ಸು ಕಂಡಿದ್ದ ಸಂತೋಷ್ ಈಗ ಅದೇ ಉತ್ಸಾಹದಲ್ಲಿ ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶೇಷ ಅಂದರೆ ಮತ್ತೆ ಪುನೀತ್ ರಾಜ್ ಕುಮಾರ್ ಜೊತೆಗೆ ಸಂತೋಷ್ ಆನಂದ್ ರಾಮ್ ಕೆಲಸ ಮಾಡಲಿದ್ದಾರೆ.

Puneeth and Santhosh Ananddram together for there next movie

ಈ ಹಿಂದೆ ಸಂತೋಷ್ ನಟ ಶಿವರಾಜ್ ಕುಮಾರ್ ಗೆ 'ರಣರಂಗ' ಎಂಬ ಸಿನಿಮಾವನ್ನು ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಮತ್ತೆ ಪುನೀತ್ ಜೊತೆ ಸಿನಿಮಾ ಮಾಡುವುದಕ್ಕೆ ಸಂತೋಷ್ ಹೊರಟಿದ್ದಾರೆ. 'ರಾಜಕುಮಾರ' ಚಿತ್ರಕ್ಕೆ ಬಂಡವಾಳ ಹಾಕಿದ್ದ ಹೊಂಬಾಳೆ ಫಿಲ್ಮ್ಸ್ ನಲ್ಲಿಯೇ ಈ ಸಿನಿಮಾ ಕೂಡ ನಿರ್ಮಾಣ ಆಗಲಿದೆ.

ಸದ್ಯಕ್ಕೆ ಸಿನಿಮಾ ಮಾಡುವ ಬಗ್ಗೆ ಸಂತೋಷ್ ತಮ್ಮ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಅಭಿಮಾನದಿಂದ ಅಭಿಮಾನಕ್ಕಾಗಿ ಮತ್ತೊಂದು ಪಯಣ'' ಎಂದು ಪುನೀತ್ ರಾಜ್ ಕುಮಾರ್ ಜೊತೆ ಇರುವ ಫೋಟೋವನ್ನು ಹಾಕಿದ್ದಾರೆ. ಸದ್ಯಕ್ಕೆ ಚಿತ್ರ ಮಾಡುವ ವಿಷಯ ಹೇಳಿರುವ ಸಂತೋಷ್ ಆ ಚಿತ್ರ ಯಾವಗ ಶುರು ಎಂಬುದನ್ನು ಇನ್ನು ಬಹಿರಂಗ ಪಡಿಸಿಲ್ಲ.

English summary
After 'Raajakumara' Actor Puneeth Rajkumar and director Santhosh Ananddram again together for next movie. The movie will producing by Hombale Films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X