For Quick Alerts
  ALLOW NOTIFICATIONS  
  For Daily Alerts

  ಸೂರಿ, ಪುನೀತ್ ಸಂಗಮದ 'ದೊಡ್ಮನೆ ಹುಡುಗ' ಶುರು

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಒಂದು ಸುಂದರ ಕೌಟುಂಬಿಕ ಕಥಾವಸ್ತುವಿನ ನಿರೀಕ್ಷೆಯಲ್ಲಿದ್ದಾರೆ. ಅವರ 'ನಿನ್ನಿಂದಲೇ' ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಅಭಿಮಾನಿಗಳನ್ನು ತಲುಪಲಿಲ್ಲ. ಈಗ ಅವರಿಗೆ ಬ್ರೇಕ್ ಬೇಕೇ ಬೇಕು.

  ಇನ್ನೊಂದು ಕಡೆ ದುನಿಯಾ ಸೂರಿ ಸಹ ಬ್ರೇಕ್ ಗಾಗಿ ಹಪಹಪಿಸುತ್ತಿದ್ದಾರೆ. ಹಸಿದ ಎರಡು ಹೆಬ್ಬುಲಿಗಳು ಒಂದಾರೆ ಹೇಗಿರುತ್ತದೋ ಆ ರೀತಿ ಕಾಣುತ್ತಿದೆ ಪುನೀತ್ ಹಾಗೂ ಸೂರಿ ಸಂಗಮ. 'ಕಡ್ಡಿಪುಡಿ' ಚಿತ್ರದ ಬಳಿಕ ದುನಿಯಾ ಸೂರಿ ಸಹ ತಮ್ಮ ಟ್ರ್ಯಾಕ್ ಬದಲಾಯಿಸಿದಂತೆ.

  ಈ ಬಾರಿ ಅವರು ಮಚ್ಚು, ಲಾಂಗು, ಭೂಗತಜಗತ್ತಿನ ಸಬ್ಜೆಕ್ಟ್ ನಿಂದ ಹೊರಬಂದಂತಿದೆ. ಪಕ್ಕಾ ಫ್ಯಾಮಿಲಿ ಡ್ರಾಮಾ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನು ಪುನೀತ್ ಅಭಿಮಾನಿಗಳು ಅಷ್ಟೇ ಇನ್ನೂ 'ಮಿಲನ' ಗುಂಗಿನಿಂದ ಹೊರಬಂದಿಲ್ಲ.

  ಪ್ರೇಕ್ಷಕರು ಹಸಿದ ಹೆಬ್ಬುಲಿಗಳಂತಾಗಿದ್ದಾರೆ

  ಪ್ರೇಕ್ಷಕರು ಹಸಿದ ಹೆಬ್ಬುಲಿಗಳಂತಾಗಿದ್ದಾರೆ

  ಇತ್ತೀಚೆಗೆ ಗಾಂಧಿನಗರಲ್ಲೂ ಮನೆಮಂದಿಯಲ್ಲಾ ಕುಳಿತು ನೋಡುವಂತಹ ಚಿತ್ರಗಳು ಹೆಚ್ಚಾಗಿ ಬರುತ್ತಿಲ್ಲ. ಒಟ್ಟಾರೆಯಾಗಿ ಹೇಳಬೇಕು ಎಂದರೆ ಪ್ರೇಕ್ಷಕರು ಹಸಿದ ಹೆಬ್ಬುಲಿಗಳಂತಾಗಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲೇ ಸೂರಿ ಭರ್ಜರಿ ಕಥೆ ಕೈಗೆತ್ತಿಕೊಂಡಿದ್ದಾರೆ.

  ದೊಡ್ಮನೆ ಹುಡುಗನ ಹಾಡುಗಳ ರೆಕಾರ್ಡಿಂಗ್

  ದೊಡ್ಮನೆ ಹುಡುಗನ ಹಾಡುಗಳ ರೆಕಾರ್ಡಿಂಗ್

  ಅಣ್ಣಾವ್ರ ಹುಟ್ಟುಹಬ್ಬದ ದಿನ ದೊಡ್ಮನೆ ಹುಡುಗನ ಹಾಡುಗಳ ರೆಕಾರ್ಡಿಂಗ್ ಗೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸೂರಿ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  ಎಂ ಗೋವಿಂದು ನಿರ್ಮಾಣದ ಚಿತ್ರ

  ಎಂ ಗೋವಿಂದು ನಿರ್ಮಾಣದ ಚಿತ್ರ

  ಈ ಹಿಂದೆ 'ವಿಷ್ಣುಸೇನೆ' ಹಾಗೂ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನು ನಿರ್ಮಿಸಿದ್ದ ಎಂ ಗೋವಿಂದು ಈ ಬಾರಿ 'ದೊಡ್ಮನೆ ಹುಡುಗ' ನಿರ್ಮಾಪಕರು.

  ಸದ್ಯಕ್ಕೆ ರಣ ವಿಕ್ರಮ ಚಿತ್ರದಲ್ಲಿ ಪುನೀತ್ ಬಿಜಿ

  ಸದ್ಯಕ್ಕೆ ರಣ ವಿಕ್ರಮ ಚಿತ್ರದಲ್ಲಿ ಪುನೀತ್ ಬಿಜಿ

  ಪುನೀತ್ ಜೊತೆಗಿನ ಪವನ್ ಒಡೆಯರ್ ಅವರ 'ರಣ ವಿಕ್ರಮ' ಚಿತ್ರ ಮುಗಿಯಬೇಕಿದೆ. ಈ ಚಿತ್ರವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ. ಅದಾದ ಬಳಿಕ ದೊಡ್ಮನೆ ಹುಡುಗನ ಚಿತ್ರೀಕರಣ ಶುರು.

  ಭರ್ಜರಿ ಬ್ರೇಕ್ ನಿರೀಕ್ಷೆಯಲ್ಲಿ ಜೋಡಿ

  ಭರ್ಜರಿ ಬ್ರೇಕ್ ನಿರೀಕ್ಷೆಯಲ್ಲಿ ಜೋಡಿ

  ಒಟ್ಟಾರೆಯಾಗಿ ದುನಿಯಾ ಸೂರಿ ಡೈರೆಕ್ಷನ್, ಪುನೀತ್ ಹೀರೋ ಎಂದರೆ ನಿರೀಕ್ಷೆಗಳು ಡಬಲ್. ಇಬ್ಬರೂ ಒಂದು ಭರ್ಜರಿ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ.

  English summary
  Power Star Puneeth Rajkumar and Duniya Soori combination upcoming Kannada movie Dodmane Huduga audio recording starts on 24th April on ocassion of Dr. Rajkumar birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X