For Quick Alerts
  ALLOW NOTIFICATIONS  
  For Daily Alerts

  'ನಟ ಸಾರ್ವಭೌಮ' ಕಾರ್ಯಕ್ರಮ ಪ್ರಸಾರ ಸಮಯದ ಬಗ್ಗೆ ಅಭಿಮಾನಿಗಳಿಗೆ ಬೇಸರ

  |
  ನಟಸಾರ್ವಭೌಮ'ನ ಮೇಲೆ ಬೇಸರಗೊಂಡ ಅಭಿಮಾನಿಗಳು..! | FILMIBEAT KANNADA

  'ನಟ ಸಾರ್ವಭೌಮ' ಸಿನಿಮಾ ಆಡಿಯೋ ಬಿಡುಗಡೆಯ ಕಾರ್ಯಕ್ರಮ ಇತ್ತೀಚಿಗಷ್ಟೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಈ ಕಾರ್ಯಕ್ರಮ ಪ್ರಸಾರ ಇದೇ ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ಆಗುತ್ತಿದೆ. ಆದರೆ, ಪುನೀತ್ ಅಭಿಮಾನಿಗಳು ಕಾರ್ಯಕ್ರಮದ ಪ್ರಸಾರದ ಸಮಯದ ಬಗ್ಗೆ ಬೇಸರಗೊಂಡಿದ್ದಾರೆ.

  ಫೋಟೋಗಳು : ಅಪ್ಪುಗೆ ಆಶೀರ್ವಾದ ಮಾಡಿದ ಹುಬ್ಬಳ್ಳಿ ಮಂದಿ

  ಸಂಕ್ರಾತಿ ಹಬ್ಬದ ವಿಶೇಷ ಇದೇ ಭಾನುವಾರ ಮಧ್ಯಾಹ್ನ 2 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಕಾರ್ಯಕ್ರಮದ ಪ್ರೋಮೋ ಜೀ ಕನ್ನಡ ವಾಹಿನಿ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದೆ. ಆದರೆ, ಕಾರ್ಯಕ್ರಮ ಪ್ರಸಾರದ ಸಮಯದ ಬಗ್ಗೆ ಅಪ್ಪು ಅಭಿಮಾನಿಗಳು ಬೇಸರವಾಗಿದ್ದು, ಅದನ್ನು ಬದಲಾಯಿಸಿ ಎಂದು ಮನವಿ ಮಾಡಿದ್ದಾರೆ.

  ಕಾರ್ಯಕ್ರಮವನ್ನು ಭಾನುವಾರ ಮಧ್ಯಾಹ್ನ ಪ್ರಸಾರ ಮಾಡುವ ಬದಲು ಸಂಜೆ ಪ್ರಸಾರ ಮಾಡಿ ಎನ್ನುವುದು ಪುನೀತ್ ಅಭಿಮಾನಿಗಳ ಒತ್ತಾಯವಾಗಿದೆ. ಇದೊಂದು ದೊಡ್ಡ ಸಿನಿಮಾದ ದೊಡ್ಡ ಕಾರ್ಯಕ್ರಮವಾಗಿದ್ದು, ಎಲ್ಲ ಅಭಿಮಾನಿಗಳು ಇದನ್ನು ನೋಡಲು ಅನುಕೂಲ ಆಗುವಂತೆ ಪ್ರಸಾರದ ಸಮಯವನ್ನು ಬದಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

  'ನಟ ಸಾರ್ವಭೌಮ' ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟನೆಯ ಸಿನಿಮಾವಾಗಿದೆ. ಪವನ್ ಒಡೆಯರ್ ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದಾರೆ.

  English summary
  Power Star Puneet Rajkumar's 'Nata Sarwabouma' movie audio launch program telecasting time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X