»   » ಹಾಫ್ ಸೆಂಚುರಿಗೆ ಮುನ್ನವೇ ಪುನೀತ್ ಚಿತ್ರ ಎತ್ತಂಗಡಿ

ಹಾಫ್ ಸೆಂಚುರಿಗೆ ಮುನ್ನವೇ ಪುನೀತ್ ಚಿತ್ರ ಎತ್ತಂಗಡಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಇತ್ತೀಚಿನ ಕೆಲವು ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತಿಲ್ಲ. ಗಳಿಕೆ ಆಧಾರದಲ್ಲಿ ಚಿತ್ರ ಸೋಲದಿದ್ದರೂ ಅವರಿಗಿರುವ ಮಾರ್ಕೆಟ್ ವ್ಯಾಲ್ಯೂ ಲೆಕ್ಕಾಚಾರದಲ್ಲಿ ಅವರ ಚಿತ್ರಗಳು ಹಿನ್ನಡೆ ಅನುಭವಿಸುತ್ತಿರುವುದಂತೂ ನಿಜ.

ಪುನೀತ್ ಅಭಿನಯದ, ಜಯಂತ್ ಪರಾಂಜೆ ನಿರ್ದೇಶನದ 'ನಿನ್ನಿಂದಲೇ' ಚಿತ್ರ ಭಾರೀ ಹೈಪ್ ಹುಟ್ಟು ಹಾಕಿತ್ತು. ಇದೇ ಮೊದಲ ಬಾರಿಗೆ ದಾಖಲೆ ಎನ್ನುವಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಹನ್ನೆರಡು, ಹದಿಮೂರು ಪ್ರದರ್ಶನಗಳು ಕಂಡವು. (ನಿನ್ನಿಂದಲೇ ಚಿತ್ರ ವಿಮರ್ಶೆ)

ಆದರೆ ಈ ಟ್ರೆಂಡ್ ಮುಂದುವರಿದಿದ್ದು ಮೊದಲ ಮೂರು ದಿನ ಮಾತ್ರ. ಬಿಡುಗಡೆ ಸಮಯದಲ್ಲಿ ಇದ್ದ ಕ್ರೇಜ್ ನಂತರದ ದಿನಗಳಲ್ಲಿ ಅಂದರೆ ಬರೀ ಮೂರು ದಿನಗಳಲ್ಲಿ ಕಮ್ಮಿಯಾಯಿತು. ಚಿತ್ರದ ಕಲೆಕ್ಶನ್ ಕೂಡಾ ಕಮ್ಮಿಯಾಗಲಾರಂಭಿಸಿತು.

ಜನವರಿ 16ರಂದು ಬಿಡುಗಡೆಯಾಗಿದ್ದ ನಿನ್ನಿಂದಲೇ ಚಿತ್ರ ಮೊದಲ ವಾರದಲ್ಲೇ ಹಲವಾರು ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿತ್ತು. ಮಲ್ಟಿಪ್ಲೆಕ್ಸ್ ಸೇರಿ ಸುಮಾರು 225 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು.

ಹಾಫ್ ಸೆಂಚಿರಿಗೆ ಮುನ್ನ ನಿನ್ನಿಂದಲೇ ಚಿತ್ರ ಮೈನ್ ಥಿಯೇಟರ್ ನಿಂದ ಎತ್ತಂಗಡಿ. ಮುಂದೆ ಓದಿ..

ನರ್ತಕಿಯಲ್ಲಿ ಬಿಡುಗಡೆಯಾಗಿತ್ತು

ಮೈನ್ ಥಿಯೇಟರ್ ನರ್ತಕಿ ಸೇರಿ ಬೆಂಗಳೂರಿನ ಎಂಬತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ನಿನ್ನಿಂದಲೇ ಚಿತ್ರಕ್ಕೆ ತೆಲುಗು ಮತ್ತು ತಮಿಳು ಚಿತ್ರಗಳೂ ಸೈಡ್ ಬಿಟ್ಟಿದ್ದವು. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಶ್ರಾವಣಿ ಸುಬ್ರಮಣ್ಯ ಚಿತ್ರ ಕೂಡಾ ನಿನ್ನಿಂದಲೇ ಚಿತ್ರಕ್ಕಾಗಿ ಹಲವು ಥಿಯೇಟರುಗಳನ್ನು ಖಾಲಿ ಮಾಡಬೇಕಾಗಿ ಬಂತು.

ನರ್ತಕಿಯಲ್ಲಿ ನಿನ್ನಿಂದಲೇ ಇದೇ ವಾರ ಕೊನೇ ಪ್ರದರ್ಶನ

ಈ ವಾರದಿಂದ ಮೈನ್ ಥಿಯೇಟರ್ ನರ್ತಕಿಯಲ್ಲಿ ನಿನ್ನಿಂದಲೇ ಚಿತ್ರ ಎತ್ತಂಗಡಿಯಾಗಲಿದೆ. ನಾಲ್ಕನೇ ವಾರದಲ್ಲೇ ಚಿತ್ರ ಎತ್ತಂಗಡಿಯಾಗುವ ಸುದ್ದಿಯಿತ್ತು. ಉಪೇಂದ್ರ ಅಭಿಯನಯದ ಬ್ರಹ್ಮ ಚಿತ್ರ ನರ್ತಕಿಯಲ್ಲಿ ಬಿಡುಗಡೆಯಾಗುತ್ತೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. (ಬ್ರಹ್ಮ ಚಿತ್ರ ವಿಮರ್ಶೆ)

ಶ್ರಾವಣಿ ಸುಬ್ರಮಣ್ಯ

ಆದರೆ ಶ್ರಾವಣಿ ಸುಬ್ರಮಣ್ಯ ಚಿತ್ರ ಪ್ರದರ್ಶನ ಕಾಣುತ್ತಿದ್ದ ಸಂತೋಷ್ ಚಿತ್ರ ಮಂದಿರದಲ್ಲಿ ಬ್ರಹ್ಮ ಚಿತ್ರ ಬಿಡುಗಡೆಯಾಗಿ, ಶ್ರಾವಣಿ ಚಿತ್ರ ಪಕ್ಕದ ಮೇನಕ ಚಿತ್ರ ಮಂದಿರಕ್ಕೆ ಶಿಫ್ಟ್ ಆಯಿತು. ಮಂಜು ಸ್ವರಾಜ್ ನಿರ್ದೇಶನದ ಗಣೇಶ್, ಅಮೂಲ್ಯ ಪ್ರಮುಖ ಭೂಮಿಕೆಯಲ್ಲಿದ್ದ ಶ್ರಾವಣಿ ಸುಬ್ರಮಣ್ಯ ಚಿತ್ರ ಈಗಾಗಲೇ ಐವತ್ತು ದಿನ ಪೂರೈಸಿದೆ. (ಶ್ರಾವಣಿ ಸುಬ್ರಮಣ್ಯ ಚಿತ್ರ ವಿಮರ್ಶೆ)

ನಿನ್ನಿಂದಲೇ ಚಿತ್ರಕ್ಕೆ ಕತ್ತರಿ ಪ್ರಯೋಗ

ನಿನ್ನಿಂದಲೇ ಚಿತ್ರ ಸಿಕ್ಕಾಪಟ್ಟೆ ಲೆಂತ್ ಆಯಿತು. ಕೆಲವು ಸನ್ನಿವೇಶಗಳಿಗೆ ಕತ್ತರಿಹಾಕಿದ್ದರೆ ಚೆನ್ನಾಗಿತ್ತು. ದ್ವಿತೀಯಾರ್ಧದಲ್ಲಂತೂ ಅಷ್ಟೆಲ್ಲಾ ಎಳೆದಾಟ ಅಗತ್ಯವಿರಲಿಲ್ಲ ಎಂಬ ಮಾತುಗಳು ಪ್ರೇಕ್ಷಕರ ವರ್ಗದಿಂದ ಕೇಳಿಬಂದಿದ್ದರಿಂದ, ಚಿತ್ರದ ನಿರ್ದೇಶಕ ಜಯಂತ್ ಸಿ ಪರಾಂಜಿ ಚಿತ್ರವನ್ನು 19 ನಿಮಿಷ ಮೊಟಕುಗೊಳಿಸಿದ್ದರು.

ಶ್ರೀಮುರುಳಿ ಅಭಿನಯದ ಉಗ್ರಂ

ಇದೇ ಶುಕ್ರವಾರ (ಜ 21) ದಿಂದ ನರ್ತಕಿಯಲ್ಲಿ ಶ್ರೀಮುರಳಿ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಉಗ್ರಂ ಚಿತ್ರ ಬಿಡುಗಡೆಯಾಗುತ್ತಿದೆ. ಹಾಗಾಗಿ, ಪುನೀತ್ ಚಿತ್ರವೊಂದು ಅರ್ಥ ಶತಕ ಪೊರೈಸದೇ, 36 ದಿನಗಳಲ್ಲೇ ಮೈನ್ ಚಿತ್ರಮಂದಿರದಿಂದ ಖಾಲಿಯಾಗುತ್ತಿದೆ.

ಪುನೀತ್ ಇತ್ತೀಚಿನ ಚಿತ್ರಗಳು

ಹುಡುಗರು ಚಿತ್ರದ ನಂತರ ಬಿಡುಗಡೆಯಾದ ಪರಮಾತ್ಮ, ಅಣ್ಣಾ ಬಾಂಡ್, ಯಾರೇ ಕೂಗಾಡಲಿ ಭಾರೀ ಯಶಸ್ಸನ್ನು ಪಡೆದಿರಲಿಲ್ಲ. ಈಗ ಅದರ ಸಾಲಿಗೆ ನಿನ್ನಿಂದಲೇ ಚಿತ್ರ ಕೂಡಾ ಸೇರಿದೆ.

English summary
Power Star Puneeth Rajkumar Ninnindale movie not completing 50 days in Main theater. Sri Murali starer Ugram movie releasing in Nartaki theater, where Ninnindale movie screening at present.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada