For Quick Alerts
  ALLOW NOTIFICATIONS  
  For Daily Alerts

  ಕರುನಾಡ ಸಂಭ್ರಮ ಕಾರ್ಯಕ್ರಮಕ್ಕಾಗಿ ಎದ್ದು ನಿಂತ 'ಅಪ್ಪು-ಚಿರು' ಬೃಹತ್ ಕಟೌಟ್!

  |

  ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಸಮೀಪ ಡಿಸೆಂಬರ್ 10,11 ಎರಡು ದಿನ ಕರುನಾಡ ಸಂಭ್ರಮ ಕಾರ್ಯಕ್ರಮ ಕಲರ್ ಫುಲ್ ಆಗಿ ನಡೆಯುತ್ತಿದೆ. ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ಈ ಕಾರ್ಯಕ್ರಮ 12ನೇ ವರ್ಷಕ್ಕೆ ಕಾಲಿಟ್ಟಿದ್ದು, ದೊಡ್ಡ ಮಟ್ಟದಲ್ಲಿ ಆರಂಭ ಆಗುತ್ತಿದೆ.

  ಪ್ರತಿ ವರ್ಷ ಕರುನಾಡ ಸಂಭ್ರಮ ಕಾರ್ಯಕ್ರಮ ಅದ್ಧೂರಿ ನಡೆಯುತ್ತೆ. ಬೆಂಗಳೂರಿನ ಜನರಿಗಾಗಿ ಅದ್ಧೂರಿ ಕಲರ್‌ಫುಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹಾಗೇ ಈ ಬಾರಿ ಕೂಡ ಮನರಂಜನೆ ಕಾರ್ಯಕ್ರಮವಿದೆ. ಅದರೊಂದು ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರಿಗೆ ಮರಣೊತ್ತರ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತೆ.

  ಈ ಅದ್ದೂರಿ ಕಾರ್ಯಕ್ರಮಕ್ಕಾಗಿ ಈಗಾಗಲೇ ದಿವಂಗತಸ ಚಿರಂಜೀವಿ ಸರ್ಜಾ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕಟ್‌ಔಟ್ ಎದ್ದು ನಿಂತಿದೆ. ಇಬ್ಬರೂ ನಟರನ್ನು ಕಳೆದುಕೊಂಡಿರೋ ಸಿನಿಪ್ರೇಮಿಗಳಿಗೆ ಈ ಕಟೌಟ್ ನೋಡಿ ಭಾವುಕರಾಗುತ್ತಿದ್ದಾರೆ.

  ಎದ್ದು ನಿಂತ ಪುನೀತ್-ಚಿರು ಕಟೌಟ್

  ಎದ್ದು ನಿಂತ ಪುನೀತ್-ಚಿರು ಕಟೌಟ್

  ಕಲಾ ಸಂಭ್ರಮಕ್ಕೆ ಒಂದು ದಶಕದಿಂದಲೂ ನಡೆದುಕೊಂಡು ಬರುತ್ತಿದೆ. ಈ ಬಾರಿ ಕೂಡ ಅದ್ಧೂರಿ ಕಾರ್ಯಕ್ರಮಕ್ಕೆ ತಾರಾ ಮೆರುಗು ಸಿಕ್ಕಿದೆ. ಈ ಬಾರಿ ಚಿರಂಜೀವಿ ಸರ್ಜಾ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಬೃಹತ್ ಕಟೌಟ್ ನಿಲ್ಲಿಸಿ ಇಬ್ಬರೂ ನಟರಿಗೆ ಗೌರವ ಸೂಚಿಸಲಾಗುತ್ತಿದೆ. ವಿದ್ಯಾಪೀಠ ಸರ್ಕಲ್ ಡೊಂಕಲ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ವರುಣ್ ಸ್ಟುಡಿಯೋಸ್ ಹಾಗೂ ರಾಜ್ ಇವೆಂಟ್ಸ್ ಜೊತೆಗೂಡಿ ಕಾರ್ಯಕ್ರಮದ ನಿರ್ವಹಣೆ ಮಾಡುತ್ತಿದೆ. ಈ ಬಾರಿ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡುತ್ತಿದ್ದು, ಧ್ರುವ ಸರ್ಜಾ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

  ಅದ್ದೂರಿ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಭಾಗಿ

  ಅದ್ದೂರಿ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಭಾಗಿ

  'ಕರುನಾಡ ಸಂಭ್ರಮ' ಅಂದ್ಮೇಲೆ ಕಲರ್ ಫುಲ್ ದುನಿಯಾ ಇರಬೇಕು. ಅದ್ಧೂರಿ ಕಾರ್ಯಕ್ರಮಗಳು ಜರುಗಲೇ ಬೇಕು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಸ್ಟಾರ್ ಗಾಯಕರ ಹಾಡುಗಳು, ನಟ, ನಟಿಯರ ಪರ್ಫಾಮೆನ್ಸ್ ಇರುತ್ತೆ. ಈ ಬಾರಿಯೂ ಕರುನಾಡ ಸಂಭ್ರಮ ಇನ್ನಷ್ಟು ರಂಗು ಗಂಗಿನಿಂದ ಕೂಡಿರುತ್ತೆ. ಡಿಸೆಂಬರ್ 10 ಹಾಗೂ 11 ರಂದು ಸ್ಯಾಂಡಲ್‌ವುಡ್‌ನ ತಾರೆಯರು ವೇದಿಕೆ ಮೇಲೆ ಕಾಣಿಸಿಕೊಳ್ಲುತ್ತಾರೆ. ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ, ಧ್ರುವ ಸರ್ಜಾ, ರವಿಶಂಕರ್ ಗೌಡ, ನಿಧಿ ಸುಬ್ಬಯ್ಯ, ಆರ್ಮುಗಂ ರವಿ ಶಂಕರ್, ಮಾನ್ವಿತಾ ಹರೀಶ್, ಸಂಗೀತ ಶೃಂಗೇರಿ, ವಿರಾಟ್, ಕಾವ್ಯ ಶಾ, ವಿಕ್ರಂ ರವಿಚಂದ್ರನ್ ಸೇರಿದಂತೆ ಹಲವು ತಾರೆಯರು ಕರುನಾಡ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

  ಸೆಂಚುರಿ ಸ್ಟಾರ್ ಶಿವಣ್ಣನೊಂದಿಗೆ ವೇದ ಸಂಭ್ರಮ

  ಸೆಂಚುರಿ ಸ್ಟಾರ್ ಶಿವಣ್ಣನೊಂದಿಗೆ ವೇದ ಸಂಭ್ರಮ

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ 125ನೇ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಸೆಂಚುರಿ ಸ್ಟಾರ್ ಸಿನಿಮಾದ ಪ್ರಚಾರವನ್ನೂ ಆರಂಭಿಸಿದ್ದಾರೆ. ಅಲ್ಲದೇ ಇದೇ ಕರುನಾಡ ವೇದಿಕೆ ಮೇಲೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಬರಲಿದ್ದಾರೆ. ಪ್ರೇಕ್ಷಕರೊಂದಿಗೆ 'ವೇದ' ಸಿನಿಮಾ ಬಗ್ಗೆ ಶಿವಣ್ಣ ಮಾತಾಡಲಿದ್ದು, ಈ ಚಿತ್ರದ ಹಾಡುಗಳು ಹಾಗೂ ಸಿನಿಮಾದ ತುಣುಕುಗಳನ್ನು ಪ್ರದರ್ಶನ ಮಾಡಲಿದ್ದಾರೆ.

  ಗಾಯಕರ ಸಮಾಗಮ

  ಗಾಯಕರ ಸಮಾಗಮ

  ಕರುನಾಡ ಸಂಭ್ರಮದಲ್ಲಿ ಮತ್ತೊಂದು ಹೈಲೈಟ್ ಅಂದರೆ, ಅದು ಸಂಗೀತ ಕಾರ್ಯಕ್ರಮ. ಈ ಸಂಗೀತ ಸಂಜೆಯಲ್ಲಿ ಖ್ಯಾತ ಗಾಯಕರಾದ ಎಸ್ ಪಿ ಬಿ ಪುತ್ರ ಎಸ್‌ಪಿಬಿ ಚರಣ್, ಸಿಂಗರ್ ಮನು, ನವೀನ್ ಸಜ್ಜು, ಅನನ್ಯ ಭಟ್, ಅನುರಾಧ ಭಟ್, ವಿಜಯ್ ಪ್ರಕಾಶ್ ಸೇರಿದಂತೆ ಖ್ಯಾತ ಗಾಯಕರು ಈ ಸಂಭ್ರಮದ ರಂಗನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.

  English summary
  Puneeth Rajkumar And Chiranjeevi Sarja Huge Cutout In Karunada Sambrama, Know More.
  Thursday, December 8, 2022, 23:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X