India
  For Quick Alerts
  ALLOW NOTIFICATIONS  
  For Daily Alerts

  Puneeth Viral Photo: ಅಪ್ಪು ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದು ನೋಡಿದ್ದೀರಾ? ಈ ಫೋಟೊ ಬಲು ಅಪರೂಪ

  |

  ಅಭಿಮಾನಿಗಳು ಅಪ್ಪುನಾ ಇಷ್ಟ ಪಡುವುದಕ್ಕೆ ನೂರೆಂಟು ಕಾರಣಗಳಿವೆ. ಅದರಲ್ಲೊಂದು ಸಿಂಪ್ಲಿಸಿಟಿ. ತಂದೆಯಂತೆಯೇ ಸರಳ ವ್ಯಕ್ತಿತ್ವದ ಅಪ್ಪು ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪುನೀತ್ ರಾಜ್‌ಕುಮಾರ್‌ ಇಷ್ಟಪಡುವುದಕ್ಕೆ ಕಾರಣನೇ ಈ ಸರಳತೆ. ಪುನೀತ್ ಎಷ್ಟು ಸರಳ ವ್ಯಕ್ತಿ ಅನ್ನುವುದುಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

  ಶ್ರೀಮಂತ ಕುಟುಂಬದಲ್ಲೇ ಜನಿಸಿದ್ದರೂ, ಪುನೀತ್ ರಾಜ್‌ಕುಮಾರ್ ಎಂದಿಗೂ ಆದನ್ನು ತಲೆ ಹಾಕಿಕೊಂಡಿದ್ದ ಯಾರೂ ಕಂಡಿಲ್ಲ. ಫೈವ್ ಸ್ಟಾರ್‌ನಲ್ಲೇ ಊಟ ಮಾಡುವ ಅಭ್ಯಾಸವಿರಲಿಲ್ಲ. ಎಲ್ಲರಂತೆ ತಾನೂ ಕೂಡ ಒಬ್ಬನೇ ಎನ್ನುವಂತಿದ್ದರು. ರಸ್ತೆ ಬದಿಯಲ್ಲಿ ನಿಂತು ಇಡ್ಲಿ ತಿನ್ನುತ್ತಿದ್ದ ಫೋಟೊಗಳನ್ನೂ ನೋಡಿದ್ದೇವೆ. ಚಿಕ್ಕ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದನ್ನೂ ನೋಡಿದ್ದೇವೆ.

  'James' collection | 'ಜೇಮ್ಸ್' 100 ಕೋಟಿ ಕ್ಲಬ್ ಸೇರಿದ್ದೇಗೆ? ಎಲ್ಲೆಲ್ಲಿ? ಎಷ್ಟೆಷ್ಟು?'James' collection | 'ಜೇಮ್ಸ್' 100 ಕೋಟಿ ಕ್ಲಬ್ ಸೇರಿದ್ದೇಗೆ? ಎಲ್ಲೆಲ್ಲಿ? ಎಷ್ಟೆಷ್ಟು?

  James 100 Crore Club | ಜೇಮ್ಸ್ ಕಲೆಕ್ಷನ್ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ ಕಿಶೋರ್

  ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅವರ ಬಗ್ಗೆ ಒಂದೊಂದೇ ಸಂಗತಿಗಳು ಹೊರಬೀಳುತ್ತಿವೆ. ಅಸಹಾಯಕರಿಗೆ ಅಪ್ಪು ಮಾಡಿದ ಸಹಾಯ ನಿಧನ ಬಳಿಕ ಒಂದೊಂದಾಗೇ ಜಗತ್ತಿಗೆ ಗೊತ್ತಾಗುತ್ತಿದೆ. ಈಗ ಅಪ್ಪು ಪತ್ನಿಯೊಂದಿಗೆ ಆಟೋರಿಕ್ಷಾದಲ್ಲಿ ಜಾಲಿರೈಡ್ ಹೊರಟ ವಿಡಿಯೋವೊಂದು ವೈರಲ್ ಆಗುತ್ತಿದೆ.

  ಅಟೋರಿಕ್ಷಾದಲ್ಲಿ ಪವರ್‌ಸ್ಟಾರ್

  ಅಟೋರಿಕ್ಷಾದಲ್ಲಿ ಪವರ್‌ಸ್ಟಾರ್

  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಚಿಕ್ಕ ವಿಡಿಯೋದಲ್ಲಿ ಪವರ್‌ಸ್ಟಾರ್ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇವರೊಂದಿಗೆ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಕೂಡ ಇದ್ದಾರೆ. ಇಬ್ಬರೂ ಆಟೋದಲ್ಲಿ ಪ್ರಯಾಣ ಮಾಡುತ್ತಿರುವ ಇದೇ ವಿಡಿಯೋ ನೋಡಿ ಮತ್ತೆ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಎಸಿ ಕಾರು ಇದ್ದರೂ ಅಪ್ಪು ಆಟೋದಲ್ಲಿ ಪ್ರಯಾಣ ಮಾಡುತ್ತಾ ಎಂಜಾಯ್ ಮಾಡಿದ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  James Success meet: 'ಜೇಮ್ಸ್' ಅದ್ಧೂರಿ ಸಕ್ಸಸ್ ಮೀಟ್: ಯಾವಾಗ? ಎಲ್ಲಿ?James Success meet: 'ಜೇಮ್ಸ್' ಅದ್ಧೂರಿ ಸಕ್ಸಸ್ ಮೀಟ್: ಯಾವಾಗ? ಎಲ್ಲಿ?

  ಪುನೀತ್ ಆಟೋರಿಕ್ಷಾ ಏರಿದ್ದು ಎಲ್ಲಿ?

  ಪುನೀತ್ ಆಟೋರಿಕ್ಷಾ ಏರಿದ್ದು ಎಲ್ಲಿ?

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕರ್ನಾಟಕದಲ್ಲಿ ಹೀಗೆ ಆಟೋ ರಿಕ್ಷಾ ಏರಿ ಕೂರಲು ಸಾಧ್ಯವಿತ್ತಾ? ಖಂಡಿತಾ ಇಲ್ಲ. ಅದೇನಾದರೂ ವಿಷಯ ಗೊತ್ತಾಗಿದ್ದರೆ, ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ರನ್ನು ಮುತ್ತಿಕೊಳ್ಳುತ್ತಿದ್ದರು. ಹಲವು ವರ್ಷಗಳ ಹಿಂದೆ ಅಪ್ಪು ಮುಂಬೈಗೆ ಹೋಗಿದ್ದಾಗಾ, ಆಟೋದಲ್ಲಿ ಪ್ರಯಾಣ ಮಾಡಿದ ವಿಡಿಯೋ ಎನ್ನಲಾಗಿದೆ. ಇದೇ ವೇಳೆ ಪತ್ನಿ ಜೊತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಇದನ್ನು ಬೇರೊಂದು ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ರೆಕಾರ್ಡ್ ಮಾಡಿದ್ದಾರೆ.

  ಏನಂದ್ರು ಅಪ್ಪು ಫ್ಯಾನ್ಸ್?

  ಏನಂದ್ರು ಅಪ್ಪು ಫ್ಯಾನ್ಸ್?

  ಪುನೀತ್ ಆಟೋರಿಕ್ಷಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಭಾವುಕರಾಗಿದ್ದಾರೆ. 'ಎಂಥಾ ಅದ್ಬುತ ಜೋಡಿ ನಿಮ್ಮದು. ದೃಷ್ಟಿ ಆಗ್ಬಿಡ್ತು ಅನ್ಸುತ್ತೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು "ಅಪ್ಪು ತನ್ನ ಜೀವನದ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಿದ್ದಾರೆ. ಶ್ರೀಮಂತಿಕೆಗೆ ತನ್ನನ್ನು ಸೀಮಿತ ಮಾಡಿಕೊಂಡಿಲ್ಲ. ಎಷ್ಟು ಹಂಬಲ್ ವ್ಯಕ್ತಿ ಎಂದಿದ್ದಾರೆ. ಇನ್ನೊಬ್ಬರು "ಬದುಕಿದ್ದ ಅಷ್ಟೂ ದಿನ, ಪ್ರತಿಕ್ಷಣ ಸಂತೋಷ ಪಟ್ಟ ರಾಜಕುಮಾರ." ಎಂದು ಕಮೆಂಟ್ ಮಾಡಿದ್ದಾರೆ.

  James Second Day Box Office Collection:'ಜೇಮ್ಸ್' ಎರಡನೇ ದಿನದ ಕಲೆಕ್ಷನ್ ಎಷ್ಟು?James Second Day Box Office Collection:'ಜೇಮ್ಸ್' ಎರಡನೇ ದಿನದ ಕಲೆಕ್ಷನ್ ಎಷ್ಟು?

  ಅಪ್ಪು ಪಕ್ಕಾ ಫ್ಯಾಮಿಲಿಮ್ಯಾನ್

  ಅಪ್ಪು ಪಕ್ಕಾ ಫ್ಯಾಮಿಲಿಮ್ಯಾನ್

  ಪುನೀತ್ ರಾಜ್‌ಕುಮಾರ್ ಸಿನಿಮಾಗಳಲ್ಲಿ ಅದೆಷ್ಟೇ ಬ್ಯುಸಿಯಾಗಿರಲಿ. ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲಿ, ಕುಟುಂಬಕ್ಕೆ ಸಮಯ ನೀಡುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಈ ವಿಷಯವನ್ನು ಅಪ್ಪು ಪತ್ನಿ ಅಶ್ವಿನಿ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಪತ್ನಿ, ಮಕ್ಕಳು ಅಂದರೆ, ಅಪ್ಪುಗೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಎಲ್ಲಾ ಅಭಿಮಾನಿಗಳಿಗೂ ಮಾದರಿಯಾಗಿ ಉಳಿದು ಬಿಟ್ಟಿದ್ದಾರೆ.

  English summary
  Puneeth Rajkumar and wife Ashwini traveled by Auto in Mumbai photo goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X