»   » ಕನ್ನಡ ಉಳಿಸಿ, ಬೆಳೆಸಲು ಅಪ್ಪು ಅವರಿಂದ ಚಿನ್ನದ ಕೊಡುಗೆ

ಕನ್ನಡ ಉಳಿಸಿ, ಬೆಳೆಸಲು ಅಪ್ಪು ಅವರಿಂದ ಚಿನ್ನದ ಕೊಡುಗೆ

Posted By:
Subscribe to Filmibeat Kannada

ಎಲ್ಲವೂ ಇಂಗ್ಲೀಷ್ ಮಯ ಆಗುತ್ತಿರುವ ಈಗಿನ ಕಾಲದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಮ್ಮಿಯಾಗುತ್ತಿದೆ. ಹೀಗಾಗಿ ಕನ್ನಡವನ್ನ ಉಳಿಸಬೇಕು, ಕನ್ನಡವನ್ನ ಬೆಳೆಸಬೇಕು ಅನ್ನುವ ನಿಟ್ಟಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ ಯೋಜನೆ ಹಾಕಿಕೊಂಡಿದ್ದಾರೆ.

ಪೋಸ್ಟ್ ಗ್ರ್ಯಾಡ್ಜ್ಯುಯೇಷನ್ (ಸ್ನಾತಕ್ಕೋತ್ತರ ಪದವಿ) ನಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳು ಗಳಿಸುವ ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ಮುಖಾಂತರ ಡಾ.ರಾಜ್ ಕುಮಾರ್ ಹೆಸರಲ್ಲಿ ಚಿನ್ನದ ಪದಕ ನೀಡುವುದಾಗಿ ಅಣ್ಣಾವ್ರ ಮಗ ಅಪ್ಪು ಘೋಷಿಸಿದ್ದಾರೆ.

Puneeth Rajkumar announces gold medal for Kannada Toppers at PG level

ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ತಯಾರಾಗಿರುವ ವಿಶೇಷ ಹಾಡಿನ ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ ಪುನೀತ್ ರಾಜ್ ಕುಮಾರ್, ಅರ್ಹ ಪ್ರತಿಭಾವಂತ ಕನ್ನಡ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ನೀಡಿ ಗೌರವಿಸುವುದಾಗಿ ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸದಾ ಪ್ರೋತ್ಸಾಹ ನೀಡುವ ಅಪ್ಪು, ಮೊನ್ನೆಯಷ್ಟೇ 'ಚಕ್ರವ್ಯೂಹ' ಶೂಟಿಂಗ್ ನಿಮಿತ್ತ ಮಂಡ್ಯಕ್ಕೆ ತೆರಳಿದ್ದಾಗ ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿ ಧನ ಸಹಾಯ ಕೂಡ ಮಾಡಿ ಬಂದಿದ್ದಾರೆ. [ಹೆಚ್ಚುದಿನ ಬದುಕುಳಿಯದ ಇಬ್ಬರ ಜೊತೆ ಮಗುವಾದ ಪುನೀತ್]

ಕೇವಲ ಸಿನಿಮಾ ಅಂತ ಬಣ್ಣದ ಪ್ರಪಂಚದಲ್ಲಿ ಮಾತ್ರ ಬಿಜಿ ಇರದೆ ಸಮಾಜಮುಖಿ ಕೆಲಸಗಳಲ್ಲೂ ಭಾಗಿಯಾಗುತ್ತಿರುವ ಪುನೀತ್ ರಾಜ್ ಕುಮಾರ್ ಗೆ ಒಂದು ಸಲಾಂ ಹಾಕಲೇಬೇಕು. ಏನಂತೀರಿ..?

    English summary
    Kannada Actor Puneeth Rajkumar has announced to present a Gold Medal which will be instituted after Late Dr.Rajkumar for the students with Highest Marks in Kannada at Post-Graduation Level.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada