Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್
ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷ ಆಗಿದೆ. ಅವರ ಜೀವಿತಾವಧಿಯಲ್ಲಿ ಅಪ್ಪು ಮಾಡಿದ ಸಮಾಜಮುಖಿ ಕೆಲಸಗಳು ಯಾರು ಮರೆಯುವಂತಿಲ್ಲ. ಇಂದಿಗೂ ಪುನೀತ್ ಒಳ್ಳೆ ಕೆಲಸಗಳನ್ನು ನೆನೆದು ಅವರ ಹಾದಿಯಲ್ಲಿಯೇ ಅಭಿಮಾನಿಗಳು ಸಾಗುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಿನಿಮಾ ಬದುಕು ಎಷ್ಟು ರೋಚಕವಾಗಿದೆಯೋ, ಹಾಗೇ ತೆರೆಯ ಹಿಂದಿನ ಬದುಕು ಕೂಡ ಅಷ್ಟೇ ಮಾದರಿಯಾಗಿದೆ. ಹೀಗಾಗಿ ಅಪ್ಪು ಆತ್ಮಚರಿತ್ರೆಯನ್ನು ಪುಸ್ತಕರೂಪದಲ್ಲಿ ಪತ್ರಕರ್ತ ಶರಣು ಹುಲ್ಲೂರು ತಂದಿದ್ದರು. ಅದೇ ಪುಸ್ತಕ ಈಗ ಪಠ್ಯಪುಸ್ತಕವಾಗಿ ಬದಲಾಗಿದೆ.
"ಆ
ದೇವತಾ
ಮನುಷ್ಯನ
ಬಗ್ಗೆ
ಮಾತಾಡೋ
ಯೋಗ್ಯತೆನೂ
ಇಲ್ಲ"
-
ದುನಿಯಾ
ವಿಜಯ್!
ಪುನೀತ್ ರಾಜಕುಮಾರ್ ಬದುಕನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಅನ್ನೋದು ಅಪ್ಪು ಅಭಿಮಾನಿಗಳ ಬಯಕೆಯಾಗಿತ್ತು. ಪವರ್‌ಸ್ಟಾರ್ ಅಭಿಮಾನಿಗಳು ರಾಜ್ಯ ಸರಕಾರಕ್ಕೆ ಪತ್ರವನ್ನೂ ಬರೆದಿದ್ದವು. ಅಲ್ಲದೆ ಉನ್ನತ ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಅಭಿಮಾನಿಗಳು ಮನವಿಯನ್ನೂ ಸಲ್ಲಿಸಿದ್ದರು.

ಬಿಕಾಂ ಸೆಮಿಸ್ಟರ್‌ನಲ್ಲಿ ಪುನೀತ್ ಪಠ್ಯ
ಈಗ ರಾಜ್ಯ ಸರ್ಕಾರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ಮೂರನೇ ಸೆಮಿಸ್ಟರ್‌ನ ಕನ್ನಡ ಭಾಷಾ ಪಠ್ಯದಲ್ಲಿ 'ವಾಣಿಜ್ಯ ಕನ್ನಡ 3' ರಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜೀವನದ ಆಯ್ದ ಭಾಗವನ್ನು ಸಿಲಬಸ್‌ಗೆ ಅಳವಡಿಸಿಕೊಂಡಿದೆ.

'ಲೋಹಿತ್ ಎಂಬ ಮರಿಮುದ್ದ' ಪಠ್ಯ
ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ 'ನೀನೇ ರಾಜಕುಮಾರ್' ಕೃತಿಯ ಒಂದು ಅಧ್ಯಾಯವನ್ನು ಪಠ್ಯಪುಸ್ತಕವಾಗಿ ಅಳವಡಿಸಲಾಗಿದೆ. 'ಲೋಹಿತ್ ಎಂಬ ಮರಿಮುದ್ದ' ಭಾಗವನ್ನು ಬಿಕಾಂ ಮೂರನೇ ಸೆಮಿಸ್ಟರ್‌ನ ಪಠ್ಯದಲ್ಲಿ ಬಳಸಿಕೊಳ್ಳಲಾಗಿದೆ. ಇದು ಅಪ್ಪು ಅಭಿಮಾನಿಗಳ ಹರ್ಷವನ್ನು ಡಬಲ್ ಮಾಡಿದೆ.

ಪಠ್ಯ ಪುಸ್ತಕ ಸಂಪಾದಕ ಮಂಡಳಿ ನಿರ್ಧಾರ
ಬೆಂಗಳೂರು ವಿಶ್ವವಿದ್ಯಾಲಯ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾಗಿದ್ದು, ಡಾ.ಅಮರೇಂದ್ರ ಶೆಟ್ಟಿ, ಆರ್. ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಬಿ.ಇ ಹಾಗೂ ಡಾ.ರಘುನಂದನ್ ಬಿ.ಆರ್ ಪಠ್ಯದ ಸಂಪಾದಕರಾಗಿದ್ದಾರೆ. ಈ ವರ್ಷದ ಬಿ.ಕಾಂ ಪದವಿ ಮೂರನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಳವಡಿಸಲಾಗಿದೆ.

'ನೀನೇ ರಾಜಕುಮಾರ' 4ನೇ ಆವೃತ್ತಿ
ಕೆಲವು ದಿನಗಳ ಹಿಂದಷ್ಟೇ ಶರಣು ಹುಲ್ಲೂರು ಬರೆದ 'ನೀನೇ ರಾಜಕುಮಾರ' ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. 2022ರಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಬಯೋಗ್ರಫಿ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಪಠ್ಯಪುಸ್ತಕಕ್ಕೂ ಕೃತಿಯ ಆಯ್ದ ಭಾಗವನ್ನು ಅಳವಡಿಸಿಕೊಳ್ಳಲಾಗಿದೆ.