For Quick Alerts
  ALLOW NOTIFICATIONS  
  For Daily Alerts

  ರಾಜಸ್ಥಾನದಲ್ಲಿ ಪವರ್ ಸ್ಟಾರ್ ಒಂಟೆ ಸವಾರಿ

  By Bharath Kumar
  |

  'ಅಂಜನಿಪುತ್ರ' ಚಿತ್ರದಲ್ಲಿ ನಟಿಸುತ್ತಿರುವ ಪುನೀತ್ ರಾಜ್ ಕುಮಾರ್ ಸದ್ಯ ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರದ ಬಹುತೇಕ 80ರಷ್ಟು ಶೂಟಿಂಗ್ ಮುಗಿಸಿರುವ ಅಂಜನಿಪುತ್ರ ಉಳಿದ ಭಾಗದ ಚಿತ್ರೀಕರಣಕ್ಕಾಗಿ ಮರುಭೂಮಿ ನಾಡಿಗೆ ಹೋಗಿದೆ.

  ಇಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಸೇರಿದಂತೆ ಕೆಲವು ದೃಶ್ಯಗಳನ್ನ ಚಿತ್ರೀಕರಿಸಲಿರುವ ಅಂಜನಿಪುತ್ರ ಭರದಿಂದ ಶೂಟಿಂಗ್ ಮಾಡುತ್ತಿದೆ. ವಿಶೇಷ ಅಂದ್ರೆ, ರಾಜಸ್ಥಾನದ ಶೂಟಿಂಗ್ ವೇಳೆ ಪವರ್ ಸ್ಟಾರ ಪುನೀತ್ ರಾಜ್ ಕುಮಾರ್ ಅವರು ಒಂಟೆ ಸವಾರಿ ಮಾಡಿದ್ದು, ಈ ಫೋಟೋಗಳು ಈಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

  ಇತ್ತೀಚೆಗಷ್ಟೇ, ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಮುಂಗಾರು ಮಳೆ-2' ಚಿತ್ರದಲ್ಲಿ ಒಂಟೆ ಸವಾರಿ ಮಾಡಿದ್ದರು. ಈಗ ಪುನೀತ್ ರಾಜ್ ಕುಮಾರ್ ಅವರ ಸರದಿ.

  ಹರ್ಷ ಎ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಎಂ.ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾಕೃಷ್ಣ, ರವಿಶಂಕರ್, ಮುಖೇಶ್ ತಿವಾರಿ, ಚಿಕ್ಕಣ್ಣ, ಹರಿಪ್ರಿಯಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರವಿಬಸ್ರೂರು ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ.

  English summary
  Puneeth Rajkumar and Rashmika Mandanna starrer Anjaniputra shooting in Rajasthan. the Movie Directed by Harsha

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X