'ಮುಂಗಾರುಮಳೆ' ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಅಂದ್ರೆ ಅದೊಂಥರ ಕಿಕ್. ಅಪ್ಪು ಸ್ಟೆಪ್ಸ್ ಅಂದ್ರೆ ಎದ್ದು ಕುಣಿಯುತ್ತಾರೆ ಅವರ ಅಭಿಮಾನಿಗಳು. ಸಿನಿಮಾದಲ್ಲಿ ಪುನೀತ್ ಡ್ಯಾನ್ಸ್ ನೋಡಿ ಎಂಜಾಯ್ ಮಾಡುವ ಫ್ಯಾನ್ಸ್‌ಗೆ ಈಗೊಂದು ಭರ್ಜರಿ ವಿಡಿಯೋ ಸಿಕ್ಕಿದೆ.

ಆಫ್‌ ಸ್ಕ್ರೀನ್‌ನಲ್ಲಿ ಪುನೀತ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪ್ಪು ಅಭಿಮಾನಿಗಳು ಹೆಚ್ಚು ಹೆಚ್ಚು ಶೇರ್ ಮಾಡುತ್ತಿದ್ದಾರೆ.

ಈ ಡ್ಯಾನ್ಸ್ ಯಾವ ಸಂದರ್ಭದಲ್ಲಿ ಹಾಗು ಎಲ್ಲಿ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳದ ಫ್ಯಾನ್ಸ್ ಪುನೀತ್ ಅವರ ಸ್ಟೆಪ್ಸ್ ನೋಡಿ ಖುಷಿಪಡುತ್ತಿದ್ದಾರೆ.

Puneeth Rajkumar Danced For Mungaru Male Song

ಅಂದ್ರೆ, ಪಂಜಾಬಿ ಶೈಲಿಯ ಡೋಲು ವಾದ್ಯಕ್ಕೆ ಅಪ್ಪು ಕುಣಿದಿದ್ದಾರೆ. ಪಂಜಾಬಿ ಶೈಲಿಯ ಪೇಟಾ ಧರಿಸಿದ್ದಾರೆ. ವಿಶೇಷ ಅಂದ್ರೆ, ಮುಂಗಾರುಮಳೆ ಚಿತ್ರದ ಮ್ಯೂಸಿಕ್‌ಗೆ ಪುನೀತ್ ಡ್ಯಾನ್ಸ್ ಮಾಡಿದ್ದಾರೆ. ಮುಂಗಾರುಮಳೆ ಚಿತ್ರದಲ್ಲಿ ಬರುವ ಸುವ್ವಿ ಸುವ್ವಾಲಿ.....ಮ್ಯೂಸಿಕ್‌ಗೆ ಅಪ್ಪು ಹೆಜ್ಜೆ ಹಾಕಿದ್ದಾರೆ.

ವಿಡಿಯೋದ ಕೊನೆಯಲ್ಲಿ ಹುಡುಗರು ಸಿನಿಮಾದ ಪಂಕಜಾ ಹಾಡು ಸಹ ಬರುತ್ತೆ. ಅದಕ್ಕೂ ಪುನೀತ್ ಡ್ಯಾನ್ಸ್ ಮಾಡಿದ್ದಾರೆ.

ಇನ್ನು ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಏಪ್ರಿಲ್ 1ರಂದು ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸಯೇಶಾ ಸೈಗಲ್ ನಾಯಕಿ. ಪ್ರಮುಖ ಪಾತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದಾರೆ.

ಮತ್ತೊಂದೆಡೆ ಪಿಆರ್‌ಕೆ ಪ್ರೊಡಕ್ಷನ್ನಲ್ಲಿ 'ಫ್ಯಾಮಿಲಿ ಪ್ಯಾಕ್' ಎಂಬ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ.

Recommended Video

ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada

More from Filmibeat

English summary
Kannada actor, Power Star Puneeth Rajkumar Danced for mungaru male song in off screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X