For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಗಿಂತ ನಾನು ಭಿನ್ನವಾಗಿಲ್ಲ ಎಂದಿದ್ದ ಪುನೀತ್ ರಾಜ್ ಕುಮಾರ್

  |

  ರಾಜ್ಯದ ಜನತೆ ಊಹಿಸಲೂ ಸಾಧ್ಯವಾಗದ ಸುದ್ದಿಯೊಂದು ಸಿಡಿಲಿನಂತೆ ಬಡಿದಪ್ಪಳಿಸಿದೆ. ಕನ್ನಡ ಚಿತ್ರೋದ್ಯಮದ ರಾಜಕುಮಾರ್ ಮತ್ತು ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

  ಕಲೆ ಎನ್ನುವುದು ರಕ್ತದಲ್ಲೇ ಅವರಿಗೆ ಬಂದಿದೆ ಎನ್ನುವುದು ಪ್ರತೀ ಬಾರಿ ಅವರ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕ ಹೇಳುವ ಮಾತು. ತಂದೆಯ ಸಿನಿಮಾದಲ್ಲೇ ಬಾಲ್ಯ ನಟನಾಗಿ ಚಿತ್ರೋದ್ಯಮದಲ್ಲಿ ಬೆಳೆದು ಪ್ರೀತಿಯಿಂದ 'ಅಪ್ಪು' ಎಂದು ಕರೆಯಲ್ಪಡುತ್ತಿದ್ದ ಪುನೀತ್ ನಮ್ಮಗಲಿದ್ದಾರೆ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಕಷ್ಟ.

  ನಟ ಪುನೀತ್‌ ರಾಜ್‌ಮಾರ್‌ ಇನ್ನಿಲ್ಲ! ನಟ ಪುನೀತ್‌ ರಾಜ್‌ಮಾರ್‌ ಇನ್ನಿಲ್ಲ!

  ತಂದೆ ಡಾ.ರಾಜಕುಮಾರ್ ಅವರ ಬಗ್ಗೆ 'ಡಾ.ರಾಜಕುಮಾರ್ ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ' ಪುಸ್ತಕವನ್ನು ಹೊರ ತಂದಿದ್ದ ಪುನೀತ್ ತಮ್ಮ ತಂದೆಯ ಬಗ್ಗೆ ಹಲವು ವಿಷಯಗಳನ್ನು ಆ ಪುಸ್ತಕದ ಮೂಲಕ ನೆನೆಪಿಸಿಕೊಂಡಿದ್ದರು.

  ಅಪ್ಪಾಜಿ ನಿಮ್ಮ ಅನುಪಸ್ಥಿತಿ ನಮ್ಮನ್ನು ಸದಾ ಕಾಡುತ್ತಿದೆ ಎಂದು ಪುನೀತ್ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಈಗ, ಪುನೀತ್ ಅವರ ಅಕಾಲಿಕ ಸಾವು ಎಲ್ಲಾ ಕಲಾರಸಿಕರನ್ನು ಕಾಡುವಂತೆ ಮಾಡಿದೆ. ಅವರ ಸಹೋದರ ಶಿವರಾಜ್ ಕುಮಾರ್ ಅವರ ಭಜರಂಗಿ - 2 ಸಿನಿಮಾ ಭರ್ಜರಿಯಾಗಿ ಇಂದು ಬಿಡುಗಡೆಯಾಗಿತ್ತು. ಡಾ.ರಾಜಕುಮಾರ್ ಬಗ್ಗೆ ಪುನೀತ್ ಕೆಲವೊಂದು ಮಾಹಿತಿಯನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದು ಹೀಗೆ..

  ಪವರ್‌ ಸ್ಟಾರ್‌ಗಾಗಿ ಕಣ್ಣೀರ ಧಾರೆ! ಪವರ್‌ ಸ್ಟಾರ್‌ಗಾಗಿ ಕಣ್ಣೀರ ಧಾರೆ!

   ಅಪ್ಪಾಜಿಯವರು ತಮ್ಮ ಪ್ರತೀ ಯಶಸ್ಸನ್ನು ತಮ್ಮ ತಂದೆ-ತಾಯಿಗೆ ಅರ್ಪಿಸುತ್ತಿದ್ದ

  ಅಪ್ಪಾಜಿಯವರು ತಮ್ಮ ಪ್ರತೀ ಯಶಸ್ಸನ್ನು ತಮ್ಮ ತಂದೆ-ತಾಯಿಗೆ ಅರ್ಪಿಸುತ್ತಿದ್ದ

  ಅಪ್ಪಾಜಿಯವರು ತಮ್ಮ ಪ್ರತೀ ಯಶಸ್ಸನ್ನು ತಮ್ಮ ತಂದೆ-ತಾಯಿಗೆ ಅರ್ಪಿಸುತ್ತಿದ್ದರು. ಈ ವಿಷಯದಲ್ಲಿ ನಾನು ಕೂಡಾ ಭಿನ್ನವಾಗಿರಲಿಲ್ಲ, ಪ್ರತಿಯೊಬ್ಬ ಮಗುವಿನ ಹಾಗೇ ನಾನು ಕೂಡಾ ನನ್ನ ತಂದೆಯನ್ನು ಅಪಾರ ಗೌರವದಿಂದ ಕಂಡೆ. ಬೇರೆ ಎಲ್ಲರಿಗೂ ಅಪ್ಪಾಜಿ ಒಬ್ಬ ದೊಡ್ಡ ಮೇರು ನಟ. ನನಗೆ ಮಾತ್ರ ಅವರು ಒಂದು ರೋಲ್ ಮಾಡೆಲ್, ನನ್ನ ಜೀವನದ ಅವಿಭಾಜ್ಯ ಅಂಗ ಎಂದು ಪುನೀತ್ ತಮ್ಮ ತಂದೆಯ ಬಗ್ಗೆ ಗೌರವದ ಮಾತನ್ನಾಡಿದ್ದರು.

   ಅವರ ಸರಳ ಜೀವನ, ನುಡಿಗಿಂತ ನಡೆ ಮುಖ್ಯ ಎನ್ನುವ ಅವರ ಜೀವನಶೈಲಿ

  ಅವರ ಸರಳ ಜೀವನ, ನುಡಿಗಿಂತ ನಡೆ ಮುಖ್ಯ ಎನ್ನುವ ಅವರ ಜೀವನಶೈಲಿ

  ವೈಯಕ್ತಿಕವಾಗಿ ಹೇಳುವುದಾದರೆ ಅವರ ಸರಳ ಜೀವನ, ನುಡಿಗಿಂತ ನಡೆ ಮುಖ್ಯ ಎನ್ನುವ ಅವರ ಜೀವನಶೈಲಿಯಿಂದ ನಾನು ಜೀವನದಲ್ಲಿ ಬಹಳಷ್ಟು ಕಲಿತಿದ್ದೇನೆ. ಒಬ್ಬ ತಂದೆಯಾಗಿ, ಮಗುವಾಗಿ, ತಾತನಾಗಿ, ಪತಿಯಾಗಿ, ಸ್ನೇಹಿತನಾಗಿ ಮತ್ತು ಒಬ್ಬ ಮನುಷ್ಯನಾಗಿ, ಅವರು ನಿರಾಯಾಸವಾಗಿ ಜೀವನ ಸಾಗಿಸಿದವರು ನನ್ನ ಅಪ್ಪಾಜಿ ಡಾ.ರಾಜಕುಮಾರ್ ಎಂದು ಪುನೀತ್ ರಾಜಕುಮಾರ್ ಆ ಪುಸ್ತಕದಲ್ಲಿ ಬರೆದುಕೊಂಡಿದ್ದರು.

   ಪುನೀತ್ ರಾಜಕುಮಾರ್ ತಾನು ಹೊರ ತಂದಿದ್ದ ಪುಸ್ತಕದಲ್ಲಿ ಬರೆದುಕೊಂಡಿದ್ದರು.

  ಪುನೀತ್ ರಾಜಕುಮಾರ್ ತಾನು ಹೊರ ತಂದಿದ್ದ ಪುಸ್ತಕದಲ್ಲಿ ಬರೆದುಕೊಂಡಿದ್ದರು.

  "ಅವರ ಜೊತೆಗೆ ಗಾಜನೂರಿಗೆ ಹಲವು ಬಾರಿ ಹೋಗಿದ್ದೆ. ಅಪ್ಪಾಜಿಗೆ ತಮ್ಮ ತಾಯಿಯ ಮೇಲೆ ಎಷ್ಟು ಪ್ರೀತಿಯೆಂದರೆ, ನೆಲದ ಮೇಲೆ ತೇಪೆ ಹಾಕಿದ ಜಾಗವನ್ನು ತೋರಿಸಿ, ಇದನ್ನು ಹಾಕಿದವರು ನಮ್ಮ ತಾಯಿ ಎಂದು ಹೇಳುತ್ತಿದ್ದರು. ತಂದೆ, ತಾಯಿ, ಒಡಹುಟ್ಟಿದವರನ್ನು ಪ್ರೀತಿಸುವ ಅವರ ಒಳ್ಳೆಯ ಗುಣ ನನ್ನಲ್ಲೂ ಇದೆ" ಎಂದು ಪುನೀತ್ ರಾಜಕುಮಾರ್ ತಾನು ಹೊರ ತಂದಿದ್ದ ಪುಸ್ತಕದಲ್ಲಿ ಬರೆದುಕೊಂಡಿದ್ದರು.

   ಪುನೀತ್ ರಾಜಕುಮಾರ್ ತಂದೆಯ ಬಗ್ಗೆ ಬರೆದಿದ್ದ ಪುಸ್ತಕದಲ್ಲಿ ಹೇಳಿದ್ದರು

  ಪುನೀತ್ ರಾಜಕುಮಾರ್ ತಂದೆಯ ಬಗ್ಗೆ ಬರೆದಿದ್ದ ಪುಸ್ತಕದಲ್ಲಿ ಹೇಳಿದ್ದರು

  ಸಂಸ್ಕೃತಿಗಿಂತ ಶಿಸ್ತು ಮುಖ್ಯ ಎಂದು ನಮ್ಮ ಅಪ್ಪಾಜಿ ಹೇಳುತ್ತಿದ್ದರು. ಶಿಸ್ತು ಇಲ್ಲದ ಮೇಲೆ ಸಂಸ್ಕೃತಿ ಇದ್ದರೆ ಏನು ಪ್ರಯೋಜನ. ನನಗೆ ಸಂತೋಷವಾಗುವ ವಿಷಯವೆಂದರೆ ನಮ್ಮೊಂದಿಗಿರುವುದು ಅವರು ಹೇಳಿಕೊಟ್ಟ ಎಲ್ಲವನ್ನೂ ಪಾಲಿಸುವುದು. ಇದನ್ನು ನಾನು ಮೊದಲು ಪಾಲಿಸುತ್ತಿದ್ದೆ ಎಂದು ಪುನೀತ್ ರಾಜಕುಮಾರ್ ತಂದೆಯ ಬಗ್ಗೆ ಬರೆದಿದ್ದ ಪುಸ್ತಕದಲ್ಲಿ ಹೇಳಿದ್ದರು.

  English summary
  Puneeth Rajkumar Death; Actor Once Said I am Not Different Than Dr Rajkumar. Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X