»   » ಸಾಧನೆಯತ್ತ ಸಾಗಿದ್ದ 'ಪುನೀತ್ ಅಭಿಮಾನಿ' ಗಿರಿಜಾ ಕುಮಾರಿ ಬರಿ ನೆನಪು ಮಾತ್ರ

ಸಾಧನೆಯತ್ತ ಸಾಗಿದ್ದ 'ಪುನೀತ್ ಅಭಿಮಾನಿ' ಗಿರಿಜಾ ಕುಮಾರಿ ಬರಿ ನೆನಪು ಮಾತ್ರ

Posted By:
Subscribe to Filmibeat Kannada

ದೊಡ್ಡ ಮಾಡೆಲ್ ಆಗಬೇಕು ಎನ್ನುವ ಕನಸು. ಮನೆಯವರು ವಿರೋಧಿಸಿದರೂ, ಅದೇ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಛಲ. ಎಲ್ಲ ಅಂದುಕೊಂಡಂತೆ ಮಾಡೆಲಿಂಗ್ ನಲ್ಲಿ ಯಶಸ್ಸಿನ ಪಯಣ ಶುರುವಾಗಿತ್ತು. ಇನ್ನೇನು ತನ್ನ ಗುರಿ ಮುಟ್ಟುತ್ತೇನೆ ಎಂಬ ಆಸೆಯಿಂದ ಇದ್ದ ಪ್ರತಿಭಾವಂತ ರೂಪದರ್ಶಿ ಇಹಲೋಕ ತ್ಯಜಿಸಿದ್ದಾಳೆ.

ಮಾಡೆಲ್ ಆಗಿದ್ದ ಆಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. ಅಪ್ಪು ಸಿನಿಮಾಗಳು, ಅಪ್ಪು ಫೈಟ್, ಅಪ್ಪು ಡ್ಯಾನ್ಸ್....ಹೀಗೆ ಪುನೀತ್ ಅಂದ್ರೆ ಆಕೆಗೆ ಪಂಚ ಪ್ರಾಣ. ಹೀಗಾಗಿ ಹಲವು ಬಾರಿ ಆಕೆ ಪುನೀತ್ ರಾಜ್ ಕುಮಾರ್ ಅವರನ್ನ ಭೇಟಿ ಕೂಡ ಮಾಡಿದ್ದಾರೆ.

ಆದ್ರೆ, ಕಣ್ಣಲ್ಲಿ ಸಾವಿರಾರು ಕನಸುಗಳನ್ನಿಟ್ಟುಕೊಂಡು, ಸಾಧಿಸುತ್ತ ಸಾಗುತ್ತಿದ್ದ ಅಪ್ಪು ಅಭಿಮಾನಿ ಈಗ ನೆನಪು ಮಾತ್ರ. ಮುಂದೆ ಓದಿ.....

ಅಪ್ಪು ಅಭಿಮಾನಿ 'ಗಿರಿಜಾ'

ಹೆಸರು ಗಿರಿಜಾ ಕುಮಾರಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಬನಶಂಕರಿಯಲ್ಲಿ ನೆಲೆಸಿದ್ದ ಗಿರಿಜಾ ಬೆಂಗಳೂರಿನವರೇ. ಜೊತೆ ಜೊತೆಗೆ ಮಾಡೆಲಿಂಗ್ ಈಕೆಯ ವೃತ್ತಿ ಆಗಿತ್ತು. ಸಿನಿಮಾ, ಮಾಡೆಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

ಇನ್ಮುಂದೆ ಯಾವ ನಿರ್ಮಾಪಕರ ಕೈಗೂ ಪುನೀತ್ ರಾಜ್ ಕುಮಾರ್ ಸಿಗಲ್ಲ.! ಯಾಕೆ.?

'ಪ್ರಿನ್ಸೆಸ್ ಸೌತ್ ಇಂಡಿಯಾ' ವಿಜೇತೆ

ಗಿರಿಜಾ ಕುಮಾರಿ ಮಾಡೆಲಿಂಗ್ ಮಾಡುವುದು ಮನೆಯವರಿಗೆ ಇಷ್ಟವಿರಲಿಲ್ಲ. ಆದ್ರೂ, ಅವರ ವಿರೋಧದ ನಡುವೆಯೂ ಗಿರಿಜಾ ಮಾಡೆಲಿಂಗ್ ಮಾಡುತ್ತಿದ್ದರು. ಅದಕ್ಕೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಕೂಡ ಸಿಕ್ಕಿತ್ತು. 'ಪ್ರಿನ್ಸೆಸ್ ಸೌತ್ ಇಂಡಿಯಾ' ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಸ್ಕಾಟ್ಲೆಂಡಿನಲ್ಲಿ ಕುಣಿದು ಕುಪ್ಪಳಿಸಿದ ಪುನೀತ್-ರಶ್ಮಿಕಾ

ಅಪ್ಪುಗೆ 'ದೊಡ್ಡ' ಅಭಿಮಾನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಈ ಗಿರಿಜಾ ಕುಮಾರಿ. ಅವರ ಜೊತೆಯಲ್ಲಿ ನಟಿಸಬೇಕೆಂಬ ದೊಡ್ಡ ಆಸೆ ಆಕೆಗಿತ್ತು. ಆ ಆಸೆ ಈಡೇರುವ ಮುನ್ನವೇ ಆಕೆ ಇಹಲೋಕ ತ್ಯಜಿಸಿದ್ದಾರೆ.

ಅಪ್ಪು ಗುರುತಿಸುತ್ತಿದ್ದರಂತೆ

ಆಗಾಗ ಪುನೀತ್ ಚಿತ್ರಗಳ ಶೂಟಿಂಗ್ ಸೆಟ್ ಗೆ ಭೇಟಿ ನೀಡುತ್ತಿದ್ದ ಗಿರಿಜಾ ಅವರನ್ನ ಅಪ್ಪು ಗುರುತಿಸುತ್ತಿದ್ದರಂತೆ. ಇನ್ನು ಅವರ ಜೊತೆ ಫೋಟೋ ತೆಗಿಸಿಕೊಂಡು ಖುಷಿ ಪಡುತ್ತಿದ್ದರು.

ಸಿನಿಮಾ ಆಫರ್ ಕೂಡ ಬಂದಿತ್ತು

'ಪ್ರಿನ್ಸೆಸ್ ಸೌತ್ ಇಂಡಿಯಾ' ಗೆದ್ದ ನಂತರ ಈಕೆಗೆ ಮೂರು ಕನ್ನಡ ಸಿನಿಮಾಗಳಲ್ಲಿ ಅವಕಾಶ ಕೂಡ ಬಂದಿತ್ತಂತೆ. ಇನ್ನು ಮಾತುಕತೆಯ ಹಂತದಲ್ಲಿದ್ದ ಕಾರಣ ಯಾವುದನ್ನೂ ಒಪ್ಪಿಕೊಂಡಿರಲಿಲ್ಲವೆಂದು ಸ್ವತಃ ಗಿರಿಜಾ ಅವರು ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಮಿಸ್ ಗಾರ್ಜಿಯಸ್' ಆಗಬೇಕೆಂಬ ಆಸೆ

'ಪ್ರಿನ್ಸೆಸ್ ಸೌತ್ ಇಂಡಿಯಾ' ಆಗಿದ್ದ ಗಿರಿಜಾಗೆ ಮುಂದೆ 'ಮಿಸ್ ಗಾರ್ಜಿಯಸ್' ಆಗಬೇಕೆಂಬ ಆಸೆ ಹೊಂದಿದ್ದರು. ಅದಕ್ಕೆ ಬೇಕಾದ ತಯಾರಿಯನ್ನ ಕೂಡ ಮಾಡಿಕೊಂಡಿದ್ದರು. ಆದ್ರೆ, ವಿಧಿಯ ಆಟವೇ ಬೇರೆಯಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಕಾರಣ ರಕ್ತದೊತ್ತಡ (Low Bp) ಕಡಿಮೆ ಆಗಿ ಅಸುನೀಗಿದ್ದಾರೆ. ಆಕೆಯೊಂದಿಗೆ ಆಕೆಯ ಆಸೆಗಳು ಕೂಡ ಕಮರಿ ಹೋಗಿದೆ.

English summary
Power Star Puneeth Rajkumar Big Fan, Model Girija Kumari passes away because of Low BP.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada