»   » ರಚಿತಾ ರಾಮ್ ವಿರುದ್ಧ ಪುನೀತ್ ಫ್ಯಾನ್ಸ್ ಸಮರ

ರಚಿತಾ ರಾಮ್ ವಿರುದ್ಧ ಪುನೀತ್ ಫ್ಯಾನ್ಸ್ ಸಮರ

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾ ಅಭಿಮಾನಿಗಳು ಮತ್ತೆ ವಾಕ್ಸಮರ ಶುರು ಮಾಡಿದ್ದಾರೆ. ಇಲ್ಲಿಯವರೆಗೂ ಸುದೀಪ್ ವಿರುದ್ಧ ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು, ಯಶ್ ವಿರುದ್ಧ ದರ್ಶನ್ ಅಭಿಮಾನಿಗಳು ಮಾತಿನ ಚಕಮಕಿ ನಡೆಸುತ್ತಿದ್ದರು.

ಈಗ ಇದೇ ಯುದ್ಧದಲ್ಲಿ ನಟಿ ರಚಿತಾ ರಾಮ್ ಸಿಲುಕಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ಚಕ್ರವ್ಯೂಹ' ಚಿತ್ರದ ನಾಯಕಿ ಆಗಿ ನಟಿ ರಚಿತಾ ರಾಮ್ ಸೆಲೆಕ್ಟ್ ಆಗಿದ್ದಾರೆ. [ಫೇಸ್ ಬುಕ್ ನಲ್ಲಿ ಕಿಚ್ಚ ಸುದೀಪ್ ಪರ ಯಶ್ ಸಮರ.!]

ತಲೆ ಮೇಲೆ ತಲೆ ಬಿದ್ದರೂ, ಪುನೀತ್ ರಾಜ್ ಕುಮಾರ್ ಅಭಿನಯಿಸುವ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಬಾರದು ಅಂತ ಅಪ್ಪು ಫ್ಯಾನ್ಸ್ ಪಟ್ಟು ಹಿಡಿದು ಕೂತಿದ್ದಾರೆ. ಈ ಸಂಬಂಧ ಫೇಸ್ ಬುಕ್ ನಲ್ಲಿ ದೊಡ್ಡ ವಾರ್ ನಡೆಯುತ್ತಿದೆ. ಮುಂದೆ ಓದಿ.....

'ಚಕ್ರವ್ಯೂಹ' ಭೇದಿಸಲಿರುವ ರಚಿತಾ ರಾಮ್

'ಚಕ್ರವ್ಯೂಹ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಅವಕಾಶ ನಟಿ ರಚಿತಾ ರಾಮ್ ರನ್ನ ಹುಡುಕಿಕೊಂಡು ಬಂದಿದೆ. ಅಸಲಿಗೆ, ಪಂಜಾಬಿ ಹುಡುಗಿ ಸೋನಂ ಬಾಜ್ವಾ 'ಚಕ್ರವ್ಯೂಹ' ಚಿತ್ರದ ನಾಯಕಿಯಾಗಿ ಸೆಲೆಕ್ಟ್ ಆಗಿದ್ದರು. ಕಾರಣಾಂತರಗಳಿಂದ ಸೋನಂ ಬಾಜ್ವಾ ಕೈಬಿಟ್ಟ ಚಿತ್ರತಂಡ ರಚಿತಾ ರಾಮ್ ರನ್ನ ಫೈನಲ್ ಮಾಡಿದೆ. ಪಾತ್ರವನ್ನ ಅಳೆದು ತೂಗಿ ನಟಿ ರಚಿತಾ ರಾಮ್ ಕೂಡ 'ಚಕ್ರವ್ಯೂಹ' ಭೇದಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸುದ್ದಿ ಜಗಜ್ಜಾಹೀರಾಗ್ತಿದ್ದಂತೆ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ದೊಡ್ಡ ರಂಪ ಶುರುವಾಗಿದೆ. [ಪುನೀತ್ ಚಕ್ರವ್ಯೂಹ ಭೇದಿಸಲಿರುವ ಬುಲ್ ಬುಲ್ ರಾಣಿ]

ರಚಿತಾ ಬೇಡ...ರಚಿತಾ ಬೇಡ...

''ಚಕ್ರವ್ಯೂಹ' ಹೀರೋಯಿನ್ ಆಗಿ ರಚಿತಾ ರಾಮ್ ಸೆಲೆಕ್ಟ್ ಆದ್ರೆ, ಚಿತ್ರದ ಕಲೆಕ್ಷನ್ ವಿಚಾರದಲ್ಲಿ ಅಡ್ಡ ಪರಿಣಾಮ ಆಗುವುದು ಖಚಿತ. ಪುನೀತ್ ಗಾಗಿ ಕೇವಲ ಒಂದು ಬಾರಿ ಮಾತ್ರ ಅಪ್ಪು ಫ್ಯಾನ್ಸ್ ಸಿನಿಮಾ ನೋಡಬಹುದು. ಆದ್ರೆ, ಹೆಚ್ಚು ಕಲೆಕ್ಷನ್ ನಿರೀಕ್ಷಿಸಬೇಡಿ. ಒಂದು ವೇಳೆ ಸಿನಿಮಾ ಹಿಟ್ ಆದರೆ, ಅದಕ್ಕೆ ಪುನೀತ್ ರಾಜ್ ಕುಮಾರ್ ಮತ್ತು ಸರವಣನ್ ಕಾರಣ. ದಯವಿಟ್ಟು ಹೀರೋಯಿನ್ ಚೇಂಜ್ ಮಾಡಿ. ರಚಿತಾ ಬೇಡ.'' ಹೀಗಂತ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸಂದೇಶಗಳು ಹರಿದಾಡುತ್ತಿವೆ.

'ರಣವಿಕ್ರಮ'ದಲ್ಲೇ ಒಂದಾಗಬೇಕಿತ್ತು.!

ಹಾಗ್ನೋಡಿದ್ರೆ, 'ರಣವಿಕ್ರಮ' ಚಿತ್ರದಲ್ಲಿ ಅಪ್ಪು ಜೊತೆ ರಚಿತಾ ರಾಮ್ ಅಭಿನಯಿಸಬೇಕಿತ್ತು. ಆದ್ರೆ, ಅದು ಸಾಧ್ಯವಾಗ್ಲಿಲ್ಲ. 'ಅಂಬರೀಶ' ಚಿತ್ರದಲ್ಲಿ ಬಿಜಿಯಿದ್ದ ರಚಿತಾ, ಡೇಟ್ಸ್ ಇಲ್ಲದ ಕಾರಣ 'ರಣವಿಕ್ರಮ' ಚಿತ್ರವನ್ನ ಒಪ್ಪಿಕೊಳ್ಳಲಿಲ್ಲ. ನಂತ್ರ ರಚಿತಾ ಜಾಗಕ್ಕೆ ಅದಾ ಶರ್ಮಾರನ್ನ ಕರೆತರಲಾಯ್ತು.

ಅಂದು ರಚಿತಾ ರಿಜೆಕ್ಟ್ ಆಗಿದ್ರಾ?

ರಚಿತಾ ರಾಮ್ ಜೊತೆ ಮಾತುಕತೆ ನಡೆಸುವ ಮುನ್ನವೇ ಆಕೆ 'ರಣವಿಕ್ರಮ' ನಾಯಕಿ ಅಂತ ಜಗಜ್ಜಾಹೀರಾಗಿತ್ತಂತೆ. ನಂತ್ರ ಎಲ್ಲಾ ಸುದ್ದಿಗಳನ್ನ ತಳ್ಳಿ ಹಾಕಿ 'ರಣವಿಕ್ರಮ' ಚಿತ್ರತಂಡ ಅಂಜಲಿ ಮತ್ತು ಅದಾ ಶರ್ಮಾ ಅವರನ್ನ ಕರೆತಂದರು ಅಂತ ಅಂದು ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು.

ಹಿಂದಿತ್ತಾ ದೊಡ್ಡ 'ಚಾಲೆಂಜ್'

ರಚಿತಾ ರಾಮ್ 'ರಣವಿಕ್ರಮ' ಸಿನಿಮಾ ಕೈಬಿಡುವುದಕ್ಕೆ ಚಾಲೆಂಜಿಂಗ್ ಸ್ಟಾರ್ ಕಾರಣ ಅಂತ ಅಂದು ಗಾಸಿಪ್ ಹಬ್ಬಿಸಿದವರೇ ಹೆಚ್ಚು. ಇದಕ್ಕೂ ಒಂದು ಕಾರಣ ಇದೆ. ಅದನ್ನ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

'ಐರಾವತ' ದಿಂದ ಎರಿಕಾ ಔಟ್

'ರಣವಿಕ್ರಮ' ಚಿತ್ರದಿಂದ ರಚಿತಾ ರಾಮ್ (ದರ್ಶನ್ ಜೊತೆ 'ಬುಲ್ ಬುಲ್' ಚಿತ್ರದಲ್ಲಿ ನಟಿಸಿದ್ದರು) ಔಟ್ ಆಗಿದ್ದಕ್ಕೆ, 'ಐರಾವತ' ಚಿತ್ರದಿಂದ ನಾಯಕಿ ಎರಿಕಾ ಫರ್ನಾಂಡಿಸ್ (ಪುನೀತ್ ಜೊತೆ 'ನಿನ್ನಿಂದಲೇ' ಚಿತ್ರದಲ್ಲಿ ನಟಿಸಿದ್ದರು) ಔಟ್ ಮಾಡಲಾಯ್ತು ಅಂತ ಸಂಬಂಧ ಇಲ್ಲದ ವಿಷಯಗಳಿಗೆ ತಳುಕು ಹಾಕಲಾಗಿತ್ತು. [ನಿನ್ನಿಂದಲೇ ಚಿತ್ರದ ನಾಯಕಿ ದರ್ಶನ್ ಚಿತ್ರದಿಂದ ಔಟ್]

ಅಂದಿನ ಅಂತೆ-ಕಂತೆಗೆ ಈಗ ಹೊಸ ಬಣ್ಣ

ಈ ಎಲ್ಲಾ ಅಂತೆ-ಕಂತೆಗಳನ್ನ ಕೇಳಿ ಕೇಳಿ ಈಗ ರಚಿತಾ ರಾಮ್ ವಿರುದ್ಧ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಸುದೀಪ್ ಮತ್ತು ದರ್ಶನ್ ಪಾಳಯದಲ್ಲಿದ್ದ ರಚಿತಾ ರಾಮ್, ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ ನಟಿಸಬಾರದು ಅಂತ ಪವರ್ ಸ್ಟಾರ್ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಚಿತ್ರ

'ಚಕ್ರವ್ಯೂಹ' ಸಿನಿಮಾ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಖತ್ ಸ್ಪೆಷಲ್. ಯಾಕಂದ್ರೆ, ಇದು ಅಪ್ಪು ಅವರ 25ನೇ ಸಿನಿಮಾ. ಕಾಲಿವುಡ್ ನ ಸೆನ್ಸೇಷನಲ್ ಡೈರೆಕ್ಟರ್ ಸರವಣನ್ 'ಚಕ್ರವ್ಯೂಹ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಂತಹ ಚಿತ್ರದಲ್ಲಿ ರಚಿತಾ ಬೇಡ ಅನ್ನೋದು 'ಪವರ್ ಹೌಸ್' ಅಭಿಮಾನಿಗಳ ಆಗ್ರಹ. ['ಚಕ್ರವ್ಯೂಹ' ಭೇದಿಸಲಿರುವ ಪವರ್ ಸ್ಟಾರ್ ಪುನೀತ್]

ರಚಿತಾ ಯಾಕೆ ಬೇಡ.?

'ರಣವಿಕ್ರಮ' ಸಿನಿಮಾ ಪ್ರದರ್ಶನದ ವೇಳೆ 'ರನ್ನ' ಟ್ರೈಲರ್ ನೋಡಿ ಅಭಿಮಾನಿಗಳು ರೊಚ್ಚಿಗೆದ್ದ ಘಟನೆ ಇನ್ನೂ ಗಾಂಧಿನಗರದಲ್ಲಿ ಮಾಸಿಲ್ಲ. ಇನ್ನು ದರ್ಶನ್ ಮತ್ತು ಸುದೀಪ್ ಜೊತೆ ರೋಮ್ಯಾನ್ಸ್ ಮಾಡಿದ್ದ ರಚಿತಾ, ಅಪ್ಪು ಜೊತೆ ಕಾಣಿಸಿಕೊಂಡರೆ ಅಪ್ಪು ಅಭಿಮಾನಿಗಳಿಗೆ ಅದಕ್ಕಿಂತ ಸಹಿಸಲಸಾಧ್ಯವಾದ ಸಂಗತಿ ಮತ್ತೊಂದಿಲ್ಲ. ['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]

ಟ್ರೆಂಡಿಂಗ್ ಆಗ್ತಿದೆ ''ರಚಿತಾ ಬೇಡ''!

'ಚಕ್ರವ್ಯೂಹ' ಚಿತ್ರದಲ್ಲಿ ''ರಚಿತಾ ರಾಮ್ ಬೇಡ'' ಅನ್ನೋದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಹೀಗೆ ಮುಂದುವರಿದರೆ, ಅಭಿಮಾನಿಗಳು ಹೆಣೆಯುತ್ತಿರುವ ಈ ಹೊಸ 'ಚಕ್ರವ್ಯೂಹ'ದಿಂದ ಅಪ್ಪು ಹೇಗೆ ಹೊರಬರುತ್ತಾರೋ?!

English summary
Puneeth Rajkumar fans have taken Social Media to express their anger for casting Actress Rachita Ram in 'Chakravyuha'. Appu fans does not want Rachitha Ram to pair up with Puneeth Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada