Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ'ಗೆ ಬೆಂಬಲ ನೀಡಲ್ಲ: ದರ್ಶನ್ ಕ್ಷಮೆ ಕೇಳಲೇಬೇಕು ಪುನೀತ್ ಫ್ಯಾನ್ಸ್ ಆಕ್ರೋಶ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ 'ಕ್ರಾಂತಿ' ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದರ್ಶನ್ ಸಂದರ್ಶನವೊಂದರಲ್ಲಿ ಆಡಿದ ಮಾತು ವಿವಾದಕ್ಕೆ ತಿರುಗಿದೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ದರ್ಶನ್ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ದರ್ಶನ್ ಕೊಟ್ಟ ಒಂದೇ ಒಂದು ಹೇಳಿಕೆ ಈಗ ಪುನೀತ್ ಅಭಿಮಾನಿಗಳ ನಿದ್ದೆಕೆಡಿಸಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದು, ಅಪ್ಪು ಫ್ಯಾನ್ಸ್ ಆಕ್ರೋಶಕ್ಕೆ ಕಾರಣ. ಇನ್ನೇನು ಕ್ರಾಂತಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವಾಗಲೇ ದರ್ಶನ್ ಸುತ್ತ ಮತ್ತೊಂದು ವಿವಾದ ಸುತ್ತಿಕೊಂಡಿದೆ.
ದರ್ಶನ್
ಬಗ್ಗೆ
ಅಪ್ಪು
ಫ್ಯಾನ್ಸ್
ಅಸಮಾಧಾನ:
ನಡೆದಿದ್ದು
ಏನು?
ದರ್ಶನ್ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. 'ಕ್ರಾಂತಿ' ಸಿನಿಮಾ ರಿಲೀಸ್ ಮಾಡುವುದಕ್ಕೆ ಬಿಡುವುದಿಲ್ಲ ಅಂತ ಪಟ್ಟು ಹಿಡಿದು ಕೂತಿದ್ದಾರೆ. ಅಷ್ಟಕ್ಕೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಡಿಮ್ಯಾಂಡ್ ಏನು? ದರ್ಶನ್ ಹೇಳಿಕೆ ಬಗ್ಗೆ ಅವರು ಏನಂತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಪ್ಪು ಸಾವಿನ ಬಗ್ಗೆ ಮಾತಾಡಿ ಪೇಚಿಗೆ ಸಿಲುಕಿದ ದರ್ಶನ್
ದರ್ಶನ್ ಸಂದರ್ಶನದ ವೇಳೆ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದರು. "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು. ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಫ್ಯಾನ್ಸ್‌ಗಳು ನಾನು ಬದುಕಿದ್ದಾಗಲೇ ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು ಅನಿಸಬಿಡ್ತು. ಬಿಡಯ್ಯ ಇದಕ್ಕಿಂತ ಇನ್ನೇನು ಬೇಕು." ಅಂತ ಹೇಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಸೆಲೆಬ್ರಿಟಿಗಳಿಗೋಸ್ಕರ
ಆ
ನಿಯಮ
ಮುರಿಯುತ್ತಾರಾ
ಚಾಲೆಂಜಿಂಗ್
ಸ್ಟಾರ್?

ದರ್ಶನ್ ಕ್ಷಮೆ ಕೇಳಬೇಕು
ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದು ಅಪ್ಪು ಅಭಿಮಾನಿಗಳಿಗೆ ಹಿಡಿಸಿಲ್ಲ. ಹೀಗಾಗಿ ಬೆಂಗಳೂರು, ಹೊಸಪೇಟೆ, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಪ್ಪು ಸಾವಿನ ಬಗ್ಗೆ ಮಾತಾಡಿದ್ದಕ್ಕೆ ದರ್ಶನ್ ಕ್ಷಮೆ ಕೇಳಲೇ ಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಹೊಸಪೇಟೆಯ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹೇಳಿದ್ದಾರೆ.

'ಕ್ರಾಂತಿ' ರಿಲೀಸ್ ಮಾಡಲು ಬಿಡಲ್ಲ
ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಪ್ಪು ಪ್ರತಿಮೆ ಮುಂದೆ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ. "ನಾವು ಎಷ್ಟು ಬೇಜಾರಾಗಿದ್ದೇವೆ ಅನ್ನೋದು ಆ ಪುಣ್ಯಾತ್ಮನಿಗೆ ಗೊತ್ತು. ಅಂತಹದ್ರಲ್ಲಿ ಮತ್ತೆ ಇವರು ನೋವು ಕೊಟ್ಟಿದ್ದಾರಲ್ಲಾ. ಶಿಷ್ಯಂದಿರು ಸರಿಯಿಲ್ಲ ಅಂದ್ರೆ ಗುರುಗಳು ಹೇಗೆ ಸರಿ ಇರ್ತಾರೆ. ಗುರುಗಳು ಸರಿಯಿಲ್ಲ ಅಂದ್ರೆ ಶಿಷ್ಯಂದಿರು ಹೇಗೆ ಸರಿಯಿರ್ತಾರೆ? ಹಾಗಾಗಿ ಆದಷ್ಟೇ ಬೇಗ ಅಪ್ಪು ಸರ್‌ಗೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ರೆ ಸರಿ. ಅವರು ಕ್ಷಮೆ ಕೇಳುವವರೆಗೆ ಅವರ 'ಕ್ರಾಂತಿ' ಸಿನಿಮಾವನ್ನು ಎಲ್ಲೂ ಬಿಡಬಾರದು." ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿನಿಮಾ ರಿಲೀಸ್ ಆಗೋಕೆ ಬಿಡಲ್ಲ
" ದರ್ಶನ್ ಕ್ಷಮೆ ಕೇಳಿಲ್ಲ ಅಂದ್ರೆ, ಅವರ ಸಾಯೋವರೆಗೂ ಅವರ ಸಿನಿಮಾವನ್ನು ಹೊಸಪೇಟೆಯಲ್ಲಿ ರಿಲೀಸ್ ಆಗುವುದಕ್ಕೆ ಬಿಡುವುದಿಲ್ಲ. ದರ್ಶನ್ ಮೊದಲಿನಿಂದ ದೊಡ್ಮನೆಯ ಕಾಲು ಧೂಳಿಗೂ ಸಮಯಿಲ್ಲ ಅಂತ ಹೇಳುತ್ತಿದ್ರಿ. ಅಲ್ಲಿಂದ ಬಂದಿದ್ದು, ಅವರೇ ನಮ್ಮನ್ನು ಬೆಳೆಸಿದ್ದು ಎಂದು ಹೇಳುತ್ತಿದ್ರಿ. ಇವತ್ತು ನಿಮ್ಮ ಬಾಯಿಗಳಲ್ಲಿ ಯಾಕೆ ಇಂತಹ ಮಾತು ಬರುತ್ತಿದೆ" ಎಂದು ವಿಜಯನಗರ ಹಾಗೂ ಉತ್ತರ ಕನ್ನಡ ಭಾಗದ ಅಖಿಲ ಕರ್ನಾಟಕ ರಾಜವಂಶ ಕನ್ನಡ ಯುವಸೇನೆ ಆಕ್ರೋಶ ಹೊರಹಾಕಿದೆ.