Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
8 ದಿನದಲ್ಲೇ ಅಮೇಜಾನ್‌ಗೆ ಬಂದ ಯುವರತ್ನ: ಅಪ್ಪು ಫ್ಯಾನ್ಸ್ ಬೇಸರ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿರುವ ಯುವರತ್ನ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ಭೀತಿಯ ನಡುವೆಯೂ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಸಿನಿಮಾ ಬಿಡುಗಡೆಯಾಗಿ ಕೇವಲ ಏಂಟು ದಿನಗಳು ಕಳೆದಿದೆ. ಅಷ್ಟರಲ್ಲೇ ಯುವರತ್ನ ಚಿತ್ರವನ್ನು ಅಮೇಜಾನ್ ಪ್ರೈಮ್ ಪ್ರಸಾರ ಮಾಡುವುದಾಗಿ ಪ್ರಕಟಿಸಿದೆ.
ಕನ್ನಡ, ತೆಲುಗು ಜೊತೆಗೆ ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಯುವರತ್ನ ಚಿತ್ರವನ್ನು ಅಮೇಜಾನ್ ಪ್ರೈಮ್ ಏಪ್ರಿಲ್ 9 ರಂದ ಪ್ರಸಾರ ಮಾಡುತ್ತಿದೆ. ಚಿತ್ರಕ್ಕೆ ಒಳ್ಳೆಯ ಟಾಕ್ ಇದ್ದರೂ ಇಷ್ಟು ಬೇಗ ಒಟಿಟಿಯಲ್ಲಿ ಪ್ರಸಾರ ಮಾಡ್ತಿರುವುದಕ್ಕೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಇಷ್ಟು ಬೇಗ ಬೇಡ
ಅಮೇಜಾನ್ ಪ್ರೈಮ್‌ನಲ್ಲಿ ಯುವರತ್ನ ಪ್ರಸಾರದ ಸುದ್ದಿ ತಿಳಿಯುತ್ತಿದ್ದಂತೆ ಪುನೀತ್ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ''ರಾಜ್ಯಾದ್ಯಂತ ಒಳ್ಳೆಯ ಪ್ರದರ್ಶನ ಕಾಣ್ತಿದೆ. 50 ಪರ್ಸೆಂಟ್ ಜಾರಿಯಾಗಿದ್ದರೂ ಜನ ಸಿನಿಮಾ ನೋಡ್ತಾರೆ. 50 ದಿನ ಆದ್ಮೇಲೆ ಕೊಡಿ'' ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
'ಕ್ಲಿಷ್ಟಕರ
ಸನ್ನಿವೇಶ'ದ
ಒತ್ತಡ:
'ಯುವರತ್ನ'
ಸಿನಿಮಾ
ಒಟಿಟಿಗೆ,
ದಿನಾಂಕ
ಪ್ರಕಟ

ಒಂದು ವಾರದಲ್ಲೇ ಅಗತ್ಯ ಏನಿತ್ತು?
'ಸಿನಿಮಾ ರಿಲೀಸ್ ಆಗಿ ಎರಡು ವಾರ ಪೂರ್ಣಗೊಂಡಿಲ್ಲ. ಅಷ್ಟು ಬೇಗ ಒಟಿಟಿಯಲ್ಲಿ ಪ್ರಸಾರ ಮಾಡುವ ಅಗತ್ಯ ಏನಿತ್ತು' ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಏಪ್ರಿಲ್ 1 ರಂದು ಯುವರತ್ನ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು.

ನಿಜಕ್ಕೂ ಬೇಸರ
'ಕೋವಿಡ್ ಕಾರಣದಿಂದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದೇವೆ. ಹಾಗಾಗಿ ಯುವರತ್ನ ಚಿತ್ರವನ್ನು ಒಟಿಟಿಯಲ್ಲಿ ಇಷ್ಟು ಬೇಗ ಪ್ರಸಾರ ಮಾಡಲಾಗುತ್ತಿದೆ. ಜನರು ಕೂಡ ಥಿಯೇಟರ್‌ಗೆ ಬರೋಕೆ ಆಗ್ತಿಲ್ಲ, ಒಟಿಟಿಯಲ್ಲಿ ರಿಲೀಸ್ ಮಾಡಿ ಎಂದು ಮನವಿ ಮಾಡಿದ್ದಾರೆ, ಹಾಗಾಗಿ, ಇಷ್ಟು ಬೇಗ ಒಟಿಟಿಗೆ ಬರಬೇಕಾಯಿತು' ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟನೆ ನೀಡಿದ್ದಾರೆ. ಆದರೂ ಚಿತ್ರತಂಡ ನಿರ್ಧಾರದಿಂದ ಕೆಲವು ಅಭಿಮಾನಿಗಳು ನಿರಾಸೆಯಾಗಿದ್ದಾರೆ.

ಇದು ಸೂಕ್ತ ನಿರ್ಧಾರವಲ್ಲ
'ಪ್ರೇಕ್ಷಕರು ಚಿತ್ರವನ್ನು ಸಿನಿಮಾ ಹಾಲ್‌ನಲ್ಲಿ ನೋಡಿಯೇ ಎಂಜಾಯ್ ಮಾಡುತ್ತಿದ್ದಾರೆ. ಹೀಗಿರುವಾಗ ಒಟಿಟಿಯಲ್ಲಿ ಪ್ರಸಾರ ಮಾಡುವುದು ಸೂಕ್ತ ನಿರ್ಧಾರವಲ್ಲ' ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Recommended Video

ವಕೀಲ್ ಸಾಬ್ ರಿಲೀಸ್ ಏಕೆ?
''ಕೋವಿಡ್ ಕ್ಲಿಷ್ಟಕರ ಪರಿಸ್ಥಿತಿ ಎಂದು ಹೇಳುವುದಾದರೇ ತೆಲುಗು ಸಿನಿಮಾ ವಕೀಲ್ ಸಾಬ್ ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿರುವುದೇಕೆ? ಆ ಚಿತ್ರವನ್ನು ಒಟಿಟಿಗೆ ಕೊಡಬಹುದಿತ್ತು ಅಲ್ಲವೇ. ಈ ಲಾಜಿಕ್ ಯುವರತ್ನ ಚಿತ್ರಕ್ಕೆ ಏಕೆ?'' ಎಂದು ನೆಟ್ಟಿಗನೊಬ್ಬ ಪ್ರಶ್ನಿಸಿದ್ದಾರೆ.