For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಚಿತ್ರದ ಎರಡನೆಯ ಭಾಗದ ಡಬ್ಬಿಂಗ್ ಆರಂಭ

  |

  ಸಂತೋಷ್ ಆನಂದ್ ರಾಮ್ ನಿರ್ದೇಶನದ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಎರಡನೆಯ ಭಾಗದ ಡಬ್ಬಿಂಗ್ ಕಾರ್ಯ ಸೋಮವಾರ ಆರಂಭವಾಗಿದೆ.

  ಬಿಡುಗಡೆಗೆ ಸಿದ್ಧವಾಗಿದೆ ಸ್ಟಾರ್ ನಟರ ಸಿನಿಮಾಗಳು | Darshan | Puneeth RajKumar | FILMIBEAT KANNADA

  ಈ ಸಂಗತಿಯನ್ನು ನಟ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಫೋಟೊ ಮೂಲಕ ಹಂಚಿಕೊಂಡಿದ್ದಾರೆ. ಇಬ್ಬರೂ ಜತೆಗಿರುವ ಫೋಟೊಕ್ಕೆ ಯುವರತ್ನದ ಹಾಡಿನ ಸಂಗೀತವನ್ನು ನೀಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಮರಳಿ ಟ್ರ್ಯಾಕ್‌ಗೆ' ಎಂದು ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.

  ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು 'ಯುವರತ್ನ'ದ ಪುನೀತ್ ರಾಜ್ ಕುಮಾರ್ ಹೊಸ ಸ್ಟಿಲ್ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು 'ಯುವರತ್ನ'ದ ಪುನೀತ್ ರಾಜ್ ಕುಮಾರ್ ಹೊಸ ಸ್ಟಿಲ್

  ಯುವರತ್ನ ಚಿತ್ರ ಕುರಿತಂತೆ ಸಿನಿಮಾ ತಂಡದಿಂದ ಯಾವುದೇ ಅಪ್‌ಡೇಟ್ಸ್ ಇಲ್ಲ ಎಂದು ಪುನೀತ್ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ದ್ವಿತೀಯಾರ್ಧದ ಡಬ್ಬಿಂಗ್ ಆರಂಭವಾಗಿರುವ ಸಂಗತಿ ಅವರು ಖುಷಿ ನೀಡಿದೆ. ಮೇ 27ರಂದು ಚಿತ್ರದ ಹಾಡು ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಹರಡಿತ್ತು. ಅದನ್ನು ಸಂತೋಷ್ ಆನಂದ್ ರಾಮ್ ನಿರಾಕರಿಸಿದ್ದರು.

  ಅಂದು ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಸಿನಿಮಾಗಳ ಪರ ದನಿ ಎತ್ತಿದ್ದ ಪುನೀತ್ ತೋರಿಸಿದ ರಾಜಮಾರ್ಗ! ಅಂದು ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಸಿನಿಮಾಗಳ ಪರ ದನಿ ಎತ್ತಿದ್ದ ಪುನೀತ್ ತೋರಿಸಿದ ರಾಜಮಾರ್ಗ!

  ಹಾಗೆಯೇ ಪುನೀತ್ ಅಭಿಮಾನಿಯೊಬ್ಬರು ಡಾ. ರಾಜ್ ಕುಮಾರ್ ಅವರು ಗೋವಾದಲ್ಲಿ ಸಿಐಡಿ 999 ಚಿತ್ರದ ದೃಶ್ಯ ಹಂಚಿಕೊಂಡು, ಅಪ್ಪು ಸರ್‌ಗಾಗಿ ನೀವೇಕೆ ಈ ರೀತಿ ಸಿನಿಮಾ ಮಾಡಬಾರದು ಎಂದು ಕೇಳಿದ್ದರು. ಅದಕ್ಕೆ ಸಂತೋಷ್, 'ನಾನೂ ಕೂಡ ಅಪ್ಪು ಸರ್‌ ಅವರನ್ನು ಜೇಮ್ಸ್ ಬಾಂಡ್ ಆಗಿ ನೋಡಲು ಕಾಯುತ್ತಿದ್ದೇನೆ. ಅದಕ್ಕಾಗಿ ಪ್ರಯತ್ನಿಸುತ್ತೇನೆ' ಎಂದು ಭರವಸೆ ನೀಡಿದ್ದರು.

  English summary
  Director Santhosh Ananddram and Puneeth Rajkumar has shared updates on Yuvarthnaa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X