For Quick Alerts
  ALLOW NOTIFICATIONS  
  For Daily Alerts

  1 ರೂಪಾಯಿ ತೆಗೆದುಕೊಳ್ಳದೆ 'BMTC'ಗೆ ರಾಯಬಾರಿಯಾದ ಪುನೀತ್

  |
  Puneeth Rajkumar will be BMTC brand ambassador | PUNEETH RAJKUMAR | BMTC | SANDALWOOD | KARNATAKA

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯಾವುದೇ ದುಡ್ಡು ತೆಗೆದುಕೊಳ್ಳದೆ ನಂದಿನಿ ಹಾಲಿಗೆ ರಾಯಬಾರಿಯಾಗಿದ್ದರು. ಇದೀಗ ರಾಜ್ಯ ಸರ್ಕಾರದ ಮತ್ತೊಂದು ಯೋಜನೆಗೆ ಹಣ ಪಡೆಯದೆ ಪುನೀತ್ ಬ್ರಾಂಡ್ ಅಂಬಾಸಿಟರ್ ಆಗಿದ್ದಾರೆ.

  ಬಿಎಂಟಿಸಿ (Bangalore Metropolitan Transport Corporation) ಸಂಸ್ಥೆಯ ಹೊಸ ರಾಯಬಾರಿಯಾಗಿ ಪುನೀತ್ ರಾಜ್ ಕುಮಾರ್ ಆಯ್ಕೆ ಆಗಿದ್ದಾರೆ. ಬಿಎಂಟಿಸಿ ಸಂಸ್ಥೆ ಪುನೀತ್ ರನ್ನು ಸಂಪರ್ಕ ಮಾಡಿದ್ದು, ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇದಕ್ಕೆ ಅವರು ಯಾವುದೇ ಹಣವನ್ನು ತೆಗೆದುಕೊಂಡಿಲ್ಲ.

  ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪುನೀತ್ ರಾಜ್ ಕುಮಾರ್ ವರ್ಕೌಟ್ ವಿಡಿಯೋಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪುನೀತ್ ರಾಜ್ ಕುಮಾರ್ ವರ್ಕೌಟ್ ವಿಡಿಯೋ

  ಈ ವಿಷಯವನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರನ್ನು ನಂದೀಶ್ ರೆಡ್ಡಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಖಾ, ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಅನುಪಮ ಅಗರ್ ವಾಲ್ ಭೇಟಿ ಮಾಡಿದ್ದಾರೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪುನೀತ್ ಈ ಪ್ರಾಜೆಕ್ಟ್ ಗೆ ಓಕೆ ಹೇಳಿದ್ದಾರೆ.

  ಅಂದಹಾಗೆ, ವರನಟ ಡಾ ರಾಜ್ ಕುಮಾರ್ ನಂದಿನಿ ಹಾಲಿಗೆ ಯಾವುದೇ ಹಣ ಪಡೆಯದೆ ರಾಯಬಾರಿ ಆಗಿದ್ದರು. ಅದನ್ನೇ ಮುಂದುವರೆಸಿದ ಪುನೀತ್ ನಂದಿನಿ ಪ್ರಾಜೆಕ್ಟ್ ಗೆ ಹಣ ಪಡೆಯಲಿಲ್ಲ. ಇದೀಗ ಬಿಎಂಟಿಸಿ ಯಿಂದ ಕೂಡ ದುಡ್ಡು ಪಡೆದಿಲ್ಲ.

  ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

  ಉಳಿದಂತೆ, ನಟ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದ 2020ಕ್ಕೆ ಬಿಡುಗಡೆ ಆಗಲಿದೆ.

  English summary
  Puneeth Rajkumar is the new brand ambassador for BMTC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X