Don't Miss!
- Sports
ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಪುನೀತ್ ಕೊನೆಯ ಸಿನಿಮಾ 'ಜೇಮ್ಸ್' ನಿರ್ಮಾಪಕ ಆಸ್ಪತ್ರೆಗೆ ದಾಖಲು: ಹೇಗಿದೆ ಸ್ಥಿತಿ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಆರೋಗ್ಯದಲ್ಲಿ ಏರು-ಪೇರಾಗಿದೆ. ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡಗೆ ಹೈ ಬಿಪಿಯಿಂದ ಸ್ಟ್ರೋಕ್ ಅಟ್ಯಾಕ್ ಆಗಿತ್ತು ಎನ್ನುವ ಮಾಹಿತಿ ಆಪ್ತ ವಲಯದಿಂದ ತಿಳಿದು ಬಂದಿದೆ. ಹೀಗಾಗಿ ತಕ್ಷಣವೇ ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪುನೀತ್
ಧ್ವನಿ
ಅಳವಡಿಸಿ
'ಜೇಮ್ಸ್'
ಸಿನಿಮಾ
ಮರುಬಿಡುಗಡೆ:
ಮತ್ತೆ
ಸಂಭ್ರಮಿಸಿದ
ಅಪ್ಪು
ಫ್ಯಾನ್ಸ್?
'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಕಿಶೋರ್ ಪತ್ತಿಕೊಂಡ ಸ್ಥಿತಿ ಗಂಭೀರವಾಗಿದ್ದು ಕೋಮಾದಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಆಪ್ತವಲಯದಿಂದ ತಿಳಿದುಬಂದಿದೆ.

ನಿರ್ಮಾಪಕ ಕಿಶೋರ್‌ಗೆ ಬ್ರೈನ್ ಸ್ಟ್ರೋಕ್
ಕಿಶೋರ್ ಪತ್ತಿಕೊಂಡ 'ಜೇಮ್ಸ್' ಸಿನಿಮಾದ ನಿರ್ಮಾಪಕ. ನಿನ್ನೆ(ಜುಲೈ 04) ಹೈ ಬಿಪಿಯಿಂದಾಗಿ ಬ್ರೈನ್ ಸ್ಟ್ರೋಕ್ ಆಗಿದ್ದು, ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ. ಸದ್ಯ ನಟ ಕೋಮಾಗೆ ಜಾರಿದ್ದು, ಐಸಿಯುನಲ್ಲಿ ಅಪೋಲೊ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿತ್ತು. ಆದ್ರೀಗ ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನಿರ್ಮಾಪಕರ ಆಪ್ತರು ತಿಳಿಸಿದ್ದಾರೆ.
ಅರ್ಧ
ವರ್ಷ
ಮುಗಿದೇ
ಹೋಯ್ತು:
'ಜೇಮ್ಸ್',
'ಕೆಜಿಎಫ್
2',
'777
ಚಾರ್ಲಿ'
ಜೊತೆ
ಗೆದ್ದೋರು
ಯಾರು?!

ಕಿಶೋರ್ ಔಟ್ ಆಫ್ ಡೇಂಜರ್
"ನಿನ್ನೆ (ಜುಲೈ 04) ಸಂಜೆ 5.45ರ ಸುಮಾರಿಗೆ ಹೈ ಬಿಪಿಯಿಂದಾಗಿ ಕಿಶೋರ್ ಪ್ರಜ್ಞಾಹೀನರಾಗಿದ್ದರು. ತಕ್ಷಣವೇ ನಿರ್ಮಾಪಕ ಕಿಶೋರ್‌ರನ್ನು ಬೆಂಗಳೂರಿನಲ್ಲಿರುವ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆ (ಜುಲೈ 05) ವೈದ್ಯರು ಔಟ್ ಆಫ್ ಡೇಂಜರ್ ಎಂದು ತಿಳಿಸಿದ್ದಾರೆ" ಎಂದು 'ಜೇಮ್ಸ್' ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಜೇಮ್ಸ್ ಅದ್ಧೂರಿ ರಿಲೀಸ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಪುನೀತ್ ಅಭಿನಯದ ಕೊನೆಯ ಸಿನಿಮಾವನ್ನು ಅದ್ಧೂರಿಯಾಗಿ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದರು. ಇದೇ ನಿರ್ಮಾಪಕ ಈಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ
5
ತಿಂಗಳಲ್ಲಿ
'ಕೆಜಿಎಫ್
2'
ಬಿಟ್ಟು
ಬಾಕ್ಸಾಫೀಸ್‌ನಲ್ಲಿ
ಗೆದ್ದು
ಬೀಗಿದ
ಕನ್ನಡ
ಸಿನಿಮಾಗಳ್ಯಾವುವು
ಗೊತ್ತಾ?

'ಜೇಮ್ಸ್' ಬಳಿಕ ಕಿಶೋರ್ ಆಕ್ಟಿವ್!
ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅದ್ಭುತ ಗಳಿಕೆ ಮಾಡಿತ್ತು. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಈ ಸಿನಿಮಾ ಸುಮಾರು 150 ಕೋಟಿ ರೂ. ಕಲೆಹಾಕಿದೆ ಎಂದಿದ್ದಾರೆ. ಚೇತನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದರ ಹಿಂದೆನೇ ಧೀರೇನ್ ರಾಮ್ ಕುಮಾರ್ ಜೊತೆ ಮತ್ತೊಂದು ಸಿನಿಮಾ ಕೈ ಹಾಕಿದ್ದರು ಎಂಬ ಮಾಹಿತಿ ಕೂಡ ಇದೆ. ಈ ಮಧ್ಯೆ ಅವರ ಅನಾರೋಗ್ಯ ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿದೆ.