twitter
    For Quick Alerts
    ALLOW NOTIFICATIONS  
    For Daily Alerts

    James Re-Release : ಪ್ರಭಾಸ್ 'ಆದಿಪುರುಷ್' ಕೆಲಸ ನಿಲ್ಲಿಸಿ 'ಜೇಮ್ಸ್' ಡಬ್ಬಿಂಗ್ ಮಾಡಿದ ತಂತ್ರಜ್ಞರು ಯಾರು?

    |

    'ಜೇಮ್ಸ್' ಸಿನಿಮಾ ಈಗಾಗಲೇ ರಿಲೀಸ್ ಆಗಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಅಪ್ಪು ಅಭಿಮಾನಿಗಳು ಬಾರದ ಹೃದಯದಲ್ಲಿಯೇ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ಅನ್ನು ವೀಕ್ಷಿಸಿದ್ದರು. ಕೇವಲ ನಾಲ್ಕು ದಿನಗಳಿಗೆ 'ಜೇಮ್ಸ್' ಸಿನಿಮಾ ದಾಖಲೆ ಗಳಿಕೆ ಮಾಡಿತ್ತು.

    ಪುನೀತ್ ರಾಜ್‌ಕುಮಾರ್ ಅಗಲಿ ಹೆಚ್ಚು ಕಡಿಮೆ 6 ತಿಂಗಳುಗಳು ಕಳೆದಿವೆ. ಅಪ್ಪು ಅಭಿಮಾನಿಗಳು ದು:ಖದಲ್ಲಿ ಪುನೀತ್ ರಾಜ್‌ಕುಮಾರ್ ಧ್ಯಾನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುನೀತ್ ಅಭಿಮಾನಿಗಳಿಗೆ 'ಜೇಮ್ಸ್' ಚಿತ್ರತಂಡ ಬಿಗ್ ಪರ್ಪ್ರೈಸ್ ಕೊಟ್ಟಿದೆ.

    Muddulakshmi Serial: ಮುದ್ದುಲಕ್ಷ್ಮಿಯ ಮುದ್ದುಮಣಿ ದೃಷ್ಟಿಗೆ ಅಪ್ಪು ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಇಂಟ್ರೆಸ್ಟಿಂಗ್Muddulakshmi Serial: ಮುದ್ದುಲಕ್ಷ್ಮಿಯ ಮುದ್ದುಮಣಿ ದೃಷ್ಟಿಗೆ ಅಪ್ಪು ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಇಂಟ್ರೆಸ್ಟಿಂಗ್

    'ಜೇಮ್ಸ್' ಸಿನಿಮಾ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾಗೆ ಸ್ವತ: ಅಪ್ಪು ಧ್ವನಿಯನ್ನು ಅಳವಡಿಸಲಾಗಿದೆ. ಈ ಮೂಲಕ 'ಜೇಮ್ಸ್' ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದೆ.

     'ಜೇಮ್ಸ್' ಚಿತ್ರದಲ್ಲಿ ಅಪ್ಪು ಧ್ವನಿ

    'ಜೇಮ್ಸ್' ಚಿತ್ರದಲ್ಲಿ ಅಪ್ಪು ಧ್ವನಿ

    'ಜೇಮ್ಸ್' ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಬೇಕು ಅಂತ ಇಡೀ ತಂಡ ಪಣ ತೊಟ್ಟಿತ್ತು. ಈ ಮಧ್ಯೆ ಅಪ್ಪು ಧ್ವನಿಯನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಿತ್ತು. ಆದರೆ, ಆ ಸಮಯದಲ್ಲಿ ಸಾಧ್ಯವಾಗಿರಲಿಲ್ಲ. ಈಗ 'ಜೇಮ್ಸ್' ಸಿನಿಮಾ ಬಿಡುಗಡೆಯ ಬಳಿಕ ಅಪ್ಪು ಧ್ವನಿಯನ್ನು ಅಳವಡಿಸುವ ಮೂಲಕ ಹೊಸ ರೂಪ ಕೊಟ್ಟಿದೆ. ತಂತ್ರಜ್ಞಾನ ಬಳಸಿ ಇಂತಹದ್ದೊಂದು ಪ್ರಯತ್ನಕ್ಕೆ ಚಿತ್ರತಂಡ ಕೈ ಹಾಕಿದೆ.

    James Day 7 Box Office Collection: 'ಜೇಮ್ಸ್' 7ನೇ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು? ವಿಶ್ವದಾದ್ಯಂತ ಗಳಿಸಿದ್ದೆಷ್ಟು?James Day 7 Box Office Collection: 'ಜೇಮ್ಸ್' 7ನೇ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು? ವಿಶ್ವದಾದ್ಯಂತ ಗಳಿಸಿದ್ದೆಷ್ಟು?

     ಆದಿ ಪುರುಷ್ ನಿಲ್ಲಿಸಿ 'ಜೇಮ್ಸ್' ಡಬ್ಬಿಂಗ್

    ಆದಿ ಪುರುಷ್ ನಿಲ್ಲಿಸಿ 'ಜೇಮ್ಸ್' ಡಬ್ಬಿಂಗ್

    'ಜೇಮ್ಸ್' ಚಿತ್ರಕ್ಕೆ ತಂತ್ರಜ್ಞ ಪಪ್ಪು ಹಾಗೂ ಅವರ ತಂಡ ಅಪ್ಪು ಧ್ವನಿಯನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಈ ತಂಡವನ್ನು ತೆಲುಗು ನಟ ಶ್ರೀಕಾಂತ್ ಪರಿಚಯಿಸಿದ್ದರು. ಆದರೆ ಆ ವೇಳೆ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾಗಾಗಿ ಈ ತಂಡ ಕೆಲಸ ಮಾಡುತ್ತಿತ್ತು. " ಶ್ರೀಕಾಂತ್ ಅವರು 'ಜೇಮ್ಸ್‌' ಸಿನಿಮಾದ ಪರಿಸ್ಥಿತಿಯ ಬಗ್ಗೆ ಹೇಳಿದ್ರು. ಆಗ ನಾವು ಈ ಪ್ರಯತ್ನಕ್ಕೆ ಕೈ ಹಾಕಿದ್ವಿ. ಸಿನಿಮಾ ರಿಲೀಸ್‌ಗೂ ಮೊದಲೇ ಕೇಳಿದ್ರು. ಆದರೆ, ಆ ಸಮಯದಲ್ಲಿ ಸಾಧ್ಯವಾಗಿರಲಿಲ್ಲ. ನಟ ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದೆವು. ಪ್ರಭಾಸ್ ಅವರ ಅನುಮತಿ ಪಡೆದು, ಆ ಸಿನಿಮಾ ನಿಲ್ಲಿಸಿ 'ಜೇಮ್ಸ್' ಸಿನಿಮಾದ ಕೆಲಸ ಶುರುಮಾಡಿದ್ದೆವು. 25 ಜನರು ನಾಲ್ಕೈದು ತಿಂಗಳು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇವೆ." ಎಂದು ಪಪ್ಪು ಹೇಳಿದ್ದಾರೆ.

     ವಿಡಿಯೋ ಝಲಕ್ ವೀಕ್ಷಿಸಿರೋ ಅಪ್ಪು ಪತ್ನಿ

    ವಿಡಿಯೋ ಝಲಕ್ ವೀಕ್ಷಿಸಿರೋ ಅಪ್ಪು ಪತ್ನಿ

    ಒಂದು ವಾರದ ಹಿಂದಷ್ಟೇ ಪುನೀತ್ ರಾಜ್‌ಕುಮಾರ್ ಧ್ವನಿಯನ್ನು 'ಜೇಮ್ಸ್' ಸಿನಿಮಾಗೆ ಅಳವಡಿಸಲಾಗಿತ್ತು. ಆಗ ಸಣ್ಣ ಝಲಕ್ ಅನ್ನು ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಪತ್ನಿ ಪುನೀತ್ ರಾಜ್‌ಕುಮಾರ್ ಅವರಿಗೆತೋರಿಸಲಾಗಿದೆ. ಇದನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರಂತೆ. ಸದ್ಯ ಪುನೀತ್ ರಾಜ್‌ಕುಮಾರ್‌ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಲಾಗಿದೆ. " ಸುಮಾರು 60 ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಸಿನಿಮಾ ಪ್ರದರ್ಶನ ಆಗುತ್ತಿದೆ. ಅಪ್ಪು ಧ್ವನಿಯನ್ನು ಸೇರಿಸಿದ ಬಳಿಕ ಮತ್ತಷ್ಟು ಸ್ಕ್ರೀನ್ ಅನ್ನು ಹೆಚ್ಚಿಸಲಿದ್ದೇವೆ. ಇದೇ ಶುಕ್ರವಾರ ಇಡೀ ಸಿನಿಮಾವನ್ನು ಶಿವಣ್ಣ, ರಾಘಣ್ಣ, ಅಶ್ವಿನಿ ಮೇಡಂ ನೋಡುತ್ತಾರೆ." ಎಂದಿದ್ದಾರೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ.

    Puneeth Rajkumar Fans: ಪುನೀತ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಅಪ್ಪು ಪ್ಯಾನ್ಸ್‌ಗೆ ಕ್ಷಮೆ ಕೇಳಿದ ಹುಡುಗPuneeth Rajkumar Fans: ಪುನೀತ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಅಪ್ಪು ಪ್ಯಾನ್ಸ್‌ಗೆ ಕ್ಷಮೆ ಕೇಳಿದ ಹುಡುಗ

     ಈ ವಾರದಿಂದಲೇ 'ಜೇಮ್ಸ್' ದರ್ಬಾರ್

    ಈ ವಾರದಿಂದಲೇ 'ಜೇಮ್ಸ್' ದರ್ಬಾರ್

    ಇದೇ ಶುಕ್ರವಾರದಿಂದ ಅಪ್ಪು ಧ್ವನಿಯನ್ನು ಸೇರಿಸಿದ 'ಜೇಮ್ಸ್' ಚಿತ್ರವನ್ನು ಬಿಡುಗಡೆ ಪ್ರದರ್ಶನ ಮಾಡಲಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲೇ 'ಜೇಮ್ಸ್' ಸಿನಿಮಾವನ್ನು ತೋರಿಸುವ ಪ್ರಯತ್ನಕ್ಕೆ ಮಾಡುತ್ತಿದೆ. ಹೀಗಾಗಿ ಈ ವಾರ ಅಪ್ಪು ಫ್ಯಾನ್ಸ್ ಮತ್ತೊಂದು ಥಿಯೇಟರ್‌ನಲ್ಲಿ ಹಬ್ಬ ಮಾಡಲಿದ್ದಾರೆ. ಅಪ್ಪು ಧ್ವನಿಯಲ್ಲಿ 'ಜೇಮ್ಸ್ ಮತ್ತೆ ಸದ್ದು ಮಾಡಲಿದೆ.

    English summary
    Puneeth Rajkumar Movie James Re-Releasing With His Originl Voice. Know More.
    Monday, April 18, 2022, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X