»   » ಯು.ಎ.ಇ ಬಾಕ್ಸ್ ಆಫೀಸ್ ಗೆ ಪುನೀತ್ ಚಿತ್ರ ಲಗ್ಗೆ

ಯು.ಎ.ಇ ಬಾಕ್ಸ್ ಆಫೀಸ್ ಗೆ ಪುನೀತ್ ಚಿತ್ರ ಲಗ್ಗೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಿಗೆ ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಜೊತೆಗೆ ಅವರ ಚಿತ್ರಗಳನ್ನು ನಿರೀಕ್ಷಿಸುವ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದೀಗ ಅವರ ಲೇಟೆಸ್ಟ್ ಚಿತ್ರ 'ನಿನ್ನಿಂದಲೇ' ಚಿತ್ರ ಯು.ಎ.ಇ (ದುಬೈ, ಅಬು ದಾಬಿ, ಶಾರ್ಜಾ)ನಲ್ಲಿ ಇದೇ ಫೆಬ್ರವರಿ 6,7 ಹಾಗೂ 8ರಂದು ತೆರೆಕಾಣುತ್ತಿದೆ.

ಈ ಚಿತ್ರದ ಸಾಗರೋತ್ತರ ವಿತರಣೆ ಹಕ್ಕುಗಳನ್ನು ದರ್ಶನ್ ಹಾಗೂ ದೀಪಕ್ ಎಂಬುವವರು ಪಡೆದಿದ್ದ್ದು ಓವರ್ ಸೀಸ್ ಕನ್ನಡ ಮೂವೀಸ್ ಹಂಚಿಕೆಯಡಿ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರಗಳ ಬಿಡುಗಡೆ ದಿನಾಂಕ, ಥಿಯೇಟರ್ ಹಾಗೂ ಸಮಯದ ವಿವರಗಳು ಇಂತಿವೆ. [ನಿನ್ನಿಂದಲೇ ಚಿತ್ರವಿಮರ್ಶೆ]


DUBAI: Friday -> 7-Feb-2014 ->GALLERIA Dubai Cinema, Hyatt Hotel Diera (04 2737676) -> 4:00 PM. Saturday-> 8-Feb-2014 ->GALLERIA Dubai Cinema, Hyatt Hotel Diera (04 2737676) -> 4:00 PM

SHARJAH: Thursday-> 6-Feb-2014 -> STAR Cineplex (06 532 7555) ->11:45 PM
Friday -> 7-Feb-2014 -> STAR Cineplex (06 532 7555) -> 5:00 PM

ABU DHABI: Saturday -> 8-Feb-2014 -> GRAND SAFEER (02 5521515) -> 6:30 PM
Saturday -> 8-Feb-2014 -> ELDROADO Cinema (02 6763555) -> 7:00 PM. ಹೆಚ್ಚಿನ ಮಾಹಿತಿಗೆ Deepak +971504788956 ಅಥವಾ Balaji +971502974395 ಅವರನ್ನು ಸಂಪರ್ಕಿಸಬಹುದು.

ಕಳೆದ ಒಂದು ವರ್ಷದಿಂದ ಪುನೀತ್ ಚಿತ್ರವಿಲ್ಲದೆ ಅಭಿಮಾನಿಗಳು ಚಡಪಡಿಸಿದ್ದರು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸ್ ಆಫೀಸಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ರಾಜ್ಯದಾದ್ಯಂತ 800 ಪ್ರದರ್ಶನಗಳನ್ನು ಕಂಡಿರುವ ಚಿತ್ರ ರು.2.5 ಕೋಟಿ ಬಾಚಿದೆ. ಈ ಮೂಲಕ ಪುನೀತ್ ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಸಿಂಪಲ್ ಲವ್ ಸ್ಟೋರಿಗೆ ಇಷ್ಟೆಲ್ಲಾ ರೀಲು ಸುತ್ತುವ ಬದಲು ಕೊಂಚ ಕಡಿಮೆ ಮಾಡಿದ್ದರೆ ಚೆನ್ನಾಗಿತ್ತು ಎಂಬ ಅಪಸ್ವರಗಳು ಕೇಳಿಬಂದಿದ್ದವು. ಈ ಅಪಸ್ವರಕ್ಕೆ ಸ್ಪಂದಿಸಿರುವ ಚಿತ್ರತಂಡ 19 ನಿಮಿಷಗಳಷ್ಟು ಮೊಟಕುಗೊಳಿಸಿ ಬಿಡುಗಡೆ ಮಾಡಿತ್ತು. ಈಗ ಯು.ಎ.ಇ ಪ್ರೇಕ್ಷಕರ ಮುಂದೆ ಚಿತ್ರ ಬರುತ್ತಿದೆ. (ಒನ್ಇಂಡಿಯಾ ಕನ್ನಡ)

English summary
Power Star Puneeth Rajkumar latest movie "Ninnindale" Releasing Dubai, Abu Dhabi and Sharjah on 6th,7th and 8th. Overseas Distributor: Over Seas Kannada Movies (Darshan and Deepak).
Please Wait while comments are loading...