For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ನಲ್ಲಿ 'ನಿನ್ನಿಂದಲೇ' ಚಿತ್ರಕ್ಕೆ ಕ್ಲೀನ್ ಸರ್ಟಿಫಿಕೇಟ್

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರ ಸೆನ್ಸಾರ್ ನಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದೆ. ಜಯಂತ್ ಸಿ ಪರಾಂಜೆ ನಿರ್ದೇಶನದ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ.

  ಪುನೀತ್ ಅಭಿನಯದ ಬಹುತೇಕ ಚಿತ್ರಗಳು ಕೌಟುಂಬಿಕ ಕಥಾಹಂದರ ಉಳ್ಳವಾಗಿರುತ್ತವೆ. ನಿನ್ನಿಂದಲೇ ಚಿತ್ರವೂ ಇದಕ್ಕೆ ಹೊರತಾಗಿಲ್ಲ ಎಂಬುದು ಸೆನ್ಸಾರ್ ಮಂಡಳಿ ಕೊಟ್ಟಿರುವ ಸರ್ಟಿಫಿಕೇಟ್ ಮೂಲಕ ಗೊತ್ತಾಗುತ್ತದೆ. [ತೆಲುಗು 'ನಿನ್ನಿಂದಲೇ' ರೀಮೇಕ್ ಗೆ ಮಹೇಶ್ ಬಾಬು]

  ಪುನೀತ್ ಅವರು ಇದುವರೆಗೂ ಮನೆಮಂದಿಯಲ್ಲಾ ಕುಳಿತು ನೋಡುವಂತಹ ಚಿತ್ರಗಳನ್ನೇ ಕೊಡುತ್ತಾ ಬಂದಿದ್ದಾರೆ. ಹಾಗಾಗಿ ಅವರ ವೀಕ್ಷಕ ಬಳಗ ಬಲು ದೊಡ್ಡದು. ಅದರಲ್ಲೂ ಮಹಿಳಾ ಪ್ರೇಕ್ಷಕರು ಪುನೀತ್ ಚಿತ್ರಗಳನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ.

  ಈಗಾಗಲೆ ಚಿತ್ರದ ಸ್ಟಿಲ್ಸ್, ಮೇಕಿಂಗ್ ಎಲ್ಲವೂ ಕನ್ನಡ ಚಿತ್ರರಸಿಕರನ್ನು ಸೆಳೆದಿದೆ. ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ಹೊಸ ಅಧ್ಯಕ್ಷರಾದ ನಾಗೇಂದ್ರ ಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಮೊದಲು ಸೆನ್ಸಾರ್ ಆಗಿರುವ ಚಿತ್ರವೇ ನಿನ್ನಿಂದಲೇ.

  ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ ಸಿಕ್ಕಿರುವುದು ಇನ್ನೊಂದು ವಿಶೇಷ. ಮಣಿಶರ್ಮ ಸಂಗೀತ ನಿರ್ದೇಶನ ಇರುವ ಚಿತ್ರದ ನಾಯಕಿ ಎರಿಕಾ ಫರ್ನಾಂಡೀಸ್. ಚಿತ್ರದ ಸ್ಟಿಲ್ ಗಳಲ್ಲೇ ಎರಿಕಾ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ಜನವರಿ 16ರಂದು ಚಿತ್ರ ತೆರೆಕಾಣುತ್ತಿದೆ. (ಏಜೆನ್ಸೀಸ್)

  English summary
  Power Star Puneet Rajkumar and Erica Fernandes starrer Ninnindale movie has been censored with U certificate. The movie is schedule for release on 16th January.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X