»   » 'ಕಾಲೇಜ್ ಕುಮಾರ'ನನ್ನ ಮೆಚ್ಚಿದ 'ರಾಜಕುಮಾರ' ಪುನೀತ್

'ಕಾಲೇಜ್ ಕುಮಾರ'ನನ್ನ ಮೆಚ್ಚಿದ 'ರಾಜಕುಮಾರ' ಪುನೀತ್

Posted By:
Subscribe to Filmibeat Kannada

'ಕಾಲೇಜ್ ಕುಮಾರ'.... ಕಳೆದ ವಾರ ತೆರೆ ಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿರುವ ಸಿನಿಮಾ. 'ಕೆಂಡಸಂಪಿಗೆ' ವಿಕ್ಕಿ ಹಾಗೂ ರವಿಶಂಕರ್ ಅಭಿನಯವನ್ನ ಪ್ರೇಕ್ಷಕ ಮೆಚ್ಚಿಕೊಂಡಿದ್ದಾರೆ. ಅಲೆಮಾರಿ ಸಂತು ಹೇಳಿರುವ ಕತೆ ಜನರಿಗೆ ಹತ್ತಿರವಾಗಿದ್ದು ಕುಟುಂಬ ಸಮೇತರಾಗಿ ಅಭಿಮಾನಿಗಳು ಕಾಲೇಜ್ ಕುಮಾರನನ್ನ ನೋಡಲು ಬರ್ತಿದ್ದಾರೆ.

ರಿಲೀಸ್ ಆದ ದಿನವೇ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡ 'ಕಾಲೇಜ್ ಕುಮಾರ' ಸಿನಿಮಾವನ್ನ ಇತ್ತೀಚಿಗಷ್ಟೇ ಚಿತ್ರರಂಗದ ಈಗಿನ 'ರಾಜಕುಮಾರ' ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೋಡಿದ್ದಾರೆ. ಸಿನಿಮಾ ನೋಡಿದ ಅಪ್ಪು ಚಿತ್ರದ ಬಗ್ಗೆ ಏನ್ ಹೇಳಿದರು. ಮುಂದೆ ಓದಿ....

'ಕಾಲೇಜ್ ಕುಮಾರ'ನಿಗೆ ಪುನೀತ್ ಸಾಥ್

ನಿನ್ನೆಯಷ್ಟೇ 'ಕಾಲೇಜ್ ಕುಮಾರ' ಸಿನಿಮಾ ನೋಡಿರುವ ಪುನೀತ್, ರವಿಶಂಕರ್ ಅಭಿನಯ ಹಾಗೂ ವಿಕ್ಕಿ ಪರ್ಫಾಮೆನ್ಸ್ ಇಷ್ಟಪಟ್ಟಿದ್ದಾರೆ. ಒಳ್ಳೆ ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಸಿನಿಮಾ ಎಂದಿದ್ದಾರೆ.

ಫ್ಯಾಮಿಲಿ ಆಡಿಯನ್ಸ್ ಚಿತ್ರ

'ರಾಜಕುಮಾರ' ಸಿನಿಮಾದ ನಂತರ ಈಗ 'ಕಾಲೇಜ್ ಕುಮಾರ' ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿದ್ದಾರೆ. ಕುಟುಂಬ ಸಮೇತರಾಗಿ ಥಿಯೇಟರ್ ಕಡೆಗೆ ಪ್ರೇಕ್ಷಕರು ಹೆಚ್ಚಾಗಿ ಬರುತ್ತಿದ್ದಾರೆ.

ಮೂರೇ ದಿನಕ್ಕೇ ಮೂರು ಕೋಟಿ ಕಲೆಕ್ಷನ್

ಕಾಲೇಜ್ ಕುಮಾರ ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ಮೂರು ಕೋಟಿ ಕಲೆಕ್ಷನ್ ಮಾಡಿದೆ. ನೂರೈವತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತಿದ್ದು ಮೊದಲವಾರದಲ್ಲೇ ಸಿನಿಮಾ ತಂಡ ಸಕ್ಸಸ್ ನಗೆ ಬೀರಿದೆ.

ಪ್ರೇಕ್ಷಕರು ಮೆಚ್ಚಿದ ಸಿನಿಮಾ

'ಕಾಲೇಜ್ ಕುಮಾರ' ಸಿನಿಮಾವನ್ನ ಅಲೆಮಾರಿ ಸಂತು ನಿರ್ದೇಶನ ಮಾಡಿದ್ದಾರೆ. ಕೆಂಡಸಂಪಿಗೆ ವಿಕ್ಕಿ ಹಾಗೂ ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಪೋಷಕ ಪಾತ್ರದಲ್ಲಿ ಶೃತಿ ಮತ್ತು ರವಿಶಂಕರ್ ಕಾಣಿಸಿಕೊಂಡಿದ್ದಾರೆ.

English summary
Puneeth Rajkumar praised Kannada Movie 'College Kumara'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada