»   » ಕನ್ನಡದ 'ರಾಜರಥ' ಏರಿದ ಸೌತ್ ಇಂಡಿಯಾದ ಸ್ಟಾರ್ ನಟರು

ಕನ್ನಡದ 'ರಾಜರಥ' ಏರಿದ ಸೌತ್ ಇಂಡಿಯಾದ ಸ್ಟಾರ್ ನಟರು

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗಕ್ಕೆ 'ರಂಗಿತರಂಗ' ಎಂಬ ಅದ್ಬುತ ಸಿನಿಮಾ ನೀಡಿದ್ದ ಅನೂಪ್ ಭಂಡಾರಿ ತಮ್ಮ ಮುಂದಿನ ಚಿತ್ರಕ್ಕೆ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಬಿಗ್ ಸ್ಟಾರ್ ಗಳನ್ನು ಕರೆತಂದಿದ್ದಾರೆ.

'ರಾಜರಥ' ಸಿನಿಮಾಗಾಗಿ ಕಾಲಿವುಡ್ ಸ್ಟಾರ್ ಆರ್ಯರನ್ನು ಕರೆತಂದಿದ್ದ ಅನೂಪ್ ಅವರ ಚಿತ್ರದಲ್ಲಿ ಇಬ್ಬರು ಬಿಗ್ ಸ್ಟಾರ್ ಗಳು ಅಭಿನಯಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದರು. ಆದರೆ ಇಲ್ಲಿಯ ತನಕ ಆ ಸ್ಟಾರ್ ಯಾರು? ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುವುದರ ಸುಳಿವು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.

ಆದರೆ ಇದೀಗ ಚಿತ್ರೀಕರಣ ಮುಗಿಸಿ ತೆರೆಗೆ ಬರುವುದಕ್ಕೆ ಸಿದ್ಧವಾಗಿರುವ 'ರಾಜರಥ' ಸಿನಿಮಾದಲ್ಲಿ ಅಭಿನಯಿಸಿರುವ ಆ ಸ್ಟಾರ್ ಗಳ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದ್ದಾರೆ. 'ಬಾಹುಬಲಿ' ಸಿನಿಮಾ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಾಜರಥ' ಏರಿರುವ ಬಿಗ್ ಸ್ಟಾರ್ ಗಳು. ಹಾಗಾದರೆ, ಇವರಿಬ್ಬರು ಈ ಚಿತ್ರದ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ? 'ರಾಜರಥ' ಸಿನಿಮಾ ಎಲ್ಲೆಲ್ಲಿ ರಿಲೀಸ್ ಆಗಲಿದೆ? ಇವೆಲ್ಲವನ್ನು ಕೆಳಗಿನ ಫೋಟೋ ಸ್ಲೈಡ್ ನಲ್ಲಿ ಓದಿ...

ಅನೂಪ್ ಬಂಡಾರಿ ನಿರ್ದೇಶನದಲ್ಲಿ ಅಪ್ಪು

ಅನೂಪ್ ಬಂಡಾರಿ ನಿರ್ದೇಶನ ಮಾಡಿರುವ, ನಿರೂಪ್ ಬಂಡಾರಿ ನಾಯಕನಾಗಿ ಅಭಿನಯಿಸಿರುವ 'ರಾಜರಥ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ಅಪ್ಪು ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಸಿನಿಮಾ ತಂಡ ಇನ್ನೂ ಹೆಚ್ಚಿನ ಮಾಹಿತಿಯನ್ನು ರಿವಿಲ್ ಮಾಡಿಲ್ಲ.

ಕನ್ನಡಕ್ಕೆ ಬಂದ 'ಬಾಹುಬಲಿ'ಯ ಬಲ್ಲಾಳದೇವಾ

ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ರಾಣಾ ದಗ್ಗುಬಾಟಿ ಕೂಡ 'ರಾಜರಥ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಸೆಟ್ಟೇರುವ ಮುಂಚೆಯೇ ಇಬ್ಬರು ಸ್ಟಾರ್ ಗಳ ಡೇಟ್ಸ್ ಪಡೆದುಕೊಂಡಿದೆ ಸಿನಿಮಾ ತಂಡ ಸದ್ದಿಲ್ಲದೆ ಈ ಸ್ಟಾರ್ ಗಳ ಚಿತ್ರೀಕರಣ ಮಾಡಿ ಮುಗಿಸಿದೆ. ಇದೀಗ ಚಿತ್ರದ ರಿಲೀಸ್ ಹತ್ತಿರ ಬರುತ್ತಿದ್ದಂತೆ ಒಂದೊಂದೆ ವಿಚಾರವನ್ನು ರಿವಿಲ್ ಮಾಡುತ್ತಿದೆ.

ಸ್ಟಾರ್ ಗಳ ಸಿನಿಮಾ

'ರಾಜರಥ' ಚಿತ್ರದಲ್ಲಿ ನಿರೂಪ್ ಜೊತೆಯಾಗಿ ಪಿ.ರವಿಶಂಕರ್ ಕೂಡ ಅಭಿನಯಿಸಿದ್ದಾರೆ. ಕಾಲಿವುಡ್ ಸ್ಟಾರ್ ಆರ್ಯ ಕೂಡ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್, ಕಾಲಿವುಡ್ ಹಾಗೂ ಟಾಲಿವುಡ್ ಮೂರು ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಎನ್ನಿಸಿಕೊಂಡಿರುವ ಕಲಾವಿದರು 'ರಾಜರಥ' ಚಿತ್ರದಲ್ಲಿ ಭಾಗಿಯಾಗಿದ್ದಾರೆ.

ಇತಿಹಾಸ ಸೃಷ್ಟಿ ಮಾಡುತ್ತಾರಾ ?

ಎರಡು ವರ್ಷದ ಹಿಂದೆ 'ರಂಗಿತರಂಗ' ಸಿನಿಮಾ ಮೂಲಕ ಹೊಸ ಅಲೆಯನ್ನು ಎಬ್ಬಿಸಿದ ಬಂಡಾರಿ ಬ್ರದರ್ಸ್ ಈ ಬಾರಿ ಯಾವ ರೀತಿ ಪ್ರೇಕ್ಷಕರನ್ನ ಮೊಡಿ ಮಾಡ್ತಾರೆ ಅನ್ನೋ ಕುತೂಹಲ ಇಡೀ ಚಿತ್ರರಂಗಕ್ಕಿದೆ. ಮುಂದಿನ ವರ್ಷ ಆರಂಭದಲ್ಲಿ (ಜನವರಿ 25) ಚಿತ್ರ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

English summary
Actor Puneet Rajkumar, Rana Daggubati and Tamil actor Arya acting in Nirup Bhandari's 'Rajaratha' movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada