»   » ಪವರ್ ಸ್ಟಾರ್ 'ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್

ಪವರ್ ಸ್ಟಾರ್ 'ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್

By: ಜೀವನರಸಿಕ
Subscribe to Filmibeat Kannada

ಇತ್ತೀಚೆಗೆ ಫೋಟೋಶೂಟ್ ಮುಗಿಸಿರೋ ಪವರ್ ಸ್ಟಾರ್ ಪುನೀತ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್ ನಲ್ಲಿ ಬರುತ್ತಿರುವ 'ರಣ ವಿಕ್ರಮ' ಸಿನಿಮಾದಲ್ಲಿ ಪುನೀತ್ ಹೇಗಿರ ಬಹುದು ಅಂತ ಕೇಳಿದ್ರೆ ನೀವು ಖಂಡಿತ ಥ್ರಿಲ್ ಆಗ್ತೀರ.

ಪುನೀತ್ ಇಲ್ಲಿವರೆಗೂ ಮಾಡಿರದ ಒಂದು ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.ಪವರ್ ಸ್ಟಾರ್ 'ರಣ ವಿಕ್ರಮ' ಸಿನಿಮಾದಲ್ಲಿ ಪವರ್ ಫುಲ್ ಪೊಲೀಸ್ ಆಫೀಸರ್. ಸಿನಿಮಾದಲ್ಲಿ 'ವಿಕ್ರಮ.. ರಣವಿಕ್ರಮ ಐಪಿಎಸ್' ಅನ್ನೋ ಪವರ್ ಫುಲ್ ಡೈಲಾಗ್ ಹೊಡೆದ್ರೂ ಅಚ್ಚರಿಯಿಲ್ಲ.

ಇಲ್ಲಿಯವರೆಗೂ ಪವರ್ ಸ್ಟಾರ್ ಎಂತಹಾ ಪಾತ್ರಗಳನ್ನ ಮಾಡಿದ್ರೂ ಲೀಲಾಜಾಲವಾದ ಅಭಿನಯ ನೀಡಿರೋ ನಟ. ಆದ್ರೆ ಪುನೀತ್ ಮೊದಲ ಬಾರಿಗೆ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡ್ತಿದ್ದಾರೆ. ಅದರ ಥ್ರಿಲ್ಲಿಂಗ್ ಡೀಟೇಲ್ಸ್ ಸ್ಲೈಡ್ ನಲ್ಲಿ ನೋಡುತ್ತಾ ಸಾಗಿ.

ಪುನೀತ್ ಕನಸನ್ನ ನನಸು ಮಾಡ್ತಿದ್ದಾರೆ ಪವನ್

ಪುನೀತ್ ಹಾಗೂ ನಿಖಿತಾ ನಟಿಸಿದ್ದ 'ವಂಶಿ' ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗೋ ಕನಸಿನ ಹುಡುಗನ ಪಾತ್ರ ಮಾಡಿದ್ದ ಪುನೀತ್ ಕನಸನ್ನ ನನಸು ಮಾಡ್ತಿದ್ದಾರೆ ಪವನ್ ಒಡೆಯರ್. ಇತ್ತೀಚೆಗೆ ಚಿತ್ರದ ಪೋಟೋಶೂಟ್ ಕೂಡ ಮುಗಿದಿದೆಯಂತೆ.

ಪುನೀತ್ ಅಭಿಮಾನಿಗಳು ಕಾತುರದಿಂದ ನೋಡ್ತಿದ್ದಾರೆ

ಇನ್ನು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಐರಾವತ'ದಲ್ಲಿ ಖಡಕ್ ಆಫೀಸರ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ಕ್ಯೂರಿಯಾಸಿಟಿ ಮೂಡಿಸಿದ್ರು. ಆದ್ರೆ ಪುನೀತ್ ಅಭಿಮಾನಿಗಳು ಮೊದಲ ಬಾರಿಗೆ ಪೊಲೀಸ್ ಆಫೀಸರ್ ಆಗಿ ನೋಡೋದಕ್ಕೆ ಕಾತುರದಿಂದ ಕಾದಿರೋದಂತೂ ಕನ್ಫರ್ಮ್.

ಪೊಲೀಸ್ ಪಾತ್ರಕ್ಕೆ ಮಾರುಹೋಗ್ತಿದ್ದಾರೆ ಬಿಗ್ ಸ್ಟಾರ್ ಗಳು

ಐರಾವತ ಸಿನಿಮಾ ಮೂಲಕ ದರ್ಶನ್ ಪೊಲೀಸ್ ಆಫೀಸರ್ ಆಗಿ ಮಿಂಚ್ತಿರೋ ಸುದ್ದಿ ಗೊತ್ತಾಯ್ತು. ಈಗ ಪವರ್ ಸ್ಟಾರ್ 'ರಣ ವಿಕ್ರಮ'ನಾಗಿ ಪೊಲೀಸ್ ಆಫೀಸರ್ ಆಗ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಸ್ಯಾಂಡಲ್ ವುಡ್ ನಲ್ಲಿ ಮಾಸ್ ಹೀರೋಗಳಿಗೆ ಮಸ್ತ್ ಮ್ಯಾಚ್ ಆಗೋ ಪಾತ್ರ ಅಂದ್ರೆ ಅದು ಖಡಕ್ ಪೊಲೀಸ್ ಆಫೀಸರ್ ಪಾತ್ರ. ಸಮಾಜವನ್ನ ಕಾಯೋ ಪೊಲೀಸ್ ಪಾತ್ರಗಳಲ್ಲಿ ಬಿಗ್ ಸ್ಟಾರ್ ಗಳು ಕಾಣಿಸಿಕೊಂಡ್ರೆ ಅಭಿಮಾನಿಗಳು ಹುಚ್ಚೆದ್ದು ಕುಣೀತಾರೆ. ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡ್ತಾರೆ.

ಅಭಿಮಾನಿಗಳು ಎಂಜಾಯ್ ಮಾಡುವ ಪಾತ್ರ

ಪೊಲೀಸ್ ಪಾತ್ರದ ಮೂಲಕ ಮಿಂಚೋದು ಮಾಸ್ ಹೀರೋಗಳಿಗೆ ಹೇಳಿ ಮಾಡಿಸಿದ್ದು ಯಾಕಂದ್ರೆ ಅಲ್ಲಿ ಅಬ್ಬರದ ಡೈಲಾಗ್ ಗಳು ಚಿತ್ರಪ್ರೇಮಿಗಳಿಗೆ ಶಿಳ್ಳೆ ಚಪ್ಪಾಳೆ ಹೊಡ್ಯೋಕೆ ಅವಕಾಶ ಮಾಡಿಕೊಡುತ್ತೆ. ಪೊಲೀಸ್ ಅಂದ್ರೆ ಭ್ರಷ್ಟರು ಅನ್ನೋ ಅಭಿಪ್ರಾಯದ ನಡುವೆ ತಮ್ಮ ಮೆಚ್ಚಿನ ನಟ ಒಬ್ಬ ದಕ್ಷ ಆಫೀಸರ್ ಆಗಿರೋದನ್ನ ಅಭಿಮಾನಿಗಳು ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಾ ಎಂಜಾಯ್ ಮಾಡ್ತಾರೆ.

ಆಕ್ಷನ್ ಹೀರೋಗಳಿಗೆ ಹೇಳಿ ಮಾಡಿಸಿದ ಪಾತ್ರ

ಬಾಡಿ ಫಿಟ್ ಮಾಡ್ಕೊಂಡು ಖದರ್ ಖಾಕಿ ಡ್ರೆಸ್ ಹಾಕಿಕೊಂಡ್ರೆ ಎಂಥವನ ನೋಟದಲ್ಲೂ ಗತ್ತು ಬಂದು ಬಿಡುತ್ತೆ. ಇನ್ನು ಹೀರೋ ಅದ್ರಲ್ಲೂ ಆಕ್ಷನ್ ಹೀರೋಗಳಾದ್ರೆ ಕೇಳ್ಬೇಕಾ. ಫೈಟ್ಸ್, ಚೇಸಿಂಗ್ ವಿಷಯದಲ್ಲೂ ಪೊಲೀಸ್ ಪಾತ್ರ ಕೊಡೋ ಥ್ರಿಲ್ಲನ್ನ ಮತ್ಯಾವ ಪಾತ್ರಾನೂ ಕೊಡೋದಿಲ್ಲ.

English summary
Here are the thrilling details of Power Star Puneeth Rajkumar's upcoming film Rana Vikrama. Puneeth plays a tough police officer in the movie directed by Pawan Wadyar. It is to be produced by Jayanna.
Please Wait while comments are loading...