»   » ಶಿವಣ್ಣನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪುನೀತ್

ಶಿವಣ್ಣನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪುನೀತ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೆರೆ ಮೇಲೆ ಸಿಕ್ಕಾಪಟ್ಟೆ ಪವರ್ ಫುಲ್ ಆಗಿರ್ತಾರೆ. ಆದ್ರೆ, ನಿಜ ಜೀವನದಲ್ಲಿ ತುಂಬ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ.

ದೊಡ್ಡವರಿಗೆ ಗೌರವ ನೀಡುವುದು, ಸಣ್ಣವರಿಗೆ ಪ್ರೋತ್ಸಾಹ ನೀಡುವುದು ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಗುಣ. ಸಹೋದರರಾದ ಶಿವಣ್ಣ, ರಾಘಣ್ಣ ಅವರಿಗೂ ಅಷ್ಟೇ ಗೌರವ ನೀಡ್ತಾರೆ ಪುನೀತ್. ಇದು ಪ್ರತಿಯೊಂದು ಸಲವೂ ಸಾಬೀತಾಗಿದೆ.

Puneeth Rajkumar received the blessings of Shiva Rajkumar

ಆದ್ರೆ, ಇಂದು ನಡೆದ ಸಿನಿಮಾ ಮುಹೂರ್ತ ಕಾರ್ಯಕ್ರಮವೊಂದರಲ್ಲಿ ಪುನೀತ್ ಮತ್ತು ಶಿವಣ್ಣ ಜೋಡಿ ವಿಶೇಷವಾಗಿ ಗಮನ ಸೆಳೆಯಿತು. ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಚೊಚ್ಚಲ ಸಿನಿಮಾ 'ಕವಲುದಾರಿ' ಇಂದು ಸೆಟ್ಟೇರಿತು.

ಅಪ್ಪು ನಿರ್ಮಾಣದ ಮೊದಲ ಸಿನಿಮಾಗೆ ಕ್ಲಾಪ್ ಮಾಡಿದ ಶಿವಣ್ಣ

ಈ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಶಿವಣ್ಣ ಬರುತ್ತಿದ್ದಂತೆ, ಶಿವಣ್ಣನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು ಪುನೀತ್ ರಾಜ್ ಕುಮಾರ್. ಇದು ನೋಡುಗರಿಗೆ ಅದ್ಭುತ ಕ್ಷಣ ಎನಿಸಿತು.

Puneeth Rajkumar received the blessings of Shiva Rajkumar

'ಕವಲುದಾರಿ' ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಎಸ್.ಕೆ ಭಗವಾನ್, ರಾಕ್ ಲೈನ್ ವೆಂಕಟೇಶ್, ಅನಂತ್ ನಾಗ್ ಸೇರಿದಂತೆ ಹಲವರು ಕಲಾವಿದರು ಭಾಗಿಯಾಗಿದ್ದರು.

English summary
Puneeth Rajkumar received the blessings of Shiva Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada