For Quick Alerts
  ALLOW NOTIFICATIONS  
  For Daily Alerts

  ಗಂಧದಗುಡಿ ಹವಾ ಜೋರು; 75 ಅಪ್ಪು ಕಟ್‌ಔಟ್, ದಸರಾ ಮಾದರಿಯ ಲೈಟಿಂಗ್ಸ್ ಹಾಕಲು ಪ್ಲಾನ್!

  |

  ಅಪ್ಪು ಅವರ ಕನಸಿನ ಕೂಸು ಗಂಧದಗುಡಿ ಚಿತ್ರ ಇದೇ ತಿಂಗಳ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದು ಅಪ್ಪು ಅವರ ಕೊನೆಯ ಚಿತ್ರ ಆಗಿರುವ ಕಾರಣ ಚಿತ್ರದ ಕ್ರೇಜು ಹಾಗೂ ಸೆಲೆಬ್ರೇಷನ್ ರೇಂಜು ಎರಡೂ ಬೇರೆಯದ್ದೇ ಮಟ್ಟದಲ್ಲಿರಲಿದೆ ಎನ್ನುವುದು ಖಚಿತ. ಹೇಳಿ ಕೇಳಿ ಚಿತ್ರಮಂದಿರಗಳಲ್ಲಿ ಬಿಡುಗಡೆಯ ದಿನ ನೆಕ್ಸ್ಟ್ ಲೆವೆಲ್ ಸಂಭ್ರಮಾಚರಣೆ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಅಪ್ಪು ಫ್ಯಾನ್ಸ್ ತಮ್ಮ ನಟನ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಗೆ ಇನ್ನೆಷ್ಟು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ ನಡೆಸಲು ಯೋಜಿಸಿರಬೇಡ.

  ಜೇಮ್ಸ್ ಹಾಗೂ ಲಕ್ಕಿಮ್ಯಾನ್ ಚಿತ್ರಗಳಿಗೆ ಭರ್ಜರಿ ಸೆಲೆಬ್ರೇಷನ್ ಮಾಡಿದ್ದ ಪುನೀತ್ ಫ್ಯಾನ್ಸ್ ಗಂಧದ ಗುಡಿಗೆ ವಿಶ್ವ ದಾಖಲೆ ನಿರ್ಮಿಸುವ ಮಟ್ಟಿಗಿನ ಯೋಜನೆಗಳನ್ನು ರೂಪಿಸಿದ್ದಾರೆ. ಈಗಾಗಲೇ 'ಗಂಧದ ಗುಡಿ ಹಬ್ಬ' ಎಂಬ ಯೋಜನೆಯಡಿಯಲ್ಲಿ ಚಿತ್ರ ಬಿಡುಗಡೆಗೆ ಇನ್ನೂ ನಲವತ್ತು ದಿನ ಬಾಕಿ ಇರುವಾಗಲೇ ಸಂಭ್ರಮಾಚರಣೆ ಶುರುವಿಟ್ಟುಕೊಂಡಿದ್ದ ಅಪ್ಪು ಫ್ಯಾನ್ಸ್ ಗಂಧದಗುಡಿ ಬಿಡುಗಡೆಗೂ ಮೂರು ದಿನ ಮುಂಚಿತವಾಗಿಯೇ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಯೋಜಿಸಿದ್ದಾರೆ.

  ಈ ಯೋಜನೆಗಳ ಕುರಿತಾಗಿ ಇದೀಗ ಅಪ್ಪು ಅಭಿಮಾನಿಗಳು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗಂಧದ ಗುಡಿ ಚಿತ್ರ ಬಿಡುಗಡೆ, ಅಪ್ಪು ಒಂದನೇ ವರ್ಷದ ಪುಣ್ಯ ತಿಥಿ ಹಾಗೂ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಗೌರವ ಸಲ್ಲಿಸುವಿಕೆ ಎಲ್ಲವೂ ಸಾಲು ಸಾಲಾಗಿ ಇರುವುದರಿಂದ ಒಂದರ ಹಿಂದೊಂದರಂತೆ ಕಾರ್ಯಕ್ರಮವನ್ನು ಅಪ್ಪು ಅಭಿಮಾನಿಗಳು ಘೋಷಿಸಿದ್ದಾರೆ. ಅವುಗಳ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

  ಹೀಗಿದೆ ಸಂಭ್ರಮಾಚರಣೆಯ ಯೋಜನೆಗಳು

  ಹೀಗಿದೆ ಸಂಭ್ರಮಾಚರಣೆಯ ಯೋಜನೆಗಳು

  * 26 - 10 - 2022: ಅಪ್ಪು ಸಮಾಧಿ ಬಳಿ ವಿಶ್ವ ದಾಖಲೆ ಮಟ್ಟದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬರೋಬ್ಬರಿ 75 ಕಟ್‌ಔಟ್‌ಗಳನ್ನು ನಿಲ್ಲಿಸಲಾಗಲಿದೆ.

  * 27-10-2022ರಂದು ಮಧ್ಯಾಹ್ನ ಎಲ್ಲಾ ಕಟ್‌ಔಟ್‌ಗಳಿಗೂ ಭಾರೀ ಹೂವಿನ ಹಾರ ಹಾಕಲಾಗುವುದು ಹಾಗೂ ಸಂಜೆ ಸ್ಮಾರಕದ ಒಂದು ಕಿಲೋಮೀಟರ್ ಸುತ್ತ ದಸರಾ ರೀತಿ ದೀಪಾಲಂಕಾರ ಮಾಡಲಾಗುವುದು.

  * 28-10-2022ರಂದು ಗಂಧದ ಗುಡಿ ಬಿಡುಗಡೆಯ ದಿನ ಕೆಜಿ ರಸ್ತೆ ಹಾಗೂ ಮಾಗಡಿ ರಸ್ತೆಯ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ.

  * 29-10-2022ರಂದು ಪುನೀತ್ ರಾಜ್‌ಕುಮಾರ್ ಒಂದನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಸ್ಮಾರಕದ ಬಳಿ ಅಭಿಮಾನಿಗಳಿಗೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿದೆ.

  21ಕ್ಕೆ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್

  21ಕ್ಕೆ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್

  ಇನ್ನು ಇದೇ ತಿಂಗಳ 21ಕ್ಕೆ ಗಂಧದ ಗುಡಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ವಿಶೇಷ ಕರೆಯೋಲೆ ಮೂಲಕ ಗಣ್ಯರಿಗೆ ಆಹ್ವಾನವನ್ನು ನೀಡುತ್ತಿದೆ ರಾಜ್ ಕುಟುಂಬ. ಈಗಾಗಲೇ ಸಿಎಂ ಬೊಮ್ಮಾಯಿ ಹಾಗೂ ಮೋಹಕತಾರೆ ರಮ್ಯಾಗೆ ಈ ಆಹ್ವಾನ ತಲುಪಿದ್ದು ಇನ್ನೂ ಮುಂತಾದ ದಿಗ್ಗಜರಿಗೆ ಆಮಂತ್ರಣ ತಲುಪಲಿದೆ. ತಮಿಳಿನ ಸೂಪರ್‌ಸ್ಟಾರ್ ರಜಿನಿಕಾಂತ್ ಕೂಡ ಆಗಮಿಸಲಿದ್ದಾರೆ ಎಂಬ ಸುದ್ದಿಯೂ ಸಹ ಇದೆ.

  ಗಂಧದ ಗುಡಿ ಟ್ರೈಲರ್ ಹಿಟ್, ಅಭಿಮಾನಿಗಳ ಮೆಚ್ಚುಗೆ

  ಗಂಧದ ಗುಡಿ ಟ್ರೈಲರ್ ಹಿಟ್, ಅಭಿಮಾನಿಗಳ ಮೆಚ್ಚುಗೆ

  ಗಂಧದ ಗುಡಿ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಟ್ರೈಲರ್ ಕ್ವಾಲಿಟಿ ಹಾಗೂ ಮೇಕಿಂಗ್ ಅಪ್ಪು ಫ್ಯಾನ್ಸ್ ಹಾಗೂ ಸಿನಿ ಪ್ರೇಕ್ಷಕರನ್ನು ಮೆಚ್ಚಿಸಿದೆ. ಟ್ರೈಲರ್ ವೀಕ್ಷಿಸಿದ ಪರಭಾಷಾ ತಾರೆಯರು ಹಾಗೂ ಸಿನಿ ರಸಿಕರು ಇದು ಕನ್ನಡ ಚಿತ್ರರಂಗದ ಮೈಲಿಗಲ್ಲಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  Puneeth Rajkumar's 75 cutouts will be placed on the occasion of Gandhada Gudi release. Read on
  Tuesday, October 11, 2022, 21:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X