»   » ಪುನೀತ್ 'ದೊಡ್ಮನೆ ಹುಡುಗ'ನಿಗೆ ಮುಹೂರ್ತ ನಿಗದಿ

ಪುನೀತ್ 'ದೊಡ್ಮನೆ ಹುಡುಗ'ನಿಗೆ ಮುಹೂರ್ತ ನಿಗದಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸದ್ಯ 'ಧೀರ ರಣವಿಕ್ರಮ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಅವರು ಹಾಡಿನ ಚಿತ್ರೀಕರಣಕ್ಕಾಗಿ ಇಟಲಿಗೂ ಹೋಗಿಬಂದಿದ್ದಾರೆ. ಇನ್ನೊಂದು ಕಡೆ ಅವರ 'ಮೈತ್ರಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಇದೀಗ ಅವರ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ 'ದೊಡ್ಮನೆ ಹುಡುಗ' ಸೆಟ್ಟೇರಲು ಮುಹೂರ್ತ ನಿಗದಿಯಾಗಿದೆ. ಇದೇ ಫೆಬ್ರವರಿ 23ರಿಂದ ಶೂಟಿಂಗ್ ಶುರು. ಈ ಚಿತ್ರಕ್ಕೆ ನಾಯಕಿಯಾಗಿ 'ಮೊಗ್ಗಿನ ಮನಸಿ'ನ ಹುಡುಗಿ ರಾಧಿಕಾ ಪಂಡಿತ್ ಆಯ್ಕೆಯಾಗಿದ್ದಾರೆ. [ಸೂರಿ, ಪುನೀತ್ ಸಂಗಮದ 'ದೊಡ್ಮನೆ ಹುಡುಗ' ಶುರು]

ಇದಕ್ಕೂ ಮುನ್ನ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಾಯಕಿ ಎಂದುಕೊಳ್ಳಲಾಗಿತ್ತು. ಆದರೆ ಸದ್ಯಕ್ಕೆ ಅವರು ನಾಟ್ ರೀಚಬಲ್. ಈ ಚಿತ್ರದಲ್ಲಿ ತಾರೆಗಳ ಬಲು ದೊಡ್ಡ ಬಳಗವೇ ಇದೆ. ಅವರಲ್ಲಿ ಮುಖ್ಯವಾಗಿ ರೆಬೆಲ್ ಸ್ಟಾರ್ ಅಂಬರೀಶ್ ಸಹ ಒಬ್ಬರು.

puneeth-rajkumar-s-dodmane-hudga-starts-from-23rd-february

ಈ ಚಿತ್ರದಲ್ಲಿರುವ ಇನ್ನೊಬ್ಬ ಹಿರಿಯ ಕಲಾವಿದರು ಡಾ.ಭಾರತಿ ವಿಷ್ಣುವರ್ಧನ್. ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಅವರು ಡಾ.ಶಿವರಾಜ್ ಕುಮಾರ್ ಅವರ 'ದೊರೆ' ಚಿತ್ರದಲ್ಲಿ ತಾಯಿ ಪಾತ್ರ ಪೋಷಿಸಿದ್ದರು.

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಭಾರತಿ ಅವರು ಪ್ರಮುಖ ಪಾತ್ರ ಪೋಷಿಸಲಿದ್ದಾರೆ. ಚಿತ್ರದಲ್ಲಿ ಅವರದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಕ್ಕನ ಪಾತ್ರ. ಜೊತೆಗೆ ಸುಮಲತಾ ಅವರು ಅಂಬಿಗೆ ಜೋಡಿಯಾಗಿ ಚಿತ್ರದಲ್ಲಿರುತ್ತಾರೆ.

ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ ಸರಿಸುಮಾರು 28 ಚಿತ್ರಗಳಲ್ಲಿ ಭಾರತಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಜಾಕಿ, ಅಣ್ಣಾಬಾಂಡ್ ಚಿತ್ರಗಳ ಬಳಿಕ ಸೂರಿ ಹಾಗೂ ಪುನೀತ್ ಜೊತೆಯಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. (ಏಜೆನ್ಸೀಸ್)

English summary
Power Star Puneeth Rajkumar's Dodmane Hudga scheduled to start from 23rd February. The movie directed by Duniya Soori is crated a lot of curiocity in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada