Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಂಠೀರವ ಸ್ಟುಡಿಯೋದಲ್ಲಿ ಮಣ್ಣಲ್ಲಿ ಮಣ್ಣಾದ ಅಪ್ಪು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಸ್ಯಾಂಡಲ್ವುಡ್ ಯುವರತ್ನ ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪುನೀತ್ ರಾಜ್‌ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಇಂದು ಕಂಠೀರವ ಸ್ಟುಡಿಯೋದಲ್ಲಿ ತಂದೆ ಡಾ. ರಾಜ್ ಕುಮಾರ್, ತಾಯಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ ಅಪ್ಪು.
Recommended Video
ಕಂಠೀರವ ಸ್ಟೇಡಿಯಂ ನಿಂದ ಈಗಾಗಲೇ ಕಂಠೀರವ ಸ್ಟುಡಿಯೋಗೆ ಪಾರ್ಥೀವ ಶರೀರವನ್ನು ಅಂತಿಮ ಯಾತ್ರೆ ಮೂಲಕ ತರಲಾಯಿತು. ಇದಕ್ಕೂ ಮುನ್ನ ಡಾ. ರಾಜ್ ಕುಟುಂಬದಿಂದವರು ಅಂತಿಮ ನಮನ ಸಲ್ಲಿಕೆಯಾಯಿತು.
ಅಣ್ಣ ರಾಘವೇಂದ್ರ ರಾಜ್ ಕುಮಾರ್ ರಿಂದ ಅಪ್ಪುಗೆ ಅಂತಿಮ ನಮನ ಸಲ್ಲಿಸಿದರು. ಪೊಲೀಸರು ವಿದಾಯದ ಸೂಚಕವಾಗಿ ಗೌರವಯುತವಾಗಿ ಗುಂಡು ಹಾರಿಸಿ, ಪುನೀತ್‌ಗೆ ಸರ್ಕಾರಿ ಗೌರವವನ್ನು ಸಲ್ಲಿಕೆ ಮಾಡಲಾಗಿದೆ. ಪುನೀತ್ ಮೇಲೆ ಹೊದೆಸಲಾಗಿದ್ದ ರಾಷ್ಟ್ರಧ್ವಜವನ್ನು ಸಿಎಂ ಬೊಮ್ಮಾಯಿ ಅವರ ಪತ್ನಿ ಅಶ್ವಿನಿ ಅವರಿಗೆ
ಪೊಲೀಸ್ ಇಲಾಖೆಯಿಂದ ಮೂರು ಸುತ್ತು ತೋಪು ಸಿಡಿಸುವ ಮೂಲಕ ಗೌರವ ಸಮರ್ಪಣೆ ಸಲ್ಲಿಸಲಾಯಿತು. ನಂತರ ಕುಟುಂಬಸ್ಥರಿಂದ ಅಂತಿಮದ ವಿಧಿವಿಧಾನ ಕಾರ್ಯಗಳು ನೇರವೇರಿಸಲಾಯಿತು.
ಮಾವ
ಚಿನ್ನೆಗೌಡ
ಹಾಗೂ
ಶ್ರೀಮುರುಳಿ
ಮುಂದೆ
ನಿಂತು
ವಿಧಿವಿಧಾನ
ಕಾರ್ಯ
ನೆರವೇರಿಸಿದರು.
ರಾಘವೇಂದ್ರ
ರಾಜ್‌ಕುಮಾರ್
ಮಗ
ವಿನಯ್
ರಾಜ್‌ಕುಮಾರ್‌ರಿಂದ
ಅಂತಿಮ
ವಿಧಿವಿಧಾನ
ನೆರವೇರಸಲಾಗಿದೆ.
ಚಟ್ಟಕ್ಕೆ
ಮೃತದೇಹವನ್ನು
ಸ್ಥಳಾಂತರ
ಮಾಡಿದಾಗ
ನೆರೆದಿದ್ದವರ
ಕಣ್ಣಾಲಿಗಳು
ತುಂಬಿ
ಬಂದಿದ್ದವು.

ದುಖಃ, ನೋವು, ಆಕ್ರಂದನ, ಆಗಲಿಕೆ
ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ನಿಧನ ಆಘಾತವನ್ನು ಉಂಟುಮಾಡಿದೆ. ಸಿನಿಮಾ ತಾರೆಯರು, ಅಭಿಮಾನಿಗಳು, ಆಪ್ತರು, ಕುಟುಂಬಸ್ಥರು. ಎಲ್ಲರೂ ದುಃಖದ ಮಡುವಿನಲ್ಲಿ ಮುಳುಗಿ ಏಳುತ್ತಿದ್ದಾರೆ. ನಿಗದಿತ ಸಮಯದಲ್ಲಿ ಅಂತಿಮ ವಿಧಿ ವಿಧಾನ ಮುಗಿಸಲಾಗಿದೆ. ಈ ಮೂಲಕ ನಟ ಪುನೀತ್ ರಾಜ್‌ಕುಮಾರ್ ಮಣ್ಣಲ್ಲಿ ಮಣ್ಣಾಗಿದ್ದಾರೆ. 46ನೇ ವಯಸ್ಸಿನಲ್ಲಿ ಅಪ್ಪು ಎಲ್ಲವನ್ನೂ ಬಿಟ್ಟು ದೂರದೂರಿಗೆ ಪಯಣಿಸಿದ್ದಾರೆ.