twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ಹುಟ್ಟುಹಬ್ಬದಂದೇ ಜೇಮ್ಸ್ ಬಿಡುಗಡೆಗೆ ಫ್ಯಾನ್ಸ್ ಒತ್ತಾಯ

    |

    ನಟ ಪುನೀತ್ ಅವರನ್ನು ಕಳೆದುಕೊಂಡು ಇಡೀ ಚಿತ್ರರಂಗವೇ ಬರಡಾಗಿದೆ. ಇನ್ನು ಕೂಡ ಪುನೀತ್ ನಮ್ಮೊಂದಿಗೆ ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆಯೇ ಸಾಕಷ್ಟು ಕಡೆಗಳಲ್ಲಿ ಪುನೀತ್ ಪುಣ್ಯಸ್ಮರಣೆಗಳು ನಡೆಯುತ್ತಿದೆ.

    ಪುನೀತ್ ಕುಟುಂಬ ಮೊನ್ನಯಷ್ಟೆ ಹಾಲು ತುಪ್ಪ ಬಿಡುವ ಕಾರ್ಯವನ್ನು ಮುಕ್ತಾಯವಾಗಿದೆ. ನವೆಂಬರ್ 16ರಂದು ಇಡೀ ಚಿತ್ರರಂಗವೇ ಒಂದು ಗೂಡಿ ಪುನೀತ್ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೀಗೆ ಪುನೀತ್‌ರನ್ನು ಒಂದಲ್ಲ ಒಂದು ರೀತಿಯಾಗಿ ನೆನಪಿಸಿಕೊಳ್ಳುತ್ತಿರುವ ಚಿತ್ರೋದ್ಯಮ, ಅಪ್ಪು ಸ್ಮರಣೆಯಲ್ಲೇ ಇದೆ.

    ಇತ್ತ ಅಭಿಮಾನಿಗಳು ಕೂಡ ಪುನೀತ್‌ರನ್ನ ಕಳೆದುಕೊಂಡಿರೋದಕ್ಕೆ ದುಃಖದಲ್ಲಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡು ಬೇಸರಗೊಂಡಿದ್ದಾರೆ. ಅದೆಷ್ಟೋ ಅಭಿಮಾನಿಗಳು ಊಟ ನೀರು ಬಿಟ್ಟು ಪುನೀತ್ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೇ ದಿನ ದೂಡುತ್ತಿದ್ದಾರೆ. ಪುನೀತ್ ನೆನಪಿನಲ್ಲಿಯೇ ಜೀವನ ಸಾಗಿಸಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಪುನೀತ್ ಅವರ 30ನೇ ಸಿನಿಮಾ ಹಾಗೂ ಕೊನೆಯ ಚಿತ್ರ ಜೇಮ್ಸ್‌ಗಾಗಿ ಎದುರು ನೋಡುತ್ತಿದ್ದಾರೆ. ಪುನೀತ್ ಅಭಿನಯದ ಕೊನೆಯ ಚಿತ್ರವನ್ನಾದರು ನೋಡಿ ಸಮಾಧಾನ ಪಟ್ಟುಕೊಳ್ಳಲು ಕಾತುರರಾಗಿದ್ದಾರೆ.

    Puneeth Rajkumars last film James likely to release on his birth anniversary

    ಹಾಗಿದ್ದರೆ ಜೇಮ್ಸ್ ಸಿನಿಮಾ ಯಾವ ಹಂತದಲ್ಲಿದೆ. ಸಿನಿಮಾ ಯಾವಾಗ ರಿಲೀಸ್ ಆಗಬಹುದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ಇದೀಗ ನಡೆಯುತ್ತಿದೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಜೇಮ್ಸ್ ಚಿತ್ರ ತಯಾರಾಗುತ್ತಿದೆ. ಜೇಮ್ಸ್ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಆದರೆ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಹಾಗೇ ಬಿಟ್ಟು ತೆರಳಿದ್ದಾರೆ ಪುನೀತ್. ಹೀಗಾಗಿ ಜೇಮ್ಸ್ ಸಿನಿಮಾ ರಿಲೀಸ್ ಆಗಬೇಕು ಎಂದರೆ ಸಿನಿಮಾದ ಡಬ್ಬಿಂಗ್ ಕೆಲಸಗಳು ಮುಗಿಯಬೇಕು. ಡಬ್ಬಿಂಗ್ ಆಗಬೇಕು ಎಂದರೇ ಪುನೀತ್‌ಗೆ ಮ್ಯಾಚ್ ಆಗುವಂತ ಧ್ವನಿ ಯಾರು ಕೊಡಬಹುದು ಎಂದು ನೋಡಬೇಕು.

    ಜೇಮ್ಸ್ ಚಿತ್ರದ ಡಬ್ಬಿಂಗ್ ಯಾರಿಂದ ಮಾಡಿಸೋದು ಎಂದು ಚಿತ್ರತಂಡ ಚಿಂತಿಸುತ್ತಿದೆ. ಇದರ ಜೊತೆಗೆ ಮೊದಲು ಚಿತ್ರತಂಡ ಚಿಂತಿಸಿರೋದು ಶಿವರಾಜ್‌ ಕುಮಾರ್ ಬಳಿ ಪುನೀತ್ ಪಾತ್ರಕ್ಕೆ ಧ್ವನಿ ಕೊಡಿಸಬೇಕು ಎಂದು. ಅಭಿಮಾನಿಗಳು ಕೂಡ ಶಿವಣ್ಣ ಪುನೀತ್ ಪಾತ್ರಕ್ಕೆ ಯಾರ ಧ್ವನಿ ನೀಡಿದರೇ ಉತ್ತಮ ಎಂಬ ಅಭಿಪ್ರಾಯ ನೀಡಿದ್ದರು. ಈ ಬಗ್ಗೆ ಎರಡು ದಿನದ ಹಿಂದೆ ಪ್ರತಿಕ್ರೀಯಿಸಿದ್ದ ಶಿವರಾಜ್‌ ಕುಮಾರ್, ಪುನೀತ್ ಪಾತ್ರಕ್ಕೆ ನನ್ನ ಧ್ವನಿ ಬೇಕು ಎಂದಾದರೆ ಖಂಡಿತ ಕೊಡುವೆ ಎಂದಿದ್ದಾರೆ.

    ಇದೀಗ ಮತ್ತೊಂದು ವಿಚಾರ ಹೊರಬಂದಿದ್ದು ಜೇಮ್ಸ್‌ ಚಿತ್ರದ ಪುನೀತ್ ಪಾತ್ರಕ್ಕೆ ರಾಘವೇಂದ್ರ ರಾಜ್‌ಕುಮಾರ್ ಎರಡನೇ ಪುತ್ರ ಯುವರಾಜ್‌ ಕುಮಾರ್ ಧ್ವನಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ಹೊರತಾಗಿ ಡಬ್ಬಿಂಗ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಮತ್ತೊಂದು ವಿಚಾರವೂ ಕೇಳಿ ಬರುತ್ತಿದೆ. ಜೇಮ್ಸ್ ಚಿತ್ರದಲ್ಲಿ ಪುನೀತ್ ಸೈನಿಕನ ಪಾತ್ರ ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ಯಾರಿಂದಲೂ ಧ್ವನಿ ಕೊಡಿಸುವುದು ಸೂಕ್ತ ಎನ್ನಿಸುತ್ತಿಲ್ಲ ಹೀಗಾಗಿ ಟೆಕ್ನಾಲಜಿ ಬಳಸಿ ಪುನೀತ್ ಪಾತ್ರಕ್ಕೆ ಸ್ಕೆಲಿಟನ್ ವಾಯ್ಸ್ ಇಡೋದೆ ಬೆಸ್ಟ್ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಈ ಸ್ಕೆಲಿಟನ್ ವಾಯ್ಸ್ ಎಂದರೇ ಏನು? ಮುಂದೆ ಓದಿ

    Puneeth Rajkumars last film James likely to release on his birth anniversary

    ಸ್ಕೆಲಿಟನ್ ವಾಯ್ಸ್ ಎಂದರೆ ಶೂಟಿಂಗ್ ಸಂದರ್ಭದಲ್ಲಿ ರೆಫರೆನ್ಸ್‌ಗಾಗಿ ಸ್ಕೆಲಿಟನ್ ಮೈಕ್‌ಗಳನ್ನು ಕಲಾವಿದರು ಧರಿಸಿರುತ್ತಾರೆ. ಇದನ್ನು ಆಧರಿಸಿಯೇ ಯಾವ ಸೀನ್‌ಗೆ ಯಾವ ಡೈಲಾಗ್ ಬಳಸಲಾಗಿದೆ ಎಂದು ಡೈರೆಕ್ಟರ್‌ಗಳು ನೋಡಿಕೊಳ್ಳುತ್ತಾರೆ. ಇದರಲ್ಲಿ ಬೇಸ್ ವಾಯ್ಸ್ ಕೂಡ ಇರುತ್ತೆ. ಇದನ್ನೆ ಕೊಂಚ ಮಾಡ್ಯುಲೇಟ್ ಮಾಡಿ ಪುನೀತ್ ಪಾತ್ರಕ್ಕೆ ಅವರದ್ದೇ ಧ್ವನಿ ಜೋಡಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಈ ಪ್ರಯತ್ನವನ್ನು ಈ ಹಿಂದೆ ಎಲ್ಲೂ ಮಾಡಿಲ್ಲ. ಆದರೆ ಕನ್ನಡದ ತಿಥಿ ಸಿನಿಮಾ ಪೂರ್ತಿ ಸ್ಕೆಲಿಟನ್ ವಾಯ್ಸ್‌ಅನ್ನೆ ಬಳಸಲಾಗಿತ್ತು. ಹೀಗಾಗಿ ಸ್ಕೆಲಿಟನ್ ವಾಯ್ಸ್ ಪ್ರಯೋಗ ಜೇಮ್ಸ್ ಚಿತ್ರದಲ್ಲಿ ಆಗುತ್ತಾ ಅನ್ನೋದನ್ನ ನೋಡಬೇಕಿದೆ.

    ಇನ್ನು ಜೇಮ್ಸ್ ಚಿತ್ರ ರಿಲೀಸ್ ವಿಚಾರಕ್ಕೆ ಬಂದರೇ ಪುನೀತ್ ಹುಡ್ಡಿದ ದಿನ ಅಂದರೆ ಮಾರ್ಚ್ 17ರಂದು ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಪುನೀತ್ ಹುಟ್ಟುಹಬ್ಬದ ದಿನ ಸಿನಿಮಾ ರಿಲೀಸ್ ಮಾಡೋದರ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ. ಈ ಎಲ್ಲಾ ಕೆಲಸಗಳ ಜೊತೆಗೆ ಜೇಮ್ಸ್ ಚಿತ್ರದ ಒಂದು ಹಾಡಿನ ಪ್ಯಾಚ್ ಅಪ್ ವರ್ಕ್‌ ಕೂಡ ಬಾಕಿ ಇದೆ. ಇದೆಲ್ಲವನ್ನು ಮುಗಿಸಿ ಚಿತ್ರತಂಡ ಜೇಮ್ಸ್‌ ಸಿನಿಮಾವನ್ನು ಯಾವಾಗ ಅಭಿಮಾನಿಗಳ ಮುಂದೆ ಇಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

    English summary
    Puneeth Rajkumar's last film James likely to release on his birth anniversary on March 17. Shiva Rajkumar to dub for James.
    Thursday, November 4, 2021, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X