For Quick Alerts
  ALLOW NOTIFICATIONS  
  For Daily Alerts

  ಪುನೀತ್ ಆತ್ಮದೊಂದಿಗೆ ಮಾತುಕತೆ: ಸಿಟ್ಟಿಗೆದ್ದ ಅಪ್ಪು ಅಭಿಮಾನಿಗಳು

  |

  ಕರ್ನಾಟಕದ ಯುವರತ್ನ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರನ್ನೂ ಅಗಲಿ 11 ದಿನಗಳಾಗಿದೆ. ಪುನೀತ್ ಅಭಿಮಾನಿಗಳು, ಅಣ್ಣಾವ್ರ ಕುಟುಂಬ ಅಪ್ಪು ಅಗಲಿದ ನೋವಿನಲ್ಲೇ 11 ನೇ ದಿನದ ಕಾರ್ಯಗಳನ್ನು ನೆರವೇರಿಸುತ್ತಿದೆ. ದೊಡ್ಮನೆ ಕುಟುಂಬದಲ್ಲಿ 11ನೇ ಪುಣ್ಯ ದಿನದ ವಿಧಿ-ವಿಧಾನಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಅಭಿಮಾನಿಗಳು ತಮಗೆ ತಿಳಿದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಪುಣ್ಯತಿಥಿಯಂದು ಅನ್ನದಾನ ಮಾಡುತ್ತಿದ್ದಾರೆ.

  ಈ ಮಧ್ಯೆ ವಿದೇಶದಲ್ಲಿ ಆತ್ಮಗಳ ಜೊತೆ ಮಾತನಾಡುವ ವ್ಯಕ್ತಿಯೊಬ್ಬ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತಾನಾಡಿದ್ದೇನೆ ಎನ್ನುವ ವೀಡಿಯೊವೊಂದನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಆ ವಿಡಿಯೋ ನೋಡಿದ ಪುನೀತ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಅಷ್ಟಕ್ಕೂ ಪುನೀತ್ ಆತ್ಮದ ಜೊತೆ ಮಾಡಿದ ಆ ವ್ಯಕ್ತಿ ಯಾರು? ಆ ವಿಡಿಯೋದಲ್ಲಿ ಅಪ್ಪು ಆತ್ಮ ಮಾತನಾಡಿದ್ದು ನಿಜವೇ? ಅಪ್ಪು ಅಭಿಮಾನಿಗಳ ಕೋಪಕ್ಕೆ ಕಾರಣವೇನು? ಅನ್ನೋ ಮಾಹಿತಿ ಇಲ್ಲಿದೆ.

  ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಚಾರ್ಲಿ ಮಾತು

  ಕರ್ನಾಟಕದ ಜನತೆ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಹೊರಬಂದಿಲ್ಲ. ಈ ದು:ಖವನ್ನು ನುಂಗಿಕೊಂಡು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸಮಾಧಿಗೆ ಬಂದು ನಮನ ಸಲ್ಲಿಸುತ್ತಿದ್ದಾರೆ. ರಾಜ್ಯದ ಸಣ್ಣ-ಪುಟ್ಟ ಗ್ರಾಮಗಳಲ್ಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡು ನೆಚ್ಚಿನ ನಟನಿಗೆ ಗೌರವ ಸೂಚಿಸಲು ಮುಂದಾಗಿದ್ದಾರೆ. ಈ ಮಧ್ಯೆ ಚಾರ್ಲಿ ಚೆಟ್ಟಿನ್‌ಡೆನ್ ಅನ್ನುವ ವ್ಯಕ್ತ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಪು ಆತ್ಮದೊಂದಿಗೆ ಮಾತಾಡಿದ್ದೇನೆ ಎನ್ನುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾನೆ.

  ಚಾರ್ಲಿ ಶೇರ್ ಮಾಡಿದ ವೀಡಿಯೊದಲ್ಲಿ ಏನಿದೆ?

  ಚಾರ್ಲಿ ಶೇರ್ ಮಾಡಿದ ವೀಡಿಯೊದಲ್ಲಿ ಏನಿದೆ?

  ಪ್ಯಾರಾನಾರ್ಮಲ್ ಸ್ಪೆಷಲಿಸ್ಟ್ ಚಾರ್ಲಿ ಸೆಲೆಬ್ರಿಟಿ ಆತ್ಮಗಳ ಜೊತೆ ಮಾತನಾಡುತ್ತೇನೆಂದು ಹೇಳಿಕೊಂಡಿದ್ದಾನೆ. ಪುನೀತ್ ರಾಜ್‌ಕುಮಾರ್ ಆತ್ಮದ ಜೊತೆ ಮಾತಾಡಿದ್ದೇನೆ ಎನ್ನವ ವಿಡಿಯೋದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. 3 ನಿಮಿಷ 51 ಸೆಕೆಂಡುಗಳ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಚಾರ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಈ ಸಂದರ್ಭದಲ್ಲಿ ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಅತ್ತ ಕಡೆಯಿಂದ 'ಐ ಲವ್ ದೆಮ್' ಅನ್ನುವ ಉತ್ತರ ಬಂದಿದೆ. ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದರೂ ಅವುಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

  ಚಾರ್ಲಿ ಮಾಡಿದ್ದು ಗಿಮಿಕ್ ಅಪ್ಪು ಫ್ಯಾನ್ಸ್ ಕಿಡಿ

  ಚಾರ್ಲಿ ಮಾಡಿದ್ದು ಗಿಮಿಕ್ ಅಪ್ಪು ಫ್ಯಾನ್ಸ್ ಕಿಡಿ

  ಅಪ್ಪು ಆತ್ಮದ ಜೊತೆ ಮಾತಾಡಿದ್ದೇನೆ ಎಂದು ಚಾರ್ಲಿ ಹಾಕಿರುವ ಪೋಸ್ಟ್ ಪುನೀತ್ ಫ್ಯಾನ್ಸ್ ಕೋಪಗೊಂಡಿದ್ದಾರೆ. ಈ ವೀಡಿಯೊದ ಕಮೆಂಟ್ ಸೆಕ್ಷನ್‌ನಲ್ಲಿ ಚಾರ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರಿಗೆ ಸುಳ್ಳು ಸುದ್ದಿ ಹಬ್ಬಿಸಿ ಫೂಲ್ ಮಾಡುತ್ತಾನೆ. ನಮ್ಮ ಅಪ್ಪು ಬಾಸ್ ಹೆಸರು ಹೇಳಿಕೊಂಡು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾನೆ. ಇದನ್ನೆಲ್ಲಾ ನೋಡುವವರು ದಯವಿಟ್ಟು ನಂಬಬೇಡಿ. ಮತ್ತೆ ಕೆಲವರು ಇದು ಪುನೀತ್ ರಾಜ್‌ಕುಮಾರ್ ಅವರ ಧ್ವನಿಯೇ ಅಲ್ಲವೆಂದು ಕಮೆಂಟ್ ಮಾಡಿದ್ದಾರೆ.

  ಹಿರಿಯ ನಟಿ ಜಯಂತಿ, ಸಾವಿತ್ರಿ ಕೊನೆಗೆ ಸಾಯಿ ಬಾಬಾರನ್ನೂ ಬಿಟ್ಟಿಲ್ಲ

  ಹಿರಿಯ ನಟಿ ಜಯಂತಿ, ಸಾವಿತ್ರಿ ಕೊನೆಗೆ ಸಾಯಿ ಬಾಬಾರನ್ನೂ ಬಿಟ್ಟಿಲ್ಲ

  ಚಾರ್ಲಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಾಕಷ್ಟು ಸೆಲೆಬ್ರೆಟಿಗಳ ಆತ್ಮದೊಂದಿಗೆ ಮಾತಾಡಿದ್ದಾನೆ. ಕನ್ನಡದ ಇಬ್ಬರು ಹಿರಿಯ ನಟಿಯರೂ ಇದ್ದಾರೆ. ಕೆಲವೇ ತಿಂಗಳುಗಳ ಹಿಂದಷ್ಟೇ ಸಾವನ್ನಪ್ಪಿದ ಹಿರಿಯ ನಟಿ ಜಯಂತಿ ಆತ್ಮದ ಜೊತೆ ಮಾತಾನಾಡಿದ್ದೇನೆ ಎಂದಿದ್ದಾನೆ. ಹಾಗೆ ಲೆಜೆಂಡರಿ ನಟಿ ಸಾವಿತ್ರ ಆತ್ಮದ ವಿಡಿಯೊ ಮಾಡಿದ್ದಾನೆ. ಎಲ್ಲಕ್ಕಿಂತ ತಮಾಷೆ ಅಂದರೆ, ಸಾಯಿ ಬಾಬಾರನ್ನೂ ಬಿಟ್ಟಿಲ್ಲ. ಅವರ ಆತ್ಮದ ಜೊತೆನೂ ಮಾತಾಡಿದ್ದೇನೆ ಅನ್ನುವ ವಿಡಿಯೋ ಬಿಟ್ಟಿದ್ದಾನೆ.

  ಸುಶಾಂತ್ ಸಿಂಗ್ ಆತ್ಮದೊಂದಿಗೆ ಮತ್ತೊಬ್ಬ ಸ್ವೀವ್ ಹಫ್ ಮಾತಾಡಿದ್ದ

  ಸುಶಾಂತ್ ಸಿಂಗ್ ಆತ್ಮದೊಂದಿಗೆ ಮತ್ತೊಬ್ಬ ಸ್ವೀವ್ ಹಫ್ ಮಾತಾಡಿದ್ದ

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಭಾರತದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಬಳಿಕ ಪ್ಯಾರನಾರ್ಮಲ್ ಸ್ಪೆಷಲಿಸ್ಟ್ ಸ್ವೀವ್ ಹಫ್ ಎಂಬುವವ ಸುಶಾಂತ್ ಸಿಂಗ್ ಆತ್ಮದ ಜೊತೆ ಮಾತಾಡಿರುವ ವಿಡಿಯೋ ಮಾಡಿ ಶೇರ್ ಮಾಡಿದ್ದನು. ಸ್ವೀವ್ ಮಾಡಿದ ಆ ವೀಡಿಯೊ ಸುಮಾರು 1 ಕೋಟಿ 15 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇಲ್ಲಿಂದ ಸೆಲೆಬ್ರೆಟಿಗಳ ಆತ್ಮದ ಜೊತೆ ಮಾತಾಡುವ ಟ್ರೆಂಡ್ ಶುರುವಾಗಿದೆ. ಈ ಮೂಲಕ ಅವರ ಅಭಿಮಾನಿಗಳ ಭಾವನೆಗಳ ಜತೆ ಆಟ ಆಡುವ ಕೆಲಸ ನಡೆಯುತ್ತಿದೆ. ಇದನ್ನು ಬುದ್ಧಿವಂತ ಅಭಿಮಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ.

  English summary
  Paranormal specialist Charlie Chittenden posted a video of ghost box session interview with Puneetha Rajkumar Soul. Puneeth Rajkumar fans angry about this video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X