For Quick Alerts
  ALLOW NOTIFICATIONS  
  For Daily Alerts

  'ತ್ರಯಂಬಕಂ' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್.!

  |

  ಬಹು ವರ್ಷಗಳ ನಂತರ ಅಣ್ಣಾವ್ರ ಮಗ ರಾಘವೇಂದ್ರ ರಾಜ್ ಕುಮಾರ್ ಬಣ್ಣ ಹಚ್ಚಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈಗಾಗಲೇ 'ಅಮ್ಮನ ಮನೆ' ಸಿನಿಮಾದಲ್ಲಿ ಅಭಿನಯಿಸಿರುವ ರಾಘವೇಂದ್ರ ರಾಜ್ ಕುಮಾರ್ 'ತ್ರಯಂಬಕಂ' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

  ವಿಶಿಷ್ಟ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಿರುವ 'ತ್ರಯಂಬಕಂ' ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. 'ತ್ರಯಂಬಕಂ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಫೆಬ್ರವರಿ 23 ರಂದು ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.

  ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್.!

  ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ.

  14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು?

  ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಘವೇಂದ್ರ ರಾಜ್ ಕುಮಾರ್, ರೋಹಿತ್, ಅನುಪಮ ಗೌಡ ಇದ್ದಾರೆ. ಅವಿನಾಶ್.ಯು.ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

  ಕಮ್ ಬ್ಯಾಕ್ ಮಾಡಿದ ರಾಘಣ್ಣನಿಗೆ ಅಮ್ಮನಾಗುತ್ತಿರುವವರು ಇವರೇ

  ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬಿ.ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನ ಹಾಗೂ ವೆಂಕಟ್ ದೇವ್ ಅವರ ಸಹ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ಕನಸಿನ ಕವನ ರಚಿಸಿದ್ದಾರೆ. ಸಂಭಾಷಣೆಯನ್ನು ನವೀನ್ ಕೃಷ್ಣ ಬರೆದಿದ್ದಾರೆ.

  English summary
  Power Star Puneeth Rajkumar to release Raghavendra Rajkumar starrer 'Triyambakam' trailer on Feb 23rd. 'Triyambakam' is directed by Dayal Padmanabhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X