For Quick Alerts
  ALLOW NOTIFICATIONS  
  For Daily Alerts

  ಶರಣ್ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಿರ್ಮಾಪಕ..!

  By Harshitha
  |

  ಕೆಲವೇ ದಿನಗಳ ಹಿಂದೆಯಷ್ಟೇ ಪವನ್ ಒಡೆಯರ್ ನಿರ್ದೇಶಿಸಲಿರುವ ಹೊಸ ಚಿತ್ರ 'ನಟರಾಜ ಸರ್ವೀಸ್' ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. ಇದೀಗ ಇದೇ 'ನಟರಾಜ ಸರ್ವೀಸ್' ಚಿತ್ರದ ಬಗ್ಗೆ ಗಾಂಧಿನಗರದಿಂದ ಹೊಸ ಸುದ್ದಿ ಹೊರಬಿದ್ದಿದೆ.

  'ನಟರಾಜ ಸರ್ವೀಸ್' ಚಿತ್ರದಲ್ಲಿ ನಾಯಕನಾಗಿ ನಟಿಸುವುದಕ್ಕೆ ಶರಣ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದಕ್ಕಿಂತ ಇಂಟ್ರೆಸ್ಟಿಂಗ್ ನ್ಯೂಸ್ ಅಂದ್ರೆ, ಇದೇ ಚಿತ್ರಕ್ಕೆ ಬಂಡವಾಳ ಹಾಕುವುದಕ್ಕೆ ಪುನೀತ್ ರಾಜ್ ಕುಮಾರ್ ಮುಂದೆ ಬಂದಿದ್ದಾರಂತೆ.

  ವರದಿಗಳ ಪ್ರಕಾರ, ಪುನೀತ್ ರಾಜ್ ಕುಮಾರ್ ಹೋಮ್ ಪ್ರೊಡಕ್ಷನ್ ನ ಪ್ರಪ್ರಥಮ ಕಾಣಿಕೆಯಾಗಿ 'ನಟರಾಜ ಸರ್ವೀಸ್' ಸಿದ್ಧವಾಗಲಿದೆ. ಆ ಮೂಲಕ ನಿರ್ಮಾಪಕನಾಗಲಿದ್ದಾರೆ ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್. [ನಿರ್ದೇಶಕ ಪವನ್ ಒಡೆಯರ್ ಮುಂದಿನ ಚಿತ್ರ 'ನಟರಾಜ ಸರ್ವೀಸ್']

  ಹಾಗ್ನೋಡಿದ್ರೆ, 'ನಟರಾಜ ಸರ್ವೀಸ್' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಆಪ್ತ ಎನ್.ಎಸ್.ರಾಜ್ ಕುಮಾರ್ ಬಂಡವಾಳ ಹಾಕ್ಬೇಕಿತ್ತು. 'ಮೈನಾ', 'ಜಟ್ಟ' ಮತ್ತು 'ಮೈತ್ರಿ' ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಎನ್.ಎಸ್.ರಾಜ್ ಕುಮಾರ್ 'ನಟರಾಜ ಸರ್ವೀಸ್' ನಿರ್ಮಾಪಕ ಅಂತ ಅನೌನ್ಸ್ ಆಗಿತ್ತು. ಆದ್ರೀಗ, ಸ್ವತಃ ಅಪ್ಪು ನಿರ್ಮಾಣ ಮಾಡಲಿದ್ದಾರೆ ಅನ್ನುವ ಮಾಹಿತಿ ಹೊರಬಿದ್ದಿದೆ.

  ಈ ಬಗ್ಗೆ ಪುನೀತ್ ರಾಜ್ ಕುಮಾರ್ ಇನ್ನೂ ಅಫೀಶಿಯಲ್ ಕನ್ಫರ್ಮೇಷನ್ ನೀಡಿಲ್ಲ. ಅಂದ್ಹಾಗೆ, 'ನಟರಾಜ ಸರ್ವೀಸ್' ಶುರುವಾಗುವುದು ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಮುಗಿದ ಮೇಲೆ. (ಏಜೆನ್ಸೀಸ್)

  English summary
  According to the reports, Kannada Actor Puneeth Rajkumar has turned Producer for Pawan Wadeyar directorial 'Nataraja Service'. Sharan is playing lead in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X