Don't Miss!
- News
Budget 2023: ಸತತ 5 ಬಾರಿ ಬಜೆಟ್ ಮಂಡಿಸಿದ ಆರನೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್- ಉಳಿದವರು ಯಾರು? ತಿಳಿಯಿರಿ
- Automobiles
ರಾಜ್ಯದ ಈ ನಗರಗಳಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಸೇವೆ: KSRTC ತೀರ್ಮಾನ!
- Finance
Budget 2023: ಬಜೆಟ್ಗೆ ಕೆಂಪು ಸೀರೆ ಉಟ್ಟ ವಿತ್ತ ಸಚಿವೆ, ವಿಶೇಷತೆಯೇನು?
- Technology
Budget 2023: ಬಜೆಟ್ ಪ್ರತಿಯನ್ನು ಪ್ರಾದೇಶಿಕ ಭಾಷೆಯಲ್ಲಿ ಡೌನ್ಲೋಡ್ ಮಾಡಲು ಹೀಗೆ ಮಾಡಿ!
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Sports
ರಣಜಿ ಟ್ರೋಫಿ: ಕ್ವಾ. ಫೈನಲ್ನಲ್ಲಿ ಕರ್ನಾಟಕ vs ಉತ್ತರಾಖಂಡ್ ಸೆಣೆಸಾಟ: 2ನೇ ದಿನದ Live score
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ: ಫ್ಯಾನ್ಸ್ ವಾರ್ ಬಗ್ಗೆ ಅಪ್ಪು ಹೇಳಿದ್ದ ಮಾತು ಮತ್ತೆ ವೈರಲ್!
ನಿನ್ನೆ (ಡಿಸೆಂಬರ್ 18) ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ. ಆ ಬಗ್ಗೆ ಕನ್ನಡ ಚಿತ್ರರಂಗದಲ್ಲಿಯೇ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಇನ್ನೊಂದು ಕಡೆ ದರ್ಶನ್ ಅಭಿಮಾನಿಗಳು ಕೂಡ ರೊಚ್ಚಿಗೆದ್ದಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದಲೇ ಈ ಘಟನೆ ನಡೆದಿದೆ ಅಂತ ಕೆಲ ದರ್ಶನ್ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಹೊಸಪೇಟೆ ರಾಜಕೀಯ ಮುಖಂಡರುಗಳ ಮೇಲೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ತಾರಕಕ್ಕೇರಿದೆ.
'ಕ್ರಾಂತಿ'
ಪ್ರಚಾರದ
ವೇಳೆ
ದರ್ಶನ್
ಮೇಲೆ
ಚಪ್ಪಲಿ
ಎಸೆದ
ಕಿಡಿಗೇಡಿ!
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಅಭಿಮಾನಿಗಳ ಮಧ್ಯೆ ಬಿಗುವಿನ ವಾತಾವರಣ ಏರ್ಪಟ್ಟಿದೆ. ಅದೇ ಮತ್ತೊಂದು ಕಡೆ ಫ್ಯಾನ್ಸ್ ವಾರ್ ಬಗ್ಗೆ ಪುನೀತ್ ರಾಜ್‌ಕುಮಾರ್ ಕೆಲವು ವರ್ಷಗಳ ಹಿಂದಷ್ಟೇ ಹೇಳಿದ್ದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಪವರ್‌ಸ್ಟಾರ್ ಫ್ಯಾನ್ಸ್ ವಾರ್ ಬಗ್ಗೆ ಏನು ಹೇಳಿದ್ದರು? ಅನ್ನೋದು ತಿಳಿಯೋಕೆ ಮುಂದೆ ಓದಿ.

ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್?
ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಅನ್ನೋದು ಇದೇ ಮೊದಲೇನಲ್ಲ. ಹಿಂದಿನಿಂದಲೂ ಸೂಪರ್‌ಸ್ಟಾರ್ ಅಭಿಮಾನಿಗಳ ನಡುವೆ ವಾರ್ ನಡೆಯುತ್ತಲೇ ಇವೆ. ಸಿನಿಮಾ ಬಿಡುಗಡೆ ವೇಳೆಯಂತೂ ಈ ಫ್ಯಾನ್ಸ್ ವಾರ್ ಸ್ವಲ್ಪ ದೊಡ್ಡದಾಗಿಯೇ ಇರುತ್ತೆ. ಸೋಶಿಯಲ್ ಮೀಡಿಯಾದಲ್ಲಂತೂ ಅಭಿಮಾನಿಗಳ ಆರ್ಭಟ ಹೇಳತೀರದು. ಇಂತಹ ಸಂದರ್ಭಗಳಲ್ಲೆಲ್ಲಾ ಸೂಪರ್‌ಸ್ಟಾರ್ ಮುಂದೆ ಬಂದು ಫ್ಯಾನ್ಸ್ ವಾರ್‌ಗೆ ಬ್ರೇಕ್ ಹಾಕಿದ್ದಾರೆ. ಅಪ್ಪು ಕೂಡ ಫ್ಯಾನ್ಸ್ ವಾರ್ ಬಗ್ಗೆ ಕೇಳಿದ ಪ್ರಶ್ನೆಗೆ ಅಂದೇ ಉತ್ತರ ಕೊಟ್ಟಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ.

'ಸ್ಟಾರ್‌ಗಳ ಮೇಲಿನ ಪ್ರೀತಿ ಮೇಲೆ ಮಾತಾಡುತ್ತಾರೆ'
" ಆ ನಟರು. ಈ ನಟರು ಅಂತೇನು ಇಲ್ಲ. ಎಲ್ಲಾ ನಟರಿಗೂ ಅಭಿಮಾನಿಗಳು ಇರುತ್ತಾರೆ. ಎಲ್ಲರೂ ಅಭಿಮಾನಿಗಳೆನೇ. ಅವರವರ ಸ್ಟಾರ್‌ಗಳ ಮೇಲಿನ ಪ್ರೀತಿ ಮೇಲೆ ಮಾತಾಡುತ್ತಾರೆ. ಅದು ತಪ್ಪು ಸರಿ ಅಂತ ನಾವು ಹೇಳುವುದಕ್ಕೆ ಆಗುವುದಿಲ್ಲ. ಆದರೂ ಏನು ಹೇಳುತ್ತೇವೆ ಅಂದರೆ, ಎಲ್ಲರೂ ಚೆನ್ನಾಗಿ ಮುಂದೆ ಬರೋಣ. ನಮ್ಮ ಕನ್ನಡ ಸಿನಿಮಾ ಚೆನ್ನಾಗಿ ಬರಬೇಕು. ಅಷ್ಟೇನೆ ನಾನು ಹೇಳುವುದು." ಎಂದು ಪುನೀತ್ ರಾಜ್‌ಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ಫ್ರೆಂಡ್‌ಶಿಪ್‌ನಲ್ಲಿ ಅದೆಲ್ಲ ಬರಬಾರದು'
ಇನ್ನೊಂದು ಸಂದರ್ಶನದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲಾ ನಟರ ಅಭಿಮಾನಿಗಳಿಗೆ ಸಲಹೆ ನೀಡಿದ್ದರು. ಫ್ಯಾನ್ಸ್ ಜಗಳ ಆಡುವುದನ್ನು ಬಿಡಬೇಕು ಅಂತ ಕರೆ ನೀಡಿದ್ದರು. "ಒಬ್ಬರ ಫ್ಯಾನ್ಸ್ ಇನ್ನೊಬ್ಬರ ಫ್ಯಾನ್ಸ್ ಜೊತೆ ಜಗಳ ಆಡೋದನ್ನು ಬಿಟ್ಟುಬಿಡಬೇಕು. ನಾನು ಅದೇ ಹೇಳುತ್ತಿರುತ್ತೇನೆ. ಪ್ರತಿಯೊಬ್ಬರಿಗೂ ಅವರ ಹೀರೊ ಮೇಲೆ ಪ್ರೀತಿ ವಿಶ್ವಾಸ ಇದ್ದೇ ಇರುತ್ತೆ. ನಿಮಗೂ ನಿಮ್ಮ ಹೀರೊ ಮೇಲೆ ಪ್ರೀತಿ ವಿಶ್ವಾಸ ಇದ್ದೇ ಇರುತ್ತೆ. ಹಾಗಾಗಿ ಫ್ರೆಂಡ್‌ಶಿಪ್‌ನಲ್ಲಿ ಅದೆಲ್ಲ ಬರಬಾರದು. ನಾವೆಲ್ಲ ಒಂದೇ ಅಂತ ಅಂದುಕೊಳ್ಳೋಣ" ಎಂದು ಪುನೀತ್ ಹೇಳಿದ್ದರು.

ಈ ಘಟನೆ ಬಳಿಕ ದರ್ಶನ್ ಹೇಳಿದ್ದೇನು?
'ಕ್ರಾಂತಿ' ಸಿನಿಮಾ ಎರಡನೇ ಹಾಡು ರಿಲೀಸ್ ಮಾಡುವ ವೇಳೆ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದರು. ಆ ಬಳಿಕ ದರ್ಶನ್ ಕೂಡ "ತಪ್ಪೇನಿದೆ ಚಿನ್ನ ಪರ್ವಾಗಿಲ್ಲ" ಎಂದು ಹೇಳಿಕೆ ನೀಡಿದ್ದರು. ಆ ವಿಡಿಯೋ ಕೂಡ ವೈಲರ್ ಆಗುತ್ತಿದೆ. ಒಟ್ಟಾರೆ, ಅಭಿಮಾನಿಗಳು ಪರಸ್ಪರ ಕಿತ್ತಾಡುವುದನ್ನು ನಿಲ್ಲಿಸಿ, ಎಲ್ಲಾ ಕನ್ನಡ ಸಿನಿಮಾಗಳಿಗೂ, ಕನ್ನಡ ನಟರಿಗೂ ಬೆಂಬಲ ನೀಡುವ ಅಗತ್ಯವಂತೂ ಇದ್ದೇ ಇದೆ.