twitter
    For Quick Alerts
    ALLOW NOTIFICATIONS  
    For Daily Alerts

    2002ರಲ್ಲೇ ಬೇರೆ ನಟರಿಗಾಗಿ ಸಿನಿಮಾ ನಿರ್ಮಿಸಲು ಬಯಸಿದ್ದರು ಪುನೀತ್

    |

    ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ನಟ ಪುನೀತ್ ರಾಜ್‌ಕುಮಾರ್ ವಿಭಿನ್ನ ಕಥಾಹಂದರ ಹಾಗೂ ಶೈಲಿಯ ಪ್ರಯೋಗಾತ್ಮಕ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. 'ಕವಲು ದಾರಿ' ಬಳಿಕ ಈಗ 'ಮಾಯಾಬಜಾರ್' ಎಲ್ಲೆಡೆ ಸದ್ದು ಮಾಡುತ್ತಿದೆ. ವಜ್ರೇಶ್ವರಿ ಕಂಬೈನ್ಸ್ ಅಡಿ ರಾಜ್‌ಕುಮಾರ್ ಕುಟುಂಬ ಹಿಂದಿನಿಂದಲೂ ಸಿನಿಮಾ ನಿರ್ಮಿಸಿಕೊಂಡು ಬಂದಿದ್ದರೂ ಪುನೀತ್ ತಮ್ಮದೇ ಪ್ರತ್ಯೇಕ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.

    ನಟನಾಗಿ ಯಶಸ್ಸು ಕಂಡಿದ್ದರೂ ಪುನೀತ್ ರಾಜ್ ಕುಮಾರ್ ಅವರ ಕನಸು ಬೇರೆಯದೇ ಇತ್ತು. ಅದನ್ನು ಸಾಕಾರಗೊಳಿಸುವ ಹಾದಿಯಲ್ಲಿ ಅವರು ಸಾಗಿದ್ದಾರೆ. ತಮ್ಮ ಸಿನಿಮಾ ಮಿತಿಗಳಾಚೆ ಕೆಲವು ಕೊರಗುಗಳನ್ನು ನೀಗಿಸಲು ಅವರು ವಸ್ತುವಿಗೆ ಹೆಚ್ಚು ಆದ್ಯತೆ ನೀಡುವ ಕಥೆಗಳನ್ನು ಆಧರಿಸಿದ ಸಿನಿಮಾಗಳನ್ನು ನಿರ್ಮಿಸುವ ಬಹುಕಾಲದ ಕನಸನ್ನು ಈಡೇರಿಸಲೆಂದೇ ಪಿಆರ್‌ಕೆ ಪ್ರೊಡಕ್ಷನ್ಸ್ ಆರಂಭಿಸಿದ್ದು. ಅದರ ತನ್ನ ಆಶಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂಬ ತೃಪ್ತಿ ಅವರಲ್ಲಿದೆ.

    ಮಂತ್ರಾಲಯದಲ್ಲಿ ಪುನೀತ್: ರಾಯರ ದರ್ಶನ ಮಾಡಿ ಭಾವುಕರಾದ ಅಪ್ಪುಮಂತ್ರಾಲಯದಲ್ಲಿ ಪುನೀತ್: ರಾಯರ ದರ್ಶನ ಮಾಡಿ ಭಾವುಕರಾದ ಅಪ್ಪು

    ಸಿನಿಮಾ ನಿರ್ಮಾಣದ ಆಸೆ ಏಕೆ, ತಮ್ಮದೇ ಸಂಸ್ಥೆ ಇದ್ದರೂ ಮತ್ತೊಂದು ನಿರ್ಮಾಣ ಸಂಸ್ಥೆಯ ಮೂಲಕ ಪ್ರಯೋಗಗಳಿಗೆ ಕೈಹಾಕಿದ್ದೇಕೆ ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ.

    2002ರಿಂದಲೂ ಕನಸು

    2002ರಿಂದಲೂ ಕನಸು

    ನಾನು 2002ರಲ್ಲಿ ನಟನೆ ಆರಂಭಿಸಿದಾಗಿನಿಂದಲೂ ಬೇರೆ ನಟರಿಗೆ ಸಿನಿಮಾ ನಿರ್ಮಿಸಬೇಕೆಂಬ ಕನಸು ಕಂಡಿದ್ದೆ. ಯಾವಾಗಲೂ ಆ ಬಯಕೆ ಇತ್ತು. ಇತರೆ ನಟರಿಗೆ, ಸಿನಿಮಾ ನಿರ್ದೇಶಕರಿಗಾಗಿ ಸಿನಿಮಾ ಮಾಡಬೇಕೆಂಬುದು ಯಾವಾಗಲೂ ಮನಸಿನಲ್ಲಿ ಇತ್ತು.

    ಉತ್ತಮ ಕಂಟೆಂಟ್, ಸ್ಕ್ರಿಪ್ಟ್‌ಗೆ ಆದ್ಯತೆ

    ಉತ್ತಮ ಕಂಟೆಂಟ್, ಸ್ಕ್ರಿಪ್ಟ್‌ಗೆ ಆದ್ಯತೆ

    2017ರಲ್ಲಿ ಈ ಆಲೋಚನೆಗೆ ಒಂದು ರೂಪ ಸಿಕ್ಕಿತು. ಹಾಗಾಗಿ ಇದೇ ಪ್ರೊಡಕ್ಷನ್ ಕಂಪೆನಿ ಅಡಿಯಲ್ಲಿ ಸಣ್ಣದೊಂದು ಬ್ರ್ಯಾಂಡ್ ಆರಂಭಿಸಲು ಯೋಚಿಸಿದೆ. ಅದೇ ಪಿಆರ್‌ಕೆ. ಉತ್ತಮ ಕಂಟೆಂಟ್, ಒಳ್ಳೆಯ ಸ್ಕ್ರಿಪ್ಟ್ ಹಾಗೂ ಸ್ಕ್ರೀನ್ ಪ್ಲೇ ಹೊಂದಿರುವ ಚಿತ್ರಗಳೊಂದಿಗೆ ಸಾಗುವುದು ಇದರ ಗುರಿ. ಒಳ್ಳೆಯ ಸಿನಿಮಾಗಳನ್ನು ಮಾಡಲು ಪ್ರಯತ್ನಿಸಿದೆವು. ದೇವರ ದಯೆಯಿಂದ 'ಕವಲು ದಾರಿ' ಬಂದಿತು. ಅದು ಚೆನ್ನಾಗಿ ನಡೆಯಿತು.

    ಚಿತ್ರರಂಗದಲ್ಲಿ 44 ವರ್ಷ ಪೂರೈಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ಚಿತ್ರರಂಗದಲ್ಲಿ 44 ವರ್ಷ ಪೂರೈಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

    83 ಸಿನಿಮಾಗಳಲ್ಲಿ 65 ಗೆಲುವು

    83 ಸಿನಿಮಾಗಳಲ್ಲಿ 65 ಗೆಲುವು

    ನಮ್ಮ ವಜ್ರೇಶ್ವರಿ ಪ್ರೊಡಕ್ಷನ್ ಕಂಪೆನಿ 40 ವರ್ಷದಷ್ಟು ಹಳೆಯದು. ನಮ್ಮ ಅಮ್ಮ 1975-96ರಲ್ಲಿ 'ಶ್ರೀನಿವಾಸ ಕಲ್ಯಾಣ'ದೊಂದಿಗೆ ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಬಳಿಕ ನಮ್ಮ ನಿರ್ಮಾಣವು 2013ರ 'ಯಾರೇ ಕೂಗಾಡಲಿ' ವರೆಗೂ ಮುಂದುವರಿಯಿತು. ನಮ್ಮ ಕುಟುಂಬಕ್ಕೆ ನಿರ್ಮಾಣದ ಹಿನ್ನೆಲೆಯಿದೆ. ಇದುವರೆಗೂ 83 ಸಿನಿಮಾಗಳನ್ನು ನೀಡಿದ್ದೇವೆ. ಅವುಗಳಲ್ಲಿ 65 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿವೆ. ಹೀಗಾಗಿ ನಮ್ಮ ಸಂಸ್ಥೆಯ ಯಶಸ್ಸಿನ ಪ್ರಮಾಣ ಅಧಿಕ.

    ಕುಟುಂಬದ ಸಿನಿಮಾಗಳೇ ನಿರ್ಮಾಣ

    ಕುಟುಂಬದ ಸಿನಿಮಾಗಳೇ ನಿರ್ಮಾಣ

    ಈ 83 ಸಿನಿಮಾಗಳ ಸಂಪೂರ್ಣ ನಿರ್ಮಾಣವನ್ನು ಕುಟುಂಬವೇ ನಿರ್ವಹಿಸಿದೆ. ಹೆಚ್ಚಿನ ಸಿನಿಮಾಗಳು ಡಾ. ರಾಜ್ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರಿಗಾಗಿ ಮಾಡಲಾಗಿದೆ. ವಿನಯ್ ರಾಘವೇಂದ್ರ ರಾಜ್‌ಕುಮಾರ್ ಎರಡು ಸಿನಿಮಾ ಮಾಡಿದ್ದಾನೆ. ಈ ಎಲ್ಲ ಸಿನಿಮಾಗಳು ನಿರ್ದಿಷ್ಟ ಬ್ಯಾನರ್ ಅಡಿ ನಿರ್ಮಾಣವಾಗಿವೆ ಎಂದು ತಮ್ಮ ಕುಟುಂಬದವರಲ್ಲದ ನಟರಿಗಾಗಿಯೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ ಉದ್ದೇಶವನ್ನು ಅವರು ವಿವರಿಸಿದ್ದಾರೆ.

    ಕಥೆ ಚರ್ಚಿಸಲು ಮುಕ್ತ ಅವಕಾಶ

    ಕಥೆ ಚರ್ಚಿಸಲು ಮುಕ್ತ ಅವಕಾಶ

    ಪಿಆರ್‌ಕೆ ಪ್ರೊಡಕ್ಷನ್ಸ್‌ನ ಆಡಿಯೋ, ಮ್ಯಾನೇಜ್‌ಮೆಂಟ್ ಎಲ್ಲವೂ ನನ್ನ ಪತ್ನಿಯದ್ದೇ. ಅಶ್ವಿನಿಯೇ ನಿರ್ಮಾಪಕಿ. ಎಲ್ಲ ಜವಾಬ್ದಾರಿಗಳನ್ನೂ ಆಕೆಯೇ ನಿರ್ವಹಿಸುತ್ತಾಳೆ. ನಾನು ಸ್ಕ್ರಿಪ್ಟ್ ಆಯ್ಕೆಯಲ್ಲಿ ಇರುತ್ತೇನೆ. ಕಥೆ ಕೇಳುವಾಗ ನಿರ್ದೇಶಕರ ಜತೆಗೆ ನಾವೆಲ್ಲರೂ ಕೂರುತ್ತೇವೆ. ಈ ವಿಚಾರದಲ್ಲಿ ನಾವು ಬಹಳ ಮುಕ್ತ. ಎಲ್ಲರೂ ಬಂದು ಓದಲು ಕೂರುತ್ತಾರೆ. ಎಲ್ಲರೂ ಅಭಿಪ್ರಾಯ ಹೇಳುವುದರಿಂದ ಸಿನಿಮಾದಲ್ಲಿ ತಿದ್ದುಪಡಿ ಮಾಡಿ ಇನ್ನಷ್ಟು ಅಂದಗೊಳಿಸಲು ಸಹಾಯವಾಗುತ್ತದೆ ಎಂದು ಪುನೀತ್ ತಿಳಿಸಿದ್ದಾರೆ.

    English summary
    Puneeth Rajkumar who is producing movies with his PRK Productions had the idea to produce other actors in 2002 when he started career as hero.
    Wednesday, March 4, 2020, 18:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X