For Quick Alerts
  ALLOW NOTIFICATIONS  
  For Daily Alerts

  'ನಟ ಸಾರ್ವಭೌಮ' ಶೀರ್ಷಿಕೆ ಕೇಳಿದ ಕೂಡಲೆ ಪುನೀತ್ ಗೆ ಟೆನ್ಷನ್ ಆಗಿತ್ತಂತೆ.!

  |
  Nata Sarvabhouma Movie:ನಟಸಾರ್ವಭೌಮ ಪ್ರೆಸ್ ಮೀಟ್ ನಲ್ಲಿ ಪುನೀತ್ ರಾಜ್ ಕುಮಾರ್ ಹೇಳಿದ್ದು ಹೀಗೆ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಫೆಬ್ರವರಿ 7 ರಂದು 'ನಟ ಸಾರ್ವಭೌಮ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.

  ಹಾರರ್ ಹಾಗೂ ಸಸ್ಪೆನ್ಸ್ ಎಲಿಮೆಂಟ್ಸ್ ಹೊಂದಿರುವ 'ನಟ ಸಾರ್ವಭೌಮ' ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರಕ್ಕೆ 'ನಟ ಸಾರ್ವಭೌಮ' ಎಂಬ ಶೀರ್ಷಿಕೆ ಯಾಕೆ, ಅಣ್ಣಾವ್ರಿಗೂ ಈ ಚಿತ್ರಕ್ಕೂ ಸಂಬಂಧ ಇದ್ಯಾ.? ಎಂಬ ಪ್ರಶ್ನೆಗಳು ಕೂಡ ಸಿನಿ ಪ್ರಿಯರಲ್ಲಿ ಕಾಡುತ್ತಿವೆ.

  ಊರ್ವಶಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' 24 ಗಂಟೆಗಳ ನಿರಂತರ ಪ್ರದರ್ಶನ

  ಅಸಲಿಗೆ, 'ನಟ ಸಾರ್ವಭೌಮ' ಎಂಬ ಶೀರ್ಷಿಕೆ ಕೇಳಿದ ಕೂಡಲೇ ಪುನೀತ್ ರಾಜಕುಮಾರ್ ಗೆ ಟೆನ್ಷನ್ ಆಗಿತ್ತಂತೆ. ಬಳಿಕ ಚಿತ್ರಕ್ಕೆ ಅದೇ ಟೈಟಲ್ ಸೂಕ್ತ ಅಂತ ಪವನ್ ಒಡೆಯರ್ ಮತ್ತು ರಾಕ್ ಲೈನ್ ವೆಂಕಟೇಶ್ ಮನವೊಲಿಸಿದ ಮೇಲೆ ಪುನೀತ್ ಒಪ್ಪಿಕೊಂಡಿರಂತೆ.

  ''ರಾಜಕುಮಾರ', 'ನಟ ಸಾರ್ವಭೌಮ' ಅಂತ ಟೈಟಲ್ ಹೇಳಿದಾಗ ನನಗೆ ಟೆನ್ಷನ್ ಆಗಿತ್ತು. ಯಾಕಂದ್ರೆ, 'ನಟ ಸಾರ್ವಭೌಮ' ಅಂತ ಹೇಳಿದ ಕೂಡಲೇ ಎಲ್ಲರ ತಲೆಯಲ್ಲಿ ಬರೋದು ಅಪ್ಪಾಜಿ. ಹೀಗಾಗಿ ನನಗೆ ಆತಂಕ ಇತ್ತು. ಬಳಿಕ ಕಥೆಗೆ ಪೂರಕವಾಗಿದೆ ಅಂತ ಹೇಳಿದರು. ಮನೆಯವರು ಕೂಡ ಟೈಟಲ್ ಇಷ್ಟಪಟ್ಟರು. ಹೀಗಾಗಿ ಅದನ್ನೇ ಇಟ್ಟಿದ್ದೇವೆ'' ಎಂದಿದ್ದಾರೆ ಪುನೀತ್ ರಾಜ್ ಕುಮಾರ್.

  ನಟಸಾರ್ವಭೌಮ ನೋಡಲು ರಜೆ ಕೇಳಿ ವಿದ್ಯಾರ್ಥಿನಿ ಬರೆದ ಪತ್ರ ವೈರಲ್

  ಅಷ್ಟಕ್ಕೂ 'ನಟ ಸಾರ್ವಭೌಮ' ಎಂಬ ಶೀರ್ಷಿಕೆಗೂ ಚಿತ್ರಕಥೆಗೂ ಒಂದು ಸಂಬಂಧ ಇದೆ. ಅದೇ ಚಿತ್ರದ ಬಹುದೊಡ್ಡ ಸಸ್ಪೆನ್ಸ್.

  'ನಟ ಸಾರ್ವಭೌಮ'ದಲ್ಲಿ ಪುನೀತ್ ಬಳಸಿರೋ ಕ್ಯಾಮರಾ ಬೆಲೆ ಎಷ್ಟು ಗೊತ್ತೆ?

  ಇದಲ್ಲದೆ ಸಿನಿಮಾದಲ್ಲಿ ಮತ್ತೊಂದು ಸರ್ ಪ್ರೈಸ್ ಕೂಡ ಇದೆ. ಇಲ್ಲಿಯವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ನಟಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಅದು ಯಾವುದು ಅಂತ ಈಗಲೇ ಹೇಳ್ಬಿಟ್ರೆ ಮಜಾ ಇರಲ್ಲ. ಫೆಬ್ರವರಿ 7 ರ ತನಕ ಕಾದು 'ನಟ ಸಾರ್ವಭೌಮ' ಚಿತ್ರವನ್ನು ಕಣ್ತುಂಬಿಕೊಳ್ಳಿ.

  English summary
  Power Star Puneeth Rajkumar revealed that he was tensed after hearing 'Nata Sarvabhauma' title for the first time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X