For Quick Alerts
  ALLOW NOTIFICATIONS  
  For Daily Alerts

  ಪಿ ಆರ್ ಕೆ ಬ್ಯಾನರ್ ನಲ್ಲಿ ಪುನೀತ್ ನಟಿಸುವುದು ಯಾವಾಗ?

  By Naveen
  |
  ಪಿ ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರಂತೆ | Filmibeta Kannada

  ನಟ ಪುನೀತ್ ರಾಜ್ ಕುಮಾರ್ ತಮ್ಮ ಪಿ ಆರ್ ಕೆ ಬ್ಯಾನರ್ ನಲ್ಲಿ ಈಗಾಗಲೇ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೀಗಿರುವಾಗ, ತಮ್ಮ ಬ್ಯಾನರ್ ನಲ್ಲಿ ತಾವೇ ಯಾವಾಗ ನಟಿಸುತ್ತಾರೆ ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

  ಸದ್ಯ, ಪುನೀತ್ ರಾಜ್ ಕುಮಾರ್ 'ನಟ ಸಾರ್ವಭೌಮ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ನಂತರ ಸಂತೋಷ್ ಆನಂದ್ ರಾಮ್ ಅವರ ಪ್ರಾರಂಭ ಆಗಲಿದೆ. 'ನಟ ಸಾರ್ವಭೌಮ' ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದರೆ, ಇನ್ನೊಂದು ಸಿನಿಮಾಗೆ ಹೊಂಬಾಳೆ ಪ್ರೊಡಕ್ಷನ್ಸ್ ಹಣ ಹಾಕಲಿದೆ.

  ಮತ್ತೊಂದು ರಿಯಾಲಿಟಿ ಶೋಗೆ ಸಜ್ಜಾದ ಪುನೀತ್ ರಾಜ್ ಕುಮಾರ್ ಮತ್ತೊಂದು ರಿಯಾಲಿಟಿ ಶೋಗೆ ಸಜ್ಜಾದ ಪುನೀತ್ ರಾಜ್ ಕುಮಾರ್

  ಈ ಎರಡು ಸಿನಿಮಾಗಳು ಮುಗಿದ ಮೇಲೆ ಅಪ್ಪು ತಮ್ಮ ಪಿ ಆರ್ ಕೆ ಬ್ಯಾನರ್ ನಲ್ಲಿ ತಾವೇ ನಟಿಸಲಿದ್ದಾರೆ. ಪುನೀತ್ ನಿರ್ಮಾಣ ಹಾಗೂ ನಟನೆಯಲ್ಲಿ ಬರುತ್ತಿರುವ ಈ ಸಿನಿಮಾಗೆ ನಿರ್ದೇಶನ ಯಾರು ಮಾಡುತ್ತಾರೆ ಎನ್ನುವ ಕುತೂಹಲ ಇದೆ.

  ಸದ್ಯಕ್ಕೆ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ಎರಡು ಚಿತ್ರಗಳು ನಿರ್ಮಾಣ ಆಗುತ್ತಿವೆ. 'ಕವಲುದಾರಿ' ಟೀಸರ್ ಇತ್ತೀಚಿಗಷ್ಟೆ ಅಮೇರಿಕಾದಲ್ಲಿ ರಿಲೀಸ್ ಆಗಿದೆ. ಅಪ್ಪು ಬ್ಯಾನರ್ ನ ಎರಡನೇ ಚಿತ್ರ 'ಮಯಾ ಬಜಾರ್' ಕೂಡ ಶುರು ಆಗಿದೆ.

  ಈ ಎರಡು ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಈ ಚಿತ್ರದ ಬಳಿಕ ಮೂರನೇ ಸಿನಿಮಾವನ್ನು ಕೂಡ ಹೊಸಬರಿಗೆ ಮಾಡಲಿದ್ದು, ನಾಲ್ಕನೇ ಚಿತ್ರದಲ್ಲಿ ಪುನೀತ್ ಅವರೇ ನಟಿಸುತ್ತಾರೆ.

  English summary
  Kannada actor Puneeth Rajkumar will act under his own PRK production house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X