ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು 'ಯುವರತ್ನ'ದ ಪುನೀತ್ ರಾಜ್ ಕುಮಾರ್ ಹೊಸ ಸ್ಟಿಲ್
ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ. ಯುವರತ್ನದ ಡೈಲಾಗ್ ಟೀಸರ್ ಮತ್ತು ಅದರಲ್ಲಿನ ಪುನೀತ್ ಗೆಟಪ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
Recommended Video
ಯೂಟ್ಯೂಬ್‌ನಲ್ಲಿ ಡೈಲಾಗ್ ಟೀಸರ್ ಹಲವು ದಿನ ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು. ಈಗ ಯುವರತ್ನ ಚಿತ್ರದ ಪುನೀತ್ ಅವರ ಹೊಸ ಗೆಟಪ್‌ನ ಚಿತ್ರವೊಂದು ರಿವೀಲ್ ಆಗಿದ್ದು, ಅಭಿಮಾನಿಗಳು ಪುನೀತ್ ಲುಕ್‌ಗೆ ಫಿದಾ ಆಗಿದ್ದಾರೆ. 'ಯುವರತ್ನ ಮ್ಯಾಸಿ ಸ್ಟಿಲ್' ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.
'ಅಪ್ಪು' ಚಿತ್ರದ ನಂತರ ಪುನೀತ್ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಚಿತ್ರದ ವಿಭಿನ್ನ ಪೋಸ್ಟರ್‌ಗಳು ಚಿತ್ರದ ಕಥೆಯಲ್ಲಿ ಹಲವು ಟ್ವಿಸ್ಟ್‌ಗಳನ್ನು ನೀಡುವ ಸುಳಿವು ನೀಡಿದೆ.

ಯುವರತ್ನದ ಹೊಸ ಸ್ಟಿಲ್
ಪುನೀತ್ ರಾಜ್ ಕುಮಾರ್ ಅವರ ಪ್ರತಿ ಸಿನಿಮಾಗಳಲ್ಲಿಯೂ ಅಭಿಮಾನಿಗಳನ್ನು ಸೆಳೆಯುವಂತಹ ವಿಭಿನ್ನ ಬಗೆಯ ಪೋಸ್ಟರ್ ಸ್ಟಿಲ್‌ಗಳಿರುತ್ತವೆ. ಈ ಸ್ಟಿಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು ಸಹ ಸಾಮಾನ್ಯ. ಕನ್ನಡ ಚಿತ್ರರಂಗದಲ್ಲಿ ಜೂಕ್ ಬಾಕ್ಸ್‌ನಲ್ಲಿ ನಾಲ್ಕು ಬಾರಿ ಒಂದು ಮಿಲಿಯನ್ ವ್ಯೂವ್ಸ್ ಹೊಂದಿರುವ ಏಕೈಕ ನಟ ಪುನೀತ್ ಎನ್ನುವುದು ಅವರ ಫ್ಯಾನ್ಸ್ ಹೇಳಿಕೆ. ಅದರ ಸಾಲಿಗೆ 'ಯುವರತ್ನ'ದ ಈ ಹೊಸ ಲುಕ್ ಕೂಡ ಸೇರಬೇಕು ಎನ್ನುವುದು ಅವರ ಬಯಕೆ.

ವಿದೇಶದಲ್ಲಿ ಚಿತ್ರೀಕರಣ ರದ್ದು
ರಾಜಕುಮಾರ ಚಿತ್ರ 3.8 ಮಿಲಿಯನ್, ನಟ ಸಾರ್ವಭೌಮ 1.6 ಮಿಲಿಯನ್, ಅಂಜನಿಪುತ್ರ 1.3 ಮಿಲಿಯನ್ ಮತ್ತು ಪರಮಾತ್ಮ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಯುವರತ್ನ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ವಿದೇಶದಲ್ಲಿ ಈ ಹಾಡುಗಳ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ.

ಎರಡು ಹಾಡುಗಳ ಚಿತ್ರೀಕರಣ
ಎಲ್ಲವೂ ಚೆನ್ನಾಗಿದ್ದರೆ ಈ ವೇಳೆಗೆ ಚಿತ್ರದ ಬಾಕಿ ಉಳಿದ ಹಾಡುಗಳ ಚಿತ್ರೀಕರಣ, ಡಬ್ಬಿಂಗ್ ಎಲ್ಲ ಮುಗಿದು ಮೊದಲ ಕಾಪಿ ಸಿದ್ಧವಾಗಬೇಕಿತ್ತು. ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ಚಿತ್ರೀಕರಣ ಶುರುವಾಗಲಿದೆ. ಹಾಡುಗಳನ್ನು ಭಾರತದಲ್ಲಿಯೇ ಚಿತ್ರೀಕರಿಸಲು ಉದ್ದೇಶಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಬಿಡುಗಡೆ?
ಅಭಿಮಾನಿಗಳನ್ನು ಹೆಚ್ಚು ಸಮಯ ಕಾಯಿಸಬಾರದು ಎನ್ನುವುದು ಚಿತ್ರತಂಡದ ಉದ್ದೇಶ. 'ಯುವರತ್ನ'ದ ಬೆನ್ನಲ್ಲೇ ಪುನೀತ್ ಅವರ 'ಜೇಮ್ಸ್' ಚಿತ್ರದ ಚಿತ್ರೀಕರಣ ನಡೆಯಬೇಕಿದೆ. ಹಾಗೆಯೇ ಪುನೀತ್ ಅವರ ಹೊಸ ಸಿನಿಮಾಗಳು ಶುರುವಾಗಬೇಕಿದೆ. ಹೀಗಾಗಿ ಶೀಘ್ರದಲ್ಲಿ ಶೂಟಿಂಗ್ ಮುಗಿದಿ ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಮಾಡಬೇಕು ಎನ್ನುವುದು ನಿರ್ಮಾಪಕ ವಿಜಯ್ ಕಿರಂಗದೂರ್ ಅವರ ಬಯಕೆ.


Click it and Unblock the Notifications











