For Quick Alerts
  ALLOW NOTIFICATIONS  
  For Daily Alerts

  ಅದ್ಧೂರಿಯಾಗಿ ಆರಂಭವಾಯ್ತು ಪುನೀತ್ 'ಯುವರತ್ನ'

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಜೋಡಿಯ ಹೊಸ ಸಿನಿಮಾದ ಮುಹೂರ್ತ ಇಂದು (ಡಿಸೆಂಬರ್ 12) ನೆರವೇರಿದೆ. ಬೆಂಗಳೂರಿನ ಶ್ರೀ ಪಂಚಮುಖಿ ಗಣಪತಿ ಸನ್ನಿಧಿಯಲ್ಲಿ ಯುವರತ್ನ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ.

  ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಜನವರಿಯಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್, ಸಂತೋಷ್ ಆನಂದ್ ರಾಮ್ ಮತ್ತು ಹೊಂಬಾಳೆ ಬ್ಯಾನರ್ ನಲ್ಲಿ 'ರಾಜಕುಮಾರ' ಸಿನಿಮಾ ಬಂದಿತ್ತು.

  ಮೆಗಾ ಸಿನಿಮಾದ ಟೈಟಲ್ ಅನಾವರಣ: 'ಯುವರತ್ನ'ನಾದ ಪವರ್ ಸ್ಟಾರ್ ಮೆಗಾ ಸಿನಿಮಾದ ಟೈಟಲ್ ಅನಾವರಣ: 'ಯುವರತ್ನ'ನಾದ ಪವರ್ ಸ್ಟಾರ್

  ಅಂದ್ಹಾಗೆ, ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 16 ವರ್ಷಗಳ ಹಿಂದೆ ತೆರೆಕಂಡಿದ್ದ 'ಅಭಿ' ಚಿತ್ರದ ಬಳಿಕ ಪುನೀತ್ ಮತ್ತೆ ಕಾಲೇಜ್ ಸ್ಟೂಡೆಂಟ್ ಆಗಿದ್ದಾರೆ.

  ಸದ್ಯಕ್ಕೆ ನಾಯಕಿ ಫೈನಲ್ ಆಗಿಲ್ಲ. ಸೌತ್ ಇಂಡಿಯಾದ ಸ್ಟಾರ್ ನಟಿಯರೊಬ್ಬರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಆದ್ರೆ, ಯಾರು ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

  ಮತ್ತೆ ಕಾಲೇಜ್ ಹುಡುಗನಾದ ಅಪ್ಪು : ಪುನೀತ್ ಗೆ ಒಳಗೊಳಗೆ ಭಯವಂತೆ! ಮತ್ತೆ ಕಾಲೇಜ್ ಹುಡುಗನಾದ ಅಪ್ಪು : ಪುನೀತ್ ಗೆ ಒಳಗೊಳಗೆ ಭಯವಂತೆ!

  ಮತ್ತೊಂದೆಡೆ ಪವನ್ ಒಡೆಯರ್ ನಿರ್ದೇಶನದ 'ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಿದ್ದಾರೆ. ಬಹುತೇಕ ಸಿನಿಮಾ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ.

  English summary
  Kannada actor Puneeth rajkumar starrer yuvarathna movie launched today. Shooting starts from january. Santhosh Anandram and Hombaale Films coming together for second time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X