»   » ತೆಲುಗು 'ನಿನ್ನಿಂದಲೇ' ರೀಮೇಕ್ ಗೆ ಮಹೇಶ್ ಬಾಬು

ತೆಲುಗು 'ನಿನ್ನಿಂದಲೇ' ರೀಮೇಕ್ ಗೆ ಮಹೇಶ್ ಬಾಬು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯ 'ನಿನ್ನಿಂದಲೇ' ಚಿತ್ರಕ್ಕೆ ಈಗಾಗಲೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಭರ್ಜರಿ ರೇಟ್ ಸಿಕ್ಕಿದೆ. ಖಾಸಗಿ ವಾಹಿನಿಯೊಂದು ಚಿತ್ರದ ಪ್ರಸಾರ ಹಕ್ಕುಗಳನ್ನು ರು.6.5 ಕೋಟಿಗೆ ಖರೀದಿಸಿದೆ. ಈಗ ಇನ್ನೊಂದು ಸುದ್ದಿಯೂ ಹೊರಬಿದ್ದಿದೆ.

ಅದೇನೆಂದರೆ ಬಿಡುಗಡೆ ಮುನ್ನವೇ ಚಿತ್ರ ಟಾಲಿವುಡ್ ಚಿತ್ರೋದ್ಯಮದ ಗಮನಸೆಳೆದಿರುವುದು. ಈ ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ತೆಲುಗಿನಲ್ಲಿ ಪ್ರಿನ್ಸ್ ಎಂದೇ ಹೆಸರಾಗಿರುವ ನಟ ಮಹೇಶ್ ಬಾಬುಗೆ ಚಿತ್ರದ ಕಥೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ. [ಪುನೀತ್ 'ನಿನ್ನಿಂದಲೇ' ಟಿವಿ ರೈಟ್ಸ್ ಗೆ ಭರ್ಜರಿ ರೇಟ್]


'ನಿನ್ನಿಂದಲೇ' ಚಿತ್ರದ ಆಡಿಯೋ ಬಿಡುಗಡೆಗೆ ಬರಬೇಕಿದ್ದ ಮಹೇಶ್ ಬಾಬು ಕಾರಣಾಂತರಗಳಿಂದ ಬಂದಿರಲಿಲ್ಲ. ಆದರೆ ಚಿತ್ರತಂಡಕ್ಕೆ ತಮ್ಮ ಕಡೆಯಿಂದ ಶುಭಹಾರೈಕೆಗಳನ್ನು ತಿಳಿಸಿದ್ದರು. ಪುನೀತ್ ರಾಜ್ ಕುಮಾರ್, ಸಂಗೀತ ನಿರ್ದೇಶಕ ಮಣಿಶರ್ಮ ಹಾಗೂ ಚಿತ್ರತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದರು.

"ಕನ್ನಡ ಜನರಿಗೆ ನಮಸ್ಕಾರ. ಪುನೀತ್ ಅವರು ನನಗೆ ಬ್ಲ್ಯಾಕ್ ಬಸ್ಟರ್ 'ಪೋಕಿರಿ' ಚಿತ್ರ ಮಾಡುತ್ತಿದ್ದ ಸಮಯದಿಂದಲೂ ಚೆನ್ನಾಗಿ ಗೊತ್ತು. ಅವರೊಬ್ಬ ಬಹುಮುಖ ಪ್ರತಿಭೆ. ಇತ್ತೀಚೆಗೆ ರಾಜ್ ಅವರ ಮನೆಗೆ ಭೇಟಿ ನೀಡಿದಾಗ ಅವರ ಆತಿಥ್ಯಕ್ಕೆ ಮನಸೋತಿದ್ದೇನೆ. ವರನಟ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮನವರ ಸರಳತೆಗೆ ತಾನು ಬೆರಗಾಗಿದ್ದೇನೆ" ಎಂದಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ಜಯಂತ್ ಸಿ ಪರಾಂಜೆ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಫ್ಯಾಮಿಲಿ ಆಡಿಯನ್ಸ್ ಗೆ ಏನು ಬೇಕೋ ಅದೆಲ್ಲವೂ ಇದೆ. ಹಾಗಂತ ಮಾಸ್ ಆಡಿಯನ್ಸನ್ನೂ ಕಡೆಗಣಿಸಿಲ್ಲ. ತೆಲುಗಿಗೆ ರೀಮೇಕ್ ಆಗಬಹುದಾದಂತಹ ಎಲ್ಲಾ ಲಕ್ಷಣಗಳೂ ನಿನ್ನಿಂದಲೇ ಚಿತ್ರಕ್ಕಿರುವುದು ಮೇಲ್ಮೋಟಕ್ಕೆ ಗೋಚರಿಸುತ್ತವೆ. (ಏಜೆನ್ಸೀಸ್)

English summary
If sources are to be believed Tollywood 'Prince' Mahesh Babu is mighty impressed with the storyline of the Puneeth Rajkumar starer upcoming Kannada film, Ninnindale. He is keen on acting in the Telugu remake of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada