»   » ಪುನೀತ್ 'ರಣವಿಕ್ರಮ'ನಿಗೆ ಸಿಕ್ಕಿದಳು ಮಿಸ್ಸಿಂಗ್ ನಟಿ

ಪುನೀತ್ 'ರಣವಿಕ್ರಮ'ನಿಗೆ ಸಿಕ್ಕಿದಳು ಮಿಸ್ಸಿಂಗ್ ನಟಿ

By: ರಸಿಕ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪವರ್ನ್ ಒಡೆಯರ್ ಸಂಗಮದಲ್ಲಿ ಮೂಡಿಬರುತ್ತಿರುವ ಭಾರಿ ಬಜೆಟ್ ಚಿತ್ರ 'ಧೀರ ರಣವಿಕ್ರಮ'. ಈಗ ಈ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ತೆಲುಗು, ತಮಿಳಿನಲ್ಲಿ ಬಿಜಿಯಾಗಿರುವ ಅಂಜಲಿ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಈಗಾಗಲೆ ರಚಿತಾ ರಾಮ್ ಆಯ್ಕೆಯಾಗಿದ್ದು ಇನ್ನೊಬ್ಬ ಬೆಡಗಿ ಯಾರು ಎಂಬ ಕುತೂಹಲಕ್ಕೆ ಅಂಜಲಿ ಆಯ್ಕೆಯಾಗುವ ಮೂಲಕ ತೆರೆಬಿದ್ದಿದೆ. ಈ ಹಿಂದೆ ಅಂಜಲಿ ಅವರು ಪ್ರೇಮ್ ಅವರ ಹೊಂಗನಸು ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಮತ್ತೆ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ['ಮಿಸ್ಸಿಂಗ್ ನಟಿ' ಅಂಜಲಿ ಸುತ್ತ ಮತ್ತೊಂದು ವಿವಾದ]


ಈ ಚಿತ್ರಕ್ಕೆ ಖಳನಟನಾಗಿ ಬಾಲಿವುಡ್ ನಟ ವಿಕ್ರಮ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂಬೈ ಗಾಡ್ ಫಾದರ್, ಆತ್ಮ, ಟ್ರಂಪ್ ಕಾರ್ಡ್ ಮುಂತಾದ ಚಿತ್ರಗಳಲ್ಲಿ ವಿಕ್ರಮ್ ಅಭಿನಯಿಸಿದ್ದಾರೆ. ಪುನೀತ್ ಇಲ್ಲಿವರೆಗೂ ಮಾಡಿರದ ಒಂದು ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಪವರ್ ಸ್ಟಾರ್ 'ರಣ ವಿಕ್ರಮ' ಸಿನಿಮಾದಲ್ಲಿ ಪವರ್ ಫುಲ್ ಪೊಲೀಸ್ ಆಫೀಸರ್.

ಬಾಡಿ ಫಿಟ್ ಮಾಡ್ಕೊಂಡು ಖದರ್ ಖಾಕಿ ಡ್ರೆಸ್ ಹಾಕಿಕೊಂಡ್ರೆ ಎಂಥವನ ನೋಟದಲ್ಲೂ ಗತ್ತು ಬಂದು ಬಿಡುತ್ತೆ. ಇನ್ನು ಹೀರೋ ಅದ್ರಲ್ಲೂ ಆಕ್ಷನ್ ಹೀರೋಗಳಾದ್ರೆ ಕೇಳ್ಬೇಕಾ. ಫೈಟ್ಸ್, ಚೇಸಿಂಗ್ ವಿಷಯದಲ್ಲೂ ಪೊಲೀಸ್ ಪಾತ್ರ ಕೊಡೋ ಥ್ರಿಲ್ಲನ್ನ ಮತ್ಯಾವ ಪಾತ್ರಾನೂ ಕೊಡೋದಿಲ್ಲ. ಇಷ್ಟೂ ಅಂಶಗಳನ್ನು ಚಿತ್ರದಲ್ಲಿ ನಿರೀಕ್ಷಿಸಬಹುದು. (ಏಜೆನ್ಸೀಸ್)

English summary
Telugu, Tamil actress Anjali selected as lady lead for Power Star Puneeth Rajkumar's upcoming movie 'Rana Vikrama'. Puneeth plays a tough police officer in the movie directed by Pawan Wadyar. It is to be produced by Jayanna. 
Please Wait while comments are loading...