For Quick Alerts
  ALLOW NOTIFICATIONS  
  For Daily Alerts

  ಯುವ ದಸರಾದಲ್ಲಿ 'ಅಪ್ಪು ನಮನ': ಮೈಸೂರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವಣ್ಣ!

  |

  ನಾಡ ಹಬ್ಬಕ್ಕೆ ಮೈಸೂರು ಸಿಂಗಾರಗೊಂಡು ನಿಂತಿದೆ. ಸೆಪ್ಟೆಂಬರ್ 27ರಿಂದ ಮೈಸೂರಿನಲ್ಲಿ ಯುವ ದಸರಾಗೆ ಚಾಲನೆ ಸಿಗಲಿದೆ. ಇಲ್ಲಿಂದ ಪ್ರತಿದಿನವೂ ಸಾಂಸ್ಕೃತಿ ಕಾರ್ಯಕ್ರಮಗಳು ಆರಂಭ ಆಗುತ್ತವೆ. ಇಡೀ ಮೈಸೂರು ಜಗಮಗಿಸುತ್ತೆ.

  ಇನ್ನೆರಡು ದಿನಗಳಲ್ಲಿ ಆರಂಭ ಆಗುವ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗಲು ಮೈಸೂರಿನ ಜನರು ಸಿದ್ಧರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಮೈಸೂರು ದಸರಾ ಅದ್ಧೂರಿಯಾಗಿ ನಡೆಯಲಿದೆ. ಅದರಲ್ಲೂ ಯುವ ದಸರಾವನ್ನು ಈ ಬಾರಿ ವಿಶೇಷವಾಗಿ ಆಚರಿಸಲು ಮೈಸೂರು ಸಿದ್ಧವಾಗಿ ನಿಂತಿದೆ.

  Exclusive: ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ'ಗೆ ಕಾಂಪಿಟೇಷನ್: ಯಾರಿಗೆ ಸೇರುತ್ತೆ ಹಕ್ಕು?Exclusive: ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ'ಗೆ ಕಾಂಪಿಟೇಷನ್: ಯಾರಿಗೆ ಸೇರುತ್ತೆ ಹಕ್ಕು?

  ಮೈಸೂರಿನಲ್ಲಿ ಕಲರ್‌ಫುಲ್ ಕಲರವ. ದಸರಾ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಇದೇ ವೇಳೆ 'ಯುವ ದಸರಾ' ಕೂಡ ಆರಂಭ ಆಗುತ್ತಿದೆ. ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳೂ ಕೂಡ ಜೊರಾಗಿಯೇ ನಡೆಯುತ್ತಿದೆ. ಯುವ ದಸರಾದಲ್ಲಿ ಒಂದು ದಿನವನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮೀಸಲಿಡಲಾಗಿದೆ.

  ಪುನೀತ್ ನಮನ

  ಪುನೀತ್ ನಮನ

  ಸೆಪ್ಟೆಂಬರ್ 28ರಂದು 'ಯುವ ದಸರಾ' ಆರಂಭವಾದ ಎರಡನೇ ದಿನ ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಲಿದ್ದಾರೆ. ಈ ಹಿಂದೆ ಪ್ಲ್ಯಾನ್ ಮಾಡಿದಂತೆ ಎರಡನೇ ದಿನವೇ ಅಪ್ಪುಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿದ್ದು, ಅಣ್ಣಾವ್ರ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆ. ದಿಗ್ಗಜರೆಲ್ಲರೂ ವೇದಿಕೆ ಮೇಲೆ ಪ್ರತ್ಯಕ್ಷ ಆಗಲಿದ್ದಾರೆ.

  ಅಶ್ವಿನಿ ಪುನೀತ್ ರಾಜ್‌ಕುಮಾರ್ ಉಪಸ್ಥಿತಿ

  ಅಶ್ವಿನಿ ಪುನೀತ್ ರಾಜ್‌ಕುಮಾರ್ ಉಪಸ್ಥಿತಿ

  ಯುವ ದಸರಾದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಮೀಸಲಿಟ್ಟಿರೋದ್ರಿಂದ ಅಣ್ಣಾವ್ರ ಕುಟುಂಬ ಮೈಸೂರಿಗೆ ಆಗಮಿಸಲಿದೆ. ಅದರಲ್ಲೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಇದೇ ವೇದಿಕೆ ಮೇಲೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಭಾಗವಹಿಸಲಿದ್ದಾರೆ. ಅಣ್ಣಾವ್ರ ಇಡೀ ಕುಟುಂಬವೇ ವೇದಿಕೆ ಮೇಲಿರುತ್ತೆ.

  ಅಪ್ಪುಗೆ ಸಂಗೀತ ನಮನ

  ಅಪ್ಪುಗೆ ಸಂಗೀತ ನಮನ

  ಸೆಪ್ಟೆಂಬರ್ 28ರಂದು ಯುವ ದಸರಾ ವೇದಿಕೆ ಮೇಲೆ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ. ಅಪ್ಪುಗೆ ಸಂಗೀತ ನಮನ ಕೂಡ ನಡೆಯಲಿದ್ದು, ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕ ವಿಜಯ್ ಪ್ರಕಾಶ್ ಹಾಗೂ ಬಾಲಿವುಡ್ ಗಾಯಕ ಕುನಾಲ್ ಗಾಂಜವಾಲ ಹಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅದೇ ದಿನ ಅನುಶ್ರೀ ನಿರೂಪಣೆ ಮಾಡಲಿದ್ದಾರೆ.

  ಮಂಗ್ಲಿ ರಘು ದೀಕ್ಷಿತ್

  ಮಂಗ್ಲಿ ರಘು ದೀಕ್ಷಿತ್

  ಸೆಪ್ಟೆಂಬರ್ 27ರಂದು ಯುವ ದಸರಾಗೆ ಅದ್ಧೂರಿ ಚಾಲನೆ ನೀಡಲಾಗುತ್ತಿದೆ. ಆರಂಭದ ದಿನದಂದು ಯುವ ದಸರಾ ವೇದಿಕೆ ಮೇಲೆ ದಿಗ್ಗಜರು ಪರ್ಫಾಮೆನ್ಸ್ ನೀಡಲಿದ್ದಾರೆ. ತೆಲುಗಿ ಸ್ಟಾರ್ ಗಾಯಕಿ ಮಂಗ್ಲಿ ಹಾಗೂ ಕನ್ನಡದ ಗಾಯಕ ಕಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೈಸೂರು ಜನರನ್ನು ರಂಜಿಸುತ್ತಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ದಸರಾ ಮುಗಿಯುವವರೆಗೂ ಮೈಸೂರಿನ ಜನರಿಗೆ ಅದ್ಧೂರಿ ಮನರಂಜನೆ ಸಿಗೋದು ಗ್ಯಾರಂಟಿ.

  English summary
  Puneeth Tribute In Yuva Dasara: Ashwini Puneeth Rajkumar, Shivarajkumar, Raghaveendra Rajkumar, Vinay And Yuva Rajkumar Will Be The Guest, Know More
  Sunday, September 25, 2022, 16:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X