»   » ಡ್ರಗ್ಸ್ ಮಾಫಿಯಾದಲ್ಲಿ ತಂದೆ ಹೆಸರು: ಕಿಡಿಕಾರಿದ ಪುರಿ ಜಗನ್ನಾಥ್ ಪುತ್ರಿ ಪವಿತ್ರ

ಡ್ರಗ್ಸ್ ಮಾಫಿಯಾದಲ್ಲಿ ತಂದೆ ಹೆಸರು: ಕಿಡಿಕಾರಿದ ಪುರಿ ಜಗನ್ನಾಥ್ ಪುತ್ರಿ ಪವಿತ್ರ

Posted By:
Subscribe to Filmibeat Kannada

ಟಾಲಿವುಡ್ ನ ಅನೇಕ ತಾರೆಯರು 'ಡ್ರಗ್ಸ್ ಮಾಫಿಯಾ'ದಲ್ಲಿ ತೊಡಗಿಕೊಂಡಿರುವ ಬಗ್ಗೆ ಸ್ಫೋಟಕ ಮಾಹಿತಿಯೊಂದು ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಇದಕ್ಕೆ ಸಂಬಂಧಿಸಿದಂತೆ ತೆಲಂಗಾಣ ಅಬಕಾರಿ ಇಲಾಖೆ 15 ಸೆಲೆಬ್ರಿಟಿಗಳಿಗೆ ನೋಟೀಸ್ ಕೂಡ ಕಳುಹಿಸಿತ್ತು.

ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹೆಸರೂ 'ಡ್ರಗ್ಸ್ ಮಾಫಿಯಾ'ದಲ್ಲಿ ಕೇಳಿ ಬಂದಿದೆ. ಇದರಿಂದ ಪುರಿ ಜಗನ್ನಾಥ್ ಪುತ್ರಿ ಅಸಮಾಧಾನಗೊಂಡಿದ್ದಾರೆ. ಸುಖಾಸುಮ್ಮನೆ ತಮ್ಮ ತಂದೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಪವಿತ್ರ ಪುರಿ ಕಿಡಿಕಾರಿದ್ದಾರೆ. ಮುಂದೆ ಓದಿ...

ಪವಿತ್ರ ಪುರಿ ಏನಂತಾರೆ.?

''ನನ್ನ ತಂದೆ ಸೆಲೆಬ್ರಿಟಿ ಆಗಿರುವ ಕಾರಣಕ್ಕೆ ಬೇಕಾಬಿಟ್ಟಿ ರೂಮರ್ಸ್ ಗಳನ್ನ ಹಬ್ಬಿಸುವುದು ಸರಿಯಲ್ಲ. ನನ್ನ ತಂದೆ ಕುಟುಂಬಸ್ಥ. ಅವರೆಡೆಗೆ ಬೆಟ್ಟು ಮಾಡಿ ತೋರಿಸುವ ಮುನ್ನ ಕುಟುಂಬದ ಬಗ್ಗೆ ಯೋಚಿಸಿ, ಇಂಡಸ್ಟ್ರಿಯಲ್ಲಿನ ಅವರ ಘನತೆ ಬಗ್ಗೆ ಯೋಚಿಸಿ'' ಎಂದಿದ್ದಾರೆ ಪುರಿ ಜಗನ್ನಾಥ್ ಪುತ್ರಿ ಪವಿತ್ರ ಪುರಿ.

ಡ್ರಗ್ಸ್ ಚಟದಿಂದ ವೃತ್ತಿ ಹಾಳು ಮಾಡಿಕೊಳ್ಳುವುದಿಲ್ಲ

''ಸದಾ ತಮ್ಮ ಗುರಿ ಹಿಂದೆ ಓಡುತ್ತಿರುತ್ತಾರೆ ನನ್ನ ತಂದೆ. ನಿರ್ದೇಶಕರಾಗಿರುವುದರಿಂದ, ಅವರ ಮೆದುಳೇ ಅವರಿಗೆ ಬಂಡವಾಳ. ಹೀಗಾಗಿ, ಡ್ರಗ್ಸ್ ಚಟದಿಂದ ಅವರೆಂದೂ ತಮ್ಮ ವೃತ್ತಿಯನ್ನ ಹಾಳು ಮಾಡಿಕೊಳ್ಳಲು ಇಚ್ಛಿಸುವವರಲ್ಲ'' - ಪವಿತ್ರ ಪುರಿ, ಪುರಿ ಜಗನ್ನಾಥ್ ಪುತ್ರಿ

ಪುರಿ ಜಗನ್ನಾಥ್ ಹೇಳುವುದೇನು.?

'ಡ್ರಗ್ಸ್ ಮಾಫಿಯಾ'ದಲ್ಲಿ ತಮ್ಮ ಹೆಸರು ಕೇಳಿಬಂದಿದ್ದರೂ, ಅದಕ್ಕೆ ಪುರಿ ಜಗನ್ನಾಥ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ....

''ನಾನು ಇಲ್ಲಿಯವರೆಗೂ ಯಾವುದರ ಬಗ್ಗೆಯೂ, ಯಾರ ಬಗ್ಗೆಯೂ ಹೇಳಿಕೆ ನೀಡಿಲ್ಲ. ನನ್ನ ಚಿತ್ರ 'ಪೈಸಾ ವಸೂಲ್' ಕಂಪ್ಲೀಟ್ ಮಾಡುವುದರಲ್ಲಿ ಬಿಜಿಯಾಗಿದ್ದೇನೆ'' ಎಂದಷ್ಟೇ ತಮ್ಮ ಫೇಸ್ ಬುಕ್ ಪುಟದಲ್ಲಿ ಪುರಿ ಜಗನ್ನಾಥ್ ಬರೆದುಕೊಂಡಿದ್ದಾರೆ.

English summary
Puri Jagannadh's daughter Pavitra Puri speaks up about Tollywood drug mafia.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada