»   » ಹೀಗೂ ಉಂಟೇ?.. ಮಾನ್ವಿತಾಗೆ ಟಿಶ್ಯೂ ಪೇಪರ್ ನಲ್ಲಿ ಸಿನಿಮಾ ಒಪ್ಪಂದ

ಹೀಗೂ ಉಂಟೇ?.. ಮಾನ್ವಿತಾಗೆ ಟಿಶ್ಯೂ ಪೇಪರ್ ನಲ್ಲಿ ಸಿನಿಮಾ ಒಪ್ಪಂದ

Posted By:
Subscribe to Filmibeat Kannada

ಸಿನಿಮಾಗೆ ಯಾರೇ ಕಲಾವಿದರನ್ನು ಅಭಿನಯಕ್ಕೆ ಒಪ್ಪಿಸಿದರು, ಆಯ್ಕೆ ಮಾಡಿಕೊಂಡರು ಬಾಂಡ್ ಪೇಪರ್ ನಲ್ಲಿ ಅಗ್ರಿಮೆಂಟ್ ಮಾಡಿಕೊಳ್ಳಲಾಗುತ್ತದೆ. ಆದರೆ ಟಿಶ್ಯೂ ಪೇಪರ್ ಮೇಲೆ ಸಿನಿಮಾ ಒಪ್ಪಂದ ಮಾಡಿಕೊಳ್ಳೋದ ಎಲ್ಲಾದ್ರು ನೋಡಿದ್ದೀರಾ? ಚಾನ್ಸೇ ಇಲ್ಲ ಬಿಡಿ. ಆದ್ರೆ ಈಗ ಸ್ಯಾಂಡಲ್ ವುಡ್ ನಲ್ಲಿ ಅಂತಹ ಒಪ್ಪಂದವೊಂದು ನಡೆದಿದೆ.

ಕನ್ನಡ ಸಿನಿಮಾ ನಿರ್ಮಾಪಕರೊಬ್ಬರು 'ಕೆಂಡಸಂಪಿಗೆ' ಪೋರಿಗೆ ಟಿಶ್ಯೂ ಪೇಪರ್ ಮೇಲೆ ಸಿನಿಮಾ ಒಪ್ಪಂದ ಮಾಟಿಕೊಟ್ಟಿದ್ದು, ಅದರ ಡೀಟೇಲ್ಸ್ ಇಲ್ಲಿದೆ ನೋಡಿ..

ಯಾರು ಆ ನಿರ್ಮಾಪಕರು?

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಟಿಶ್ಯೂ ಪೇಪರ್ ಮೇಲೆ ಸಿನಿಮಾ ಒಪ್ಪಂದ ಮಾಡಿಕೊಟ್ಟಿರುವುದು.

ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಂದಿನ ಸಿನಿಮಾಗೆ ಮಾನ್ವಿತಾ ಆಯ್ಕೆ?

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಂತರ ಹಲವು ವಿಶೇಷ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ತಮ್ಮ ಮುಂದಿನ ಸಿನಿಮಾಗೆ ಮಾನ್ವಿತಾ ಹರೀಶ್ ರನ್ನು ಆಯ್ಕೆ ಮಾಡಿದ್ದಾರೆ. ಮಾನ್ವಿತಾ ಹರೀಶ್ ಜೊತೆ ಸಿನಿಮಾ ಮಾಡುವುದು ಅವರ ಬಹುದಿನಗಳ ಬೇಡಿಕೆಯು ಆಗಿತ್ತಂತೆ.

ಕಥೆ ಕೇಳಿದ ಮಾನ್ವಿತಾ

ಇತ್ತೀಚೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಕಾಫಿ ಶಾಪ್ ಒಂದರಲ್ಲಿ ಮಾನ್ವಿತಾ'ಗೆ ಕಥೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದರಂತೆ. ಕಥೆ ಕೇಳಿ ಒಪ್ಪಿಕೊಂಡ ಮಾನ್ವಿತಾಗೆ, ಪುಷ್ಕರ್ ಟಿಶ್ಯೂ ಪೇಪರ್ ನಲ್ಲಿ ಸಿನಿಮಾ ಒಪ್ಪಂದ ಮಾಡಿಕೊಟ್ಟಿದ್ದಾರೆ.

ಟಿಶ್ಯೂ ಪೇಪರ್ ನಲ್ಲಿ ಬರೆದಿದ್ದೇನು?

"ನಾನು, ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳುವುದೇನೆಂದರೆ, ಮಾನ್ವಿತಾ ಅವರು ನನ್ನ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ" ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಟಿಶ್ಯೂ ಪೇಪರ್ ಮೇಲೆ ಬರೆದು ಸಹಿ ಮಾಡಿದ್ದಾರೆ.

ಮಾನ್ವಿತಾಗೆ ಟೋಕನ್ ಅಡ್ವಾನ್ಸ್ ಎಷ್ಟು ಗೊತ್ತಾ?

ಮಾನ್ವಿತಾ ಹರೀಶ್ ತಮ್ಮ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬುದನ್ನು ಟಿಶ್ಯೂ ಪೇಪರ್ ಮೇಲೆ ಅಗ್ರಿಮೆಂಟ್ ಮಾಡಿಕೊಟ್ಟಿರುವ ಪುಷ್ಕರ್, ಟೋಕನ್ ಅಡ್ವಾನ್ಸ್ ಆಗಿ 10 ರೂಪಾಯಿಗಳನ್ನು ನೀಡಿದ್ದಾರೆ.

ಯಾವುದು ಆ ಸಿನಿಮಾ?

ಮೂಲಗಳ ಪ್ರಕಾರ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ, ಮಾನ್ವಿತಾ ನಟಿಸಲಿರುವ ಚಿತ್ರ ಜುಲೈ ವೇಳೆಗೆ ಸೆಟ್ಟೇರಲಿದೆಯಂತೆ. ಆದರೆ ಚಿತ್ರ ಹೆಸರಿನ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

English summary
Kannada Cinema Producer Pushkara Mallikarjunaiah announces his next cinema with Manvitha Harish.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada