For Quick Alerts
  ALLOW NOTIFICATIONS  
  For Daily Alerts

  ರಜನಿಗೆ SMS ಕಳುಹಿಸಲು ಏರ್ ಟೆಲ್ ನಿಂದ ವಿಶೇಷ ಕೂಪನ್

  By ಸುನಿ
  |

  ಕಾಲಿವುಡ್ ನ 'ತಲೈವಾ' ಸೂಪರ್ ಸ್ಟಾರ್ ರಜನಿಕಾಂತ್ ಅವರ ಈ ವರ್ಷದ ಬಹುನಿರೀಕ್ಷಿತ 'ಕಬಾಲಿ' ಸಿನಿಮಾ ಬಿಡುಗಡೆಗೆ ಮುನ್ನವೇ ಇಡೀ ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದ್ದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದಾಗ ನಾ ಮುಂದು-ತಾ ಮುಂದು ಅಂತ ಒಂದರ ಮೇಲೊಂದು ಕಂಪೆನಿಗಳು ಪ್ರಚಾರಕ್ಕೆ ಮುಂದೆ ಬರುತ್ತಿವೆ.

  ಮೊನ್ನೆ ಮೊನ್ನೆ ಏರ್ ಏಷ್ಯಾದವರು 'ಕಬಾಲಿ' ಚಿತ್ರದ ಪ್ರಚಾರ ರಾಯಭಾರಿಯಾಗಿ ಸುಮಾರು 6 ವಿಮಾನಗಳನ್ನು ಚಿತ್ರಕ್ಕಾಗಿ ಮೀಸಲಿಟ್ಟಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಲು ಬಯಸುವ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿಸಿ ವಿಮಾನದಲ್ಲಿ ಸಂಚರಿಸುವ ಅವಕಾಶವನ್ನು ಏರ್ ಏಷ್ಯಾ ಕಂಪೆನಿಯವರು ಒದಗಿಸಿದ್ದರು.[ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು]

  ಇದೀಗ ಅಂತಹದೇ ಹೊಸ ಸಾಹಸಕ್ಕೆ ಭಾರತೀಯ ಏರ್ ಟೆಲ್ ಕಂಪೆನಿ ಮತ್ತು ಪಿವಿಆರ್ ಸಿನಿಮಾಸ್ ಜಂಟಿಯಾಗಿ ಕೈ ಹಾಕಿದೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

  ವಿಶೇಷ ರಿಚಾರ್ಜ್ ಕೂಪನ್

  ವಿಶೇಷ ರಿಚಾರ್ಜ್ ಕೂಪನ್

  'ಕಬಾಲಿ' ಚಿತ್ರದ ನಿರ್ಮಾಪಕರ ಜೊತೆ ಕೈ ಜೋಡಿಸಿರುವ ಪರಿಣಾಮ ಇದೀಗ ಏರ್ ಟೆಲ್ ಗ್ರಾಹಕರಿಗೆ ವಿಶೇಷ ರಿಚಾರ್ಜ್ ಕೂಪನ್ ಹಾಗೂ ಅದರಲ್ಲಿ ಅನ್ ಲಿಮಿಟೆಡ್ 2ಜಿ ಇಂಟರ್ ನೆಟ್, 'ಕಬಾಲಿ' ಹಲೋ ಟ್ಯೂನ್, ಮತ್ತು 'ಕಬಾಲಿ' ಬ್ರಾಂಡೆಡ್ ಸಿಮ್ ಕಾರ್ಡ್ ಪ್ಯಾಕ್ ಉಚಿತವಾಗಿ ದೊರೆಯಲಿದೆ.['ಕಬಾಲಿ' ಸೆನ್ಸಾರ್ ಆಯ್ತು: ರಿಲೀಸ್ ಡೇಟ್ ಕೂಡ ಫಿಕ್ಸ್ ಆಯ್ತು.!]

  ರಜನಿಕಾಂತ್ ಅವರಿಗೆ SMS

  ರಜನಿಕಾಂತ್ ಅವರಿಗೆ SMS

  ಈ ವಿಶೇಷ ಉಚಿತ ಸಿಮ್ ಕಾರ್ಡ್ ಬಳಸಿದವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ವಿಶೇಷ ಸಂದೇಶ ಕಳುಹಿಸುವ ಮೂಲಕ ನೇರವಾಗಿ ಶುಭಾಶಯ ತಿಳಿಸಬಹುದು.[ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್]

  ರಜನಿಗೆ ಗಿಫ್ಟ್

  ರಜನಿಗೆ ಗಿಫ್ಟ್

  ಗ್ರಾಹಕರಿಂದ ಬಂದ ಎಸ್.ಎಂ.ಎಸ್ ಗಳನ್ನು ಪುಸ್ತಕವೊಂದರಲ್ಲಿ ಸಂಗ್ರಹಿಸಿ ಏರ್ ಟೆಲ್ ಸಂಸ್ಥೆಯವರು ರಜನಿಕಾಂತ್ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಲಿದ್ದಾರೆ.[ರಜಿನಿಕಾಂತ್ ಜೊತೆ ನಿಂತಿರುವ ಈ ವ್ಯಕ್ತಿ ಯಾರು ಗೊತ್ತಾ?]

  ವಿಶೇಷ 3D ವ್ಯಾನ್

  ವಿಶೇಷ 3D ವ್ಯಾನ್

  ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಏರ್ ಟೆಲ್ ಸಂಸ್ಥೆಯವರು 3D ಹೊಲೊಗ್ರಾಫಿಕ್ ವ್ಯಾನ್ ಅನ್ನು ಬಿಡುಗಡೆ ಮಾಡಿದ್ದು, ಈ ವ್ಯಾನ್ ನಲ್ಲಿ ಚಿತ್ರದ ಟೀಸರ್ ಹಾಗೂ ಚಿತ್ರದ ಕಲಾವಿದರು ಮಾತನಾಡಿರುವ ಬೈಟ್ ಗಳು ಒಳಗೊಂಡಿದೆ. ಈ ವ್ಯಾನ್ ಇಡೀ ತಮಿಳುನಾಡಿನಲ್ಲಿ ಸಂಚರಿಸಿ ಪ್ರಚಾರ ಕೈಗೊಳ್ಳಲಿವೆ.

  ಪಿವಿಆರ್ ಕೊಡುಗೆ

  ಪಿವಿಆರ್ ಕೊಡುಗೆ

  ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಕೂಡ 'ಕಬಾಲಿ' ಚಿತ್ರದ ಅಧೀಕೃತ ಸಹಭಾಗಿತ್ವ ವಹಿಸಿಕೊಂಡಿದ್ದು, ಚಿತ್ರದ ಎಕ್ಸ್ ಕ್ಲ್ಯೂಸಿವ್ ಡಿಜಿಟಲ್ ಪೋಸ್ಟರ್ ಗಳನ್ನು ಪಿವಿಆರ್ ವೆಬ್ ಸೈಟ್ ಗಳಿಂದ ಪಡೆಯಬಹುದು. ಜೊತೆಗೆ 'ಕಬಾಲಿ' ವಾಣಿಜ್ಯ ಮಾರಾಟ ಹಕ್ಕನ್ನು ಕೂಡ ಪಿವಿಆರ್ ಒಳಗೊಂಡಿದೆ.

  ಮುಂದಿನ ವಾರ ತೆರೆಗೆ

  ಮುಂದಿನ ವಾರ ತೆರೆಗೆ

  ಈಗಾಗಲೇ ಚಿತ್ರಕ್ಕೆ 'ಯು' ಪ್ರಮಾಣಪತ್ರ ದೊರೆತಿದ್ದು, ಜುಲೈ 22ಕ್ಕೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ. ಚಿತ್ರದಲ್ಲಿ ಕನ್ನಡದ ಕುವರ ಕಿಶೋರ್ ಅವರು ಖಳನಟನಾಗಿ ಮಿಂಚಿದ್ದು, ರಾಧಿಕಾ ಆಪ್ಟೆ ಅವರು ರಜನಿ ಅವರಿಗೆ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಪಾ ರಂಜಿತ್ ಅವರು ಆಕ್ಷನ್-ಕಟ್ ಹೇಳಿದ್ದಾರೆ.

  English summary
  After AirAsia, Actor Rajinikanth starrer 'Kabali' has tied up with telecom operator Bharti Airtel and multiplex operator PVR, with exclusive offers and merchandise to woo fans. Actor Rajinikanth, Actress Radhika Apte in the lead role. Movie is directed by Pa Ranjith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X