»   » ಗುರುವಾರದಿಂದಲೇ ಕೋಮಲ್ ಪ್ಯಾರ್ಗೆ ಶುರು

ಗುರುವಾರದಿಂದಲೇ ಕೋಮಲ್ ಪ್ಯಾರ್ಗೆ ಶುರು

Posted By:
Subscribe to Filmibeat Kannada

ಇದೇ ಗುರುವಾರ (ಸೆ.5)ದಿಂದಲೇ ಸೆನ್ಸೇಷನಲ್ ಸ್ಟಾರ್ ಕೋಮಲ್ ಚಿತ್ರಮಂದಿರಗಳಲ್ಲಿ ಪಾರ್ಗೆ ಶುರುವಚ್ಚಿಕೊಳ್ಳುತ್ತಿದ್ದಾರೆ. ಅಂದರೆ ಕೋಮಲ್ ಹಾಗೂ ಪಾರುಲ್ ಯಾದವ್ ಅಭಿನಯದ 'ಪ್ಯಾರ್ಗೆ ಆಗ್ಬಿಟೈತೆ' ಚಿತ್ರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. 'Love is Beautiful' ಎಂಬುದು ಚಿತ್ರದ ಅಡಿಬರಹ.

ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಪ್ರೇಮ ಕಥಾನಕ. ಸೆನ್ಸೇಷನಲ್ ನಟ ಕೋಮಲ್ ಈ ಬಾರಿ ತನ್ನ ನೆಚ್ಚಿನ ಹುಡುಗಿಗಾಗಿ ಏನೆಲ್ಲಾ ಟ್ರಿಕ್ಸ್ ಮಾಡುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಬೇಕು.


ಇಬ್ಬರು ಭಿನ್ನ ಮನೋಭಾವದವರ ಪ್ರೇಮ ಕಥೆ ಇದು. ಆದರೆ ಇಬ್ಬರೂ ಲವ್ ಈಸ್ ಬ್ಯೂಟಿಫುಲ್ ಎಂಬ ಮಾತಿಗೆ ಮಾತ್ರ ಬದ್ಧರಾಗಿರುತ್ತಾರೆ. ರಕ್ಷಿತ ಫಿಲಂಸ್ ಲಾಂಛನದಲ್ಲಿ ಶೋಭಾ ಪ್ರಕಾಶ್ ನಿರ್ಮಿಸಿರುವ ಚಿತ್ರ ಇದು.

ಕೋಮಲ್ ನಾಯಕರಾಗಿ ಅಭಿಯಿಸಿರುವ ಈ ಚಿತ್ರದ ನಾಯಕಿ ಪ್ರಾರ್ಥನಾ. ಕವಿನ್ ಬಾಲ ಈ ಚಿತ್ರದ ನಿರ್ದೇಶಕರು. ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿ ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿರುವ ಅನುಭವ ನಿರ್ದೇಶಕರಿಗಿದೆ.

ಕವಿನ್ ಬಾಲ ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಬಾಲ ಭರಣಿ ಅವರ ಛಾಯಾಗ್ರಹಣವಿದೆ. ಧರ್ಮತೇಜ ಸಂಗೀತ ನಿರ್ದೇಶನ ಹಾಗೂ ಸುರೇಶ್‍ ಅರಸ್ ಸಂಕಲನವಿರುವ ಈ ಚಿತ್ರಕ್ಕೆ ಕೇಶವಾದಿತ್ಯ(ರಾಮಜೋಗಿಹಳ್ಳಿ) ಸಂಭಾಷಣೆ ಬರೆದಿದ್ದಾರೆ.

ಚಿತ್ರದ ಪಾತ್ರವರ್ಗದಲ್ಲಿ ಕೋಮಲ್ ಜೊತೆ ಪ್ರಾರ್ಥನಾ, ಅಕುಲ್ ಬಾಲಾಜಿ, ರಂಗಾಯಣ ರಘು ಮುಂತಾದವರಿದ್ದಾರೆ. ಈ ಚಿತ್ರದ ಕೋಮಲ್ ಅವರ ವೃತ್ತಿ ಬದುಕಿನಲ್ಲೂ ಮಹತ್ವವಾದ ಚಿತ್ರ. ಈ ಚಿತ್ರದ ಸೋಲು ಗೆಲುವು ಅವರ ಮುಂದಿನ ಪಯಣದ ಮೇಲೂ ಪರಿಣಾಮ ಬೀರಲಿದೆ. (ಒನ್ಇಂಡಿಯಾ ಕನ್ನಡ)

English summary
Sensational star Komal invites you to fall in LOVE! Watch Komal's romantic side as he says 'Love is beautiful'! The film highlights the love story between a boy and girl from different cities... while their likes, dislikes, upbringing, habits may all be different, they share one common belief -'Love is beautiful'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada