»   » ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.?

ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.?

Posted By:
Subscribe to Filmibeat Kannada
Rachita Ram, Kannada Actress speaks about her Dream Boy | Filmibeat Kannada

ನಟಿ ರಾಧಿಕಾ ಪಂಡಿತ್, ನಟಿ ರಮ್ಯಾ ಬಾರ್ನಾ, ನಟಿ ಸಿಂಧು ಲೋಕನಾಥ್ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಯ್ತು. ಇವರ ಸಾಲಿಗೆ ನಟಿ ರಚಿತಾ ರಾಮ್ ಕೂಡ ಸೇರ್ತಾರೆ ಎಂಬುದೇ ಸದ್ಯದ ಗುಲ್ಲು.

'ಗೌಪ್ಯತೆ' ಕಾಪಾಡುತ್ತಿರುವ ರಚಿತಾ ರಾಮ್ ಹಿಂದಿದ್ಯಾ ಕೆಟ್ಟ ಅನುಭವ.?

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಿಯಲ್ ಸ್ಟಾರ್ ಉಪೇಂದ್ರ ಜೊತೆ ತೆರೆಹಂಚಿಕೊಂಡಿರುವ ನಟಿ ರಚಿತಾ ರಾಮ್ ವೈವಾಹಿಕ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರಂತೆ ಎಂಬ ಅಂತೆ-ಕಂತೆ ಎಲ್ಲೆಡೆ ಹರಿದಾಡುತ್ತಿದೆ. ಇದು ನಿಜವೇ.?

ರಚಿತಾ ರಾಮ್ ಇಷ್ಟ ಪಡುವ ಹುಡುಗ ಸಿಕ್ಕಿದ್ದಾನಾ.? ರಚಿತಾ ರಾಮ್ ಡ್ರೀಮ್ ಬಾಯ್ ಹೇಗಿರಬೇಕು .? ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ರಚಿತಾ ರಾಮ್ ಉತ್ತರಿಸಿದ್ದಾರೆ. ಮುಂದೆ ಓದಿರಿ...

ಮದುವೆ ಪ್ಲಾನ್ ನಲ್ಲಿದ್ದಾರಾ ರಚಿತಾ.?

'ಉಪ್ಪಿ-ರುಪಿ', 'ಅಯೋಗ್ಯ' ಸೇರಿದಂತೆ ಸಿನಿಮಾಗಳಲ್ಲಿಯೇ ಬಿಜಿಯಾಗಿರುವ ನಟಿ ರಚಿತಾ ರಾಮ್ ಮದುವೆ ಬಗ್ಗೆ ಯಾವುದೇ ಪ್ಲಾನ್ ಮಾಡಿಲ್ಲ. ಆದ್ರೆ, 'ಒಳ್ಳೆಯ ಹುಡುಗ ಸಿಕ್ಕರೆ ತಕ್ಷಣ ಮದುವೆ ಆಗುವೆ' ಎಂದು ಹೇಳಲು ರಚಿತಾ ರಾಮ್ ಮರೆಯೋಲ್ಲ.

ನಮ್ಮ ಕೈಯಲ್ಲಿ ಇಲ್ಲ

''ದಯವಿಟ್ಟು ಇಷ್ಟು ಬೇಗ ಮದುವೆ ಆಗಬೇಡಿ ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದ್ರೆ ಮದುವೆ ಅನ್ನೋದು ನಮ್ಮ ಕೈಯಲ್ಲಿ ಇಲ್ಲ. ಅದು ಯಾವಾಗ ಆಗಬೇಕೋ, ಅಗ ಆಗುತ್ತೆ. ಒಳ್ಳೆ ಹುಡುಗ ಸಿಕ್ಕರೆ ಖಂಡಿತ ಆಗುವೆ'' ಎನ್ನುತ್ತಾರೆ ನಟಿ ರಚಿತಾ ರಾಮ್.

ರಚಿತಾ ಡ್ರೀಮ್ ಬಾಯ್ ಹೇಗಿರಬೇಕು.?

ಸಂಪ್ರದಾಯಸ್ಥ ಹಾಗೂ ತುಂಬು ಕುಟುಂಬದ ಹುಡುಗ ಬೇಕಂತೆ ನಟಿ ರಚಿತಾ ರಾಮ್ ಗೆ.!

ತುಂಬು ಮನೆಯ ಸೊಸೆ ಆಗಬೇಕು.!

''ಸಂಪ್ರದಾಯಸ್ಥ ಮನೆಯ ಹುಡುಗ ಬೇಕು. ಜಾಯಿಂಟ್ ಫ್ಯಾಮಿಲಿ ಇರಬೇಕು. ತುಂಬು ಮನೆಯ ಸೊಸೆ ಆಗಿ ಹೋಗಬೇಕು'' ಅಂತಾರೆ ನಟಿ ರಚಿತಾ ರಾಮ್.

ಮದುವೆ ನಂತರ ಸಿನಿಮಾ ಮಾಡಲ್ವಂತೆ.!

''ಮದುವೆ ಆದ್ಮೇಲೆ ಸಿನಿಮಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಎನ್ನುತ್ತಾರೆ ರಚಿತಾ ರಾಮ್.

English summary
Dimple Queen Rachita Ram has revealed the qualities that her dream boy should have.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada