twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್ ನೋಡಿದ್ಮೇಲೆ ಆ ನಿರ್ಧಾರಕ್ಕೆ ಬಂದಿದ್ದು'- ಆರ್ ಚಂದ್ರು

    |

    ಕೆಜಿಎಫ್ ಕೆಜಿಎಫ್ ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದರು. ನಟ ಯಶ್ ಅವರನ್ನು ನ್ಯಾಷನಲ್ ಸ್ಟಾರ್ ಮಾಡಿದ ಸೂಪರ್ ಹಿಟ್ ಚಿತ್ರ. ಕೆಜಿಎಫ್ ಬಿಡುಗಡೆ, ಮಾರ್ಕೆಟಿಂಗ್, ಕಲೆಕ್ಷನ್ ಎಲ್ಲವೂ ಸ್ಯಾಂಡಲ್ ವುಡ್ ಪಾಲಿಗೆ ದಾಖಲೆ ಹಾಗೂ ಹೊಸ ಟ್ರೆಂಡ್ ಸೃಷ್ಟಿಯಾಯಿತು.

    Recommended Video

    DIRECTORS DIARY : ಪ್ರಶಾಂತ್ ನೀಲ್ KGF ಮಾಡಿದ್ದಾರೆ ಅಂದ್ರೆ ನನ್ ಕಯ್ಯಲ್ಲಿ ಆಗಲ್ವ | Filmibeat Kannada

    ಇಂತಹ ಹಿಟ್ ಚಿತ್ರದ ನೋಡಿದ್ಮೇಲೆ ಆರ್ ಚಂದ್ರು ತಮ್ಮ ಕನಸನ್ನು ವಿಸ್ತರಿಸಿದರು ಎಂದು 'ಫಿಲ್ಮಿಬೀಟ್ ಡೈರೆಕ್ಟರ್ ಡೈರಿ'ಯಲ್ಲಿ ಹೇಳಿಕೊಂಡಿದ್ದಾರೆ. 'ಉಗ್ರಂ' ಅಂತ ಒಂದು ಸಿನಿಮಾ ಮಾಡಿದ್ದ ಪ್ರಶಾಂತ್ ನೀಲ್ ಕೆಜಿಎಫ್ ಮಾಡಿ ಇಡೀ ಭಾರತ ತಿರುಗಿ ನೋಡುವಂತೆ ಮಾಡ್ತಾರೆ, ಹನ್ನೊಂದು ಚಿತ್ರ ಮಾಡಿರುವ ಚಂದ್ರು ಇನ್ನೂ ಹೆಚ್ಚಿನದು ಮಾಡಬೇಕು'' ಎಂಬ ಹಠ ಹುಟ್ಟಿಕೊಂಡಿತಂತೆ. ಮುಂದೆ ಓದಿ...

    'ಕೆಜಿಎಫ್' ನೋಡಿ ಹಠಕ್ಕೆ ಬಿದ್ದ ಚಂದ್ರು

    'ಕೆಜಿಎಫ್' ನೋಡಿ ಹಠಕ್ಕೆ ಬಿದ್ದ ಚಂದ್ರು

    ಕೆಜಿಎಫ್ ಚಿತ್ರದ ಯಶಸ್ಸು, ಗಳಿಕೆ, ಟ್ರೆಂಡ್ ನೋಡಿದ ಆರ್ ಚಂದ್ರು ಅದನ್ನು ಮೀರಿಸುವಂತೆ ಏನಾದರೂ ಮಾಡಬೇಕು ಎಂಬ ಸಂಕಲ್ಪ ಮಾಡಿಕೊಂಡರು. ಆಗ ಹುಟ್ಟಿಕೊಂಡಿದ್ದೆ 'ಕಬ್ಜ' ಚಿತ್ರ ಎಂದು ಚಂದ್ರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?

    ಏಳು ಭಾಷೆಯಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಬೇಕು

    ಏಳು ಭಾಷೆಯಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಬೇಕು

    ಇಷ್ಟು ದಿನ ಮಾಡಿದ ಚಿತ್ರಗಳನ್ನು ಬಿಟ್ಟು, ಇನ್ನೊಂದು ಲವೆಲ್‌ಗೆ ಸಿನಿಮಾ ಮಾಡಬೇಕು ಎಂದು ಮನಸ್ಸು ಮಾಡಿದ ಆರ್ ಚಂದ್ರು, ಈ ವರ್ಷದ ಟಾರ್ಗೆಟ್ ಏಳು ಭಾಷೆಗಳಲ್ಲಿ ಮುಂದಿನ ಸಿನಿಮಾ ಬಿಡುಗಡೆಯಾಗಬೇಕು ಎಂದು ಡೈರಿಯಲ್ಲಿ ಬರೆದುಕೊಂಡರಂತೆ. ಭಾರತ ಚಿತ್ರರಂಗವನ್ನು ಕಬ್ಜ ಮಾಡಬೇಕು ಎಂದು ನಿರ್ಧರಿಸಿ ತಯಾರಿಸುತ್ತಿರುವ ಚಿತ್ರ ಕಬ್ಜ ಎಂದು ಹೇಳಿದ್ದಾರೆ.

    1945 ರೌಡಿಸಂ ಕಥೆ

    1945 ರೌಡಿಸಂ ಕಥೆ

    ಇದಕ್ಕೂ ಮುಂಚೆ ಹಲವು ರೌಡಿಸಂ ಚಿತ್ರಗಳು ಬಂದಿವೆ, ಆದ್ರೆ, ಇದಾದ ಮೇಲೆ ಇನ್ನೊಂದು ರೌಡಿಸಂ ಅಂತ ಇರಬಾರದು ಎಂಬ ದೃಢನಿರ್ಧಾರಕ್ಕೆ ಬಂದ ಚಂದ್ರು, 1945ರ ಅಂಡರ್‌ವರ್ಲ್ಡ್ ಕಥೆ ಮಾಡ್ತಾರೆ. ಅದನ್ನು ಉಪೇಂದ್ರ ಅವರ ಬಳಿ ಹೇಳಿದಾಗ ಉಪ್ಪಿ ಸಖತ್ ಥ್ರಿಲ್ ಆಗ್ತಾರಂತೆ.

    ಆರ್ ಚಂದ್ರು ಜೀವನದಲ್ಲಿ ದೊಡ್ಡ ಬಿಸಿನೆಸ್ ಮಾಡಿದ್ದು 'ಬ್ರಹ್ಮ' ಚಿತ್ರ!ಆರ್ ಚಂದ್ರು ಜೀವನದಲ್ಲಿ ದೊಡ್ಡ ಬಿಸಿನೆಸ್ ಮಾಡಿದ್ದು 'ಬ್ರಹ್ಮ' ಚಿತ್ರ!

    ಇದು ಚಂದ್ರು ಚಾಪ್ಟರ್ 2

    ಇದು ಚಂದ್ರು ಚಾಪ್ಟರ್ 2

    ''ಇಷ್ಟು ದಿನ ಚಂದ್ರು ಒಬ್ಬನೇ ಸಿನಿಮಾ ಮಾಡ್ತಿದ್ದ. ಸಮಾಜಕ್ಕೆ ಸಂದೇಶ ಸಾರುವ ಕಥೆಗಳು, ನಿರ್ಮಾಪಕರು ಸೇಫ್ ಆಗಬೇಕು, ನನ್ನನ್ನು ನಂಬಿದ ತಂಡ ಸೇಫ್ ಆಗಬೇಕು ಅಂತ ಸಿನಿಮಾ ಮಾಡಿದ್ದೆ. ಆದ್ರೆ, ಇನ್ನೊಂದು ಚಂದ್ರು ನನ್ನಲ್ಲಿ ಇದ್ದಾನೆ. ಒಂದು ತಂಡವಾಗಿ ಕೆಲಸ ಮಾಡ್ತಾನೆ, ಬೇರೆ ಲವೆಲ್‌ಗೆ ಚಂದ್ರು ಸಿನಿಮಾ ಬರುತ್ತೆ'' ಎಂದು ಕಬ್ಜ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.

    English summary
    Director R Chandru inspired by Prashanth Neel KGF movie. then he had decide to do multi language movie like Kabza.
    Monday, October 5, 2020, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X