»   » ನಿಮ್ಗೂ ಸ್ಫೂರ್ತಿ ನೀಡಬಹುದು R J ವಿನಾಯಕ್ ಜೋಷಿ ಅವರ ಈ 7 ಕಥೆಗಳು.!

ನಿಮ್ಗೂ ಸ್ಫೂರ್ತಿ ನೀಡಬಹುದು R J ವಿನಾಯಕ್ ಜೋಷಿ ಅವರ ಈ 7 ಕಥೆಗಳು.!

Posted By:
Subscribe to Filmibeat Kannada

ಆರ್ ಜೆ ವಿನಾಯಕ್ ಜೋಷಿ ಈಗ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ನಟ, ಆರ್ ಜೆ ಆಗಿರುವ ಇವರು ಈಗ ಹೊಸ ವೆಬ್ ಸೀರಿಸ್ ಶುರು ಮಾಡಿದ್ದಾರೆ. 'ಜೋಶಿಲೇ' ಎಂಬ ಹೆಸರಿನಲ್ಲಿ ಬರುತ್ತಿರುವ ವೆಬ್ ಸೀರಿಸ್ ಅನೇಕರಿಗೆ ಸ್ಫೂರ್ತಿ ನೀಡಲಿದೆ.

'ಜೋಶಿಲೇ' ವೆಬ್ ಸೀರಿಸ್ ಗಾಗಿ ಟೀಸರ್ ಒಂದನ್ನ ರೆಡಿ ಮಾಡಿದ್ದು, ನಟ ರಮೇಶ್ ಅರವಿಂದ್ ಟೀಸರ್ ಲಾಂಚ್ ಮಾಡಿದ್ದರು. ಕನ್ನಡದಲ್ಲಿ ಈಗ ವೆಬ್ ಸೀರಿಸ್ ಗಳ ಟ್ರೆಂಡ್ ಶುರುವಾಗುತ್ತಿದ್ದು, 'ಜೋಶಿಲೇ' ಕೂಡ ಅದಕ್ಕೆ ಸೇರಿಕೊಂಡಿದೆ. ಈ ಸೀರಿಸ್ ನಲ್ಲಿ ಮುಖ್ಯವಾಗಿ 7 ಕಥೆಗಳು ಇರಲಿದೆ.

R J Vinayak Joshi's 'Joshelay' Webseries

ಒಂದು ಸಣ್ಣ ಕಥೆ... ಒಂದು ಸಣ್ಣ ಘಟನೆ... ಒಬ್ಬರ ಜೀವನವನ್ನೇ ಬದಲಿಸುವ ತಾಕತ್ತು ಹೊಂದಿರುತ್ತದೆ. ಅದೇ ರೀತಿ 'ಜೋಶಿಲೇ' ವೆಬ್ ಸೀರಿಸ್ ಸಹ ಸ್ಫೂರ್ತಿದಾಯಕ ಕಥೆಗಳನ್ನು ಒಳಗೊಂಡಿದೆ. ಈ ಕಥೆಗಳಲ್ಲಿ ಕೊನೆಯ ಕಥೆ ವಿನಾಯಕ್ ಜೋಷಿ ಅವರದ್ದೇ ಆಗಿರಲಿದೆ ಎನ್ನುವುದು ವಿಶೇಷ.

R J Vinayak Joshi's 'Joshelay' Webseries

'ಜೋಶಿಲೇ' ವೆಬ್ ಸೀರಿಸ್ 'ಸಖತ್ ಸ್ಟುಡಿಯೋ' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಹೊರಬರಲಿದೆ. ವೆಬ್ ಸೀರಿಸ್ ಗಳನ್ನು ಹೆಚ್ಚಾಗಿ ಮನರಂಜನೆ ಉದ್ದೇಶದಿಂದ ಮಾಡಿರುತ್ತಾರೆ. ಆದರೆ, ವಿನಾಯಕ್ ಜೋಷಿ ಏಳು ಡಿಫರೆಂಟ್ ಕಥೆಗಳ ಮೂಲಕ ಅನೇಕರಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುವುದಕ್ಕೆ ಹೊರಟಿದ್ದಾರೆ.

'ಜೋಶಿಲೇ' ಟೀಸರ್ ವಿಡಿಯೋ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ, ನೋಡಿ...

English summary
R J Vinayak joshi to start 'Joshelay' Webseries - A series of inspirational stories.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada